ಸ್ಕೋಡಾ ಬೇಸಿಗೆ ಶಿಬಿರ: ಕಾರಿದ್ದವರು ಬನ್ನಿ

ಫೋಕ್ಸ್ ವ್ಯಾಗನ್ ಸಮೂಹದ ಜೆಕ್ ಗಣರಾಜ್ಯದ ಕಾರು ಕಂಪನಿ ಸ್ಕೋಡಾ ಬೇಸಿಗೆ ಶಿಬಿರಕ್ಕೆ ದಿನಗಣನೆ ಆರಂಭವಾಗಿದೆ. ಕಂಪನಿಯು ತನ್ನ ಗ್ರಾಹಕರ ಕಾರು ಚೆಕಪ್ ಗಾಗಿ ವಿಶೇಷ ಬೇಸಿಗೆ ಶಿಬಿರವನ್ನು ಏಪ್ರಿಲ್ ಎರಡರಿಂದ ಆರಂಭಿಸಲಿದೆ. ಈ ಶಿಬಿರವು ಏಪ್ರಿಲ್ 30ರಂದು ಕೊನೆಗೊಳ್ಳಲಿದ್ದು, ಸ್ಕೋಡಾ ಕಾರಿದ್ದವರು ಸಾವಧಾನವಾಗಿ ಆಗಮಿಸಬಹುದಾಗಿದೆ.

ಬೇಸಿಗೆ ಶಿಬಿರದಲ್ಲಿ ಕಂಪನಿಯು ಕಾರಿನ ಏಸಿ, ಟೈರ್, ಬ್ರೇಕ್ ಸಿಸ್ಟಮ್ ಇತ್ಯಾದಿ ಹದಿನೈದು ಪಾಯಿಂಟ್ ಗಳನ್ನು ಉಚಿತವಾಗಿ ಪರಿಶೀಲಿಸಲಿದೆ. ಇದರೊಂದಿಗೆ ಕಂಪನಿಯು ಕ್ಲಚ್, ಸ್ಟಿಯರಿಂಗ್, ಎಲೆಕ್ಟ್ರಿಕಲ್ ಫಿಟ್ಟಿಂಗ್ ಮತ್ತು ವೀಲ್ ರಿಮ್ ಗಳನ್ನು ಚೆಕಪ್ ಮಾಡಲಿದೆ.

ಒಂದು ತಿಂಗಳ ಕಾಲ ನಡೆಯಲಿರುವ ಬೇಸಿಗೆ ಶಿಬಿರಕ್ಕೆ ಸುಮಾರು 28 ಸಾವಿರ ಗ್ರಾಹಕರು ಆಗಮಿಸುವ ನಿರೀಕ್ಷೆ ಕಂಪನಿಯದ್ದು. ಈ ಹಿಂದೆ ಕಂಪನಿಯು ಮಾನ್ಸೂನ್ ಕಾರು ಕೇರ್ ಕ್ಯಾಂಪ್ ಆಯೋಜಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ಸ್ಕೋಡಾ ಕಂಪನಿಯು ಈಗ ದೇಶದಲ್ಲಿ ಹ್ಯಾಚ್ ಬ್ಯಾಕ್ ಆವೃತ್ತಿ ಫಾಬಿಯಾ, ಎಂಟ್ರಿ ಲೆವೆಲ್ ಸೆಡಾನ್ ಕಾರು ರಾಪಿಡ್, ಎಕ್ಸಿಕ್ಯೂಟಿವ್ ಲೆವೆಲ್ ಕಾರು ಲೌರಾ, ಕ್ರಾಸೊವರ್ ಕಾರು ಯೆಟಿ ಮತ್ತು ಪ್ರೀಮಿಯಂ ಸೆಡಾನ್ ಕಾರು ಸೂಪರ್ಬ್ ಮಾರಾಟ ಮಾಡುತ್ತಿದೆ. (ಕನ್ನಡ ಡ್ರೈವ್ ಸ್ಪಾರ್ಕ್)

Most Read Articles

Kannada
English summary
Skoda Inida conducting a complementary Summer check up camp for its customers. The camp will begin from the 2nd of April till 30th across all Skoda authorized dealerships across the country.Skoda currently sells 5 cars in India - the Fabia hatch back, Rapid entry-level sedan, Laura executive-level sedan, Yeti
Story first published: Wednesday, March 21, 2012, 11:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X