ಟೊಯೊಟಾ ಕಿರ್ಲೊಸ್ಕರ್ ಮಾರಾಟ ದ್ವಿಗುಣ

ಕಂಪನಿಯ ಮಾರಾಟ ಹೆಚ್ಚಳಕ್ಕೆ ಟೊಯೊಟಾ ಎಟಿಯೋಸ್ ಮತ್ತು ಲಿವಾ ಕಾರುಗಳಿಗೆ ಗ್ರಾಹಕರಿಂದ ಅತ್ಯಧಿಕ ಬೇಡಿಕೆ ಬಂದದ್ದೇ ಕಾರಣ. ಹೆಚ್ಚಿನ ಕಾರು ಕಂಪನಿಗಳು ಮಾರಾಟ ಇಳಿಕೆಯಿಂದ ಕಂಗಲಾಗಿದ್ದರೆ ಟೊಯೊಟಾ ಕಿರ್ಲೊಸ್ಕರ್ ಮುಖದಲ್ಲಿ ಮಂದಹಾಸ ಮೂಡಿದೆ.
"ಪ್ರಮುಖವಾಗಿ ಎಟಿಯೋಸ್ ಕಾರುಗಳಿಗೆ ಗ್ರಾಹಕರಿಂದ ಅತ್ಯುತ್ತಮ ಬೇಡಿಕೆ ಬಂದಿದೆ. ಗ್ರಾಹಕರು ಬ್ರಾಂಡ್ ಮೇಲೆ ಇಟ್ಟ ಭರವಸೆ ಮಾರಾಟ ಹೆಚ್ಚಳಕ್ಕೆ ಪ್ರಮುಖ ಕಾರಣ. ನವೆಂಬರ್ ತಿಂಗಳಲ್ಲಿ ಸುಮಾರು 8,271 ಎಟಿಯೋಸ್ ಸೀರಿಸ್ ಕಾರು ಮಾರಾಟವಾಗಿದೆ" ಎಂದು ಕಂಪನಿಯ ಸಹನಿರ್ದೇಶಕ ಸಂದೀಪ್ ಸಿಂಗ್ ಹೇಳಿದ್ದಾರೆ.
ಕಳೆದ ತಿಂಗಳು ಕಂಪನಿಯು 3,943 ಎಟಿಯೋಸ್ ಸೆಡಾನ್ ಮತ್ತು 4,328 ಲಿವಾ ಹ್ಯಾಚ್ ಬ್ಯಾಕ್ ಕಾರುಗಳನ್ನು ಮಾರಾಟ ಮಾಡಿದೆ. ಇದೇ ಸಮಯದಲ್ಲಿ ಸುಮಾರು 4,308 ಟೊಯೊಟಾ ಇನ್ನೋವಾ ಕಾರುಗಳು ಮಾರಾಟವಾಗಿದೆ.


Click it and Unblock the Notifications








