ರೇಂಜ್ ರೋವರ್ ಲಾಂಚ್; ನಿಮ್ಮ ರೇಂಜ್‌ ಎಷ್ಟು?

Posted By:

ಟಾಟಾ ಮೋಟಾರ್ಸ್ ಮಾಲಿಕತ್ವದ ರೇಂಜ್ ರೋವರ್ ಭಾರತದಲ್ಲಿ ನಾಲ್ಕನೇ ಜನರೇಷನ್ ಕಾರೊಂದನ್ನು ಪರಿಚಯಿಸಿದೆ. ಈ ಪ್ರೀಮಿಯಂ ಎಸ್‌ಯುವಿ ಕಾರಿನ ದರ ಬರೋಬ್ಬರಿ 1.73 ಕೋಟಿ ರುಪಾಯಿಗಳಾಗಿವೆ. ಹಾಗಾಗಿ ಆರಂಭದಲ್ಲೇ ನಿಮ್ಮ ರೇಂಜ್ ಎಷ್ಟು ಎಂಬುದಾಗಿ ನಾವು ಪ್ರಶ್ನಿಸಿರುತ್ತೇವೆ.

40 ವರ್ಷಗಳಿಂದೀಚೆಗಿರುವ ಅದೇ ಸಾಂಪ್ರದಾಯಿಕ ವಿನ್ಯಾಸ ಉಳಿಸಿಕೊಳ್ಳುವ ಮೂಲಕ ನಾಲ್ಕನೇ ತಲೆಮಾರಿನ ರೇಂಜ್ ರೋವರ್ ಅಭಿವೃದ್ಧಿಪಡಿಸಲಾಗಿದೆ. ಹೊಸ ರೇಂಜ್ ರೋವರ್ ಲೈಟ್ ವೇಟ್ ಅಲ್ಯೂಮಿನಿಯಂ ಬಾಡಿ ಹೊಂದಿದ ವಿಶ್ವದ ಮೊದಲ ಎಸ್‌ಯುವಿ ಕಾರೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪರಿಷ್ಕೃತ ಲಗ್ಷುರಿ ಕಾರು ಸುಧಾರಿತ ನಿರ್ವಹಣೆ ಹಾಗೂ ಹ್ಯಾಂಡ್ಲಿಂಗ್‌ಗೆ ಕಾರಣವಾಗಿದೆ.

ಎಲ್ಲ ಭೂಪ್ರದೇಶಗಳಿಗೆ ಹೊಂದಿಕೆಯಾಗುವ ರೀತಿಯಲ್ಲಿ ವಿನ್ಯಾಸ, ನಿರ್ವಹಣೆ ಹೊಂದಿರುವ ನೂತನ ರೇಂಜ್ ರೋವರ್ ದೇಶದ ಗ್ರಾಹಕರಿಗೆ ಪ್ರಿಯವಾಗುವ ನಿರೀಕ್ಷೆಯನ್ನು ಜಾಗ್ವಾರ್ ಹಾಗೂ ಲ್ಯಾಂಡ್ ರೋವರ್ ಇಂಡಿಯಾದ ಉಪಾಧ್ಯಕ್ಷರಾಗಿರುವ ರೋಹಿತ್ ಸುರಿ ಹೊಂದಿದ್ದಾರೆ.

ನೂತನ ರೇಂಜ್ ರೋವರ್ ಎಲ್ಲ ಹಂತದಲ್ಲಿಯೂ ಕ್ಲೀನ್ ಹಾಗೂ ಸೊಗಸಾದ ಆಕಾರವನ್ನು ಹೊಂದಿದೆ. ಒಟ್ಟು ಎರಡು ಎಂಜಿನ್ ಆಯ್ಕೆಗಳಲ್ಲಿ ರೇಂಜ್ ರೋವರ್ ಲಭ್ಯವಿದೆ. ಈ ಪೈಕಿ 5 ಲೀಟರ್ 510 ಪಿಎಸ್ ವಿ8 ಹಾಗೂ 4.4 ಲೀಟರ್ 339 ಪಿಎಸ್ ವಿ8 ಡೀಸೆಲ್ ಎಂಜಿನ್‌ಗಳು 8 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದಿರಲಿದೆ.

ಹೊರಂಗಣ ವಿನ್ಯಾಸ ಪರಿಗಣಿಸಿದಾದ ರೇಂಜ್ ರೋವರ್ ಡಿಸೈನ್‌ನಲ್ಲಿ ದೊಡ್ಡ ವ್ಯತ್ಯಾಸ ಕಾಣುತ್ತಿಲ್ಲವಾದರೂ ಸಂಪೂರ್ಣ ಅಲ್ಯೂಮಿನಿಯ ಬಾಡಿ ನಿಜಕ್ಕೂ ಕಾರಿನ ನಿರ್ವಹಣೆಯಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಕಾರಣವಾಗಿದೆ. ನೂತನ ಮಾಡೆಲ್ ಈ ಹಿಂದಿನಕ್ಕಿಂತಲೂ 350 ಕೆ.ಜಿ ಕಡಿಮೆ ಭಾರವಾಗಿದ್ದು ಉತ್ತಮ ಮೈಲೇಜ್ ಹಾಗೂ ನಿರ್ವಹಣೆ ನೀಡಲಿದೆ. ರೇಂಜ್ ರೋವರ್ ಎಸ್‌ಯುವಿ 5 ಮೀಟರ್ ಉದ್ದವಿರುವ ಹೊರತಾಗಿಯೂ 0-100 ಕೀ.ಮೀ ವೇಗತೆಯನ್ನು ಕೇವಲ 5.4 ಸೆಕೆಂಡುಗಳಲ್ಲಿ ವರ್ಧಿಸುವ ಸಾಮರ್ಥ್ಯವನ್ನು ಹೊಂದಿದೆ.

ರೇಂಜ್ ರೋವರ್ ಭಾರತದಲ್ಲಿ ಲಾಂಚ್

ದೇಶದಲ್ಲಿ ರೇಂಜ್ ರೋವರ್ ಇವೊಕ್, ರೇಂಜ್ ರೋವರ್ ಸ್ಪೋರ್ಟ್, ರೇಂಜ್ ರೋವರ್ ಮತ್ತು ಆರ್ಮೊರ್ಡ್ ರೇಂಜ್ ರೋವರ್ ಕಾರುಗಳು ಈಗಾಗಲೇ ಮಾರುಕಟ್ಟೆಯಲ್ಲಿವೆ.

ಪ್ರೀಮಿಯಂ ಫೀಚರ್ಸ್

ಪ್ರೀಮಿಯಂ ಫೀಚರ್ಸ್

ನೂತನ ರೇಂಜ್ ರೋವರ್ ಅತ್ಯಾಧುನಿಕ ಪ್ರೀಮಿಯಂ ಫೀಚರ್‌ಗಳೊಂದಿಗೆ ಆಗಮನವಾಗಿದ್ದು, ಕೀಲೆಸ್ ಎಂಟ್ರಿ, ಸಾಫ್ಟ್ ಡೋರ್ ಕ್ಲೋಸ್ ವಿತ್ ಪವರ್ ಲಾಂಚಿಂಗ್, ಪವರ್ ಅಪ್ಪರ್ ಆಂಡ್ ಪವರ್ ಟೈಲ್‌ಗೇಟ್ಸ್, ಕೂಲರ್ ಕಂಪಾರ್ಟ್‌ಮೆಂಟ್ ಹಾಗೂ ಎಲೆಕ್ಟ್ರಿಕಲಿ ಡಿಪ್ಲಾಯಬಲ್ ಟೊ ಬಾರ್ ಹೊಂದಿದೆ.

ಲೈಟ್‌ವೇಟ್

ಲೈಟ್‌ವೇಟ್

ಸಂಪೂರ್ಣ ಅಲ್ಯೂಮಿನಿಯ ಬಾಡಿ ಟಚ್‌ನೊಂದಿಗೆ ಆಗಮಿಸಿರುವ ನೂತನ ರೇಂಜ್ ರೋವರ್ ಈ ಹಿಂದಿನ ಮಾಡೆಲ್‌ಗಿಂತಲೂ 350 ಕೆ.ಜಿ ಹಗುರವಾಗಿದೆ.

ಆಡಿಯೋ ಸಿಸ್ಟಂ

ಆಡಿಯೋ ಸಿಸ್ಟಂ

ಹೈ ಎಂಡ್ ಆಡಿಯೋ ಎಕ್ಸ್‌ಕ್ಲೂಸಿವ್ ಮೆರಿಡಿಯನ್ ಸೌರಂಡ್ ಸೌಂಡ್ ಸಿಸ್ಟಂ ವಿತ್ ಆಡಿಯೊಫಿಲ್ಲೆ ಕ್ವಾಲಿಟಿ ಸೌಂಡ್

ಟಚ್ ಸ್ಕ್ರೀನ್ ಟಿ.ವಿ ಸಿಸ್ಟಂ

ಟಚ್ ಸ್ಕ್ರೀನ್ ಟಿ.ವಿ ಸಿಸ್ಟಂ

ಹೈ ರಿಸುಲ್ಯೂಷನ್ ಡಿಸ್ಲೇ, ಬೆರಗುಗೊಳಿಸುವಂತಹ ಡಿಜಿಟಲ್ ಸಲಕರಣೆ, 8 ಇಂಚು ಸ್ಕ್ರೀನ್ ಹಾಗೂ ಡ್ಯುಯಲ್ ವ್ಯೂ ಫನ್ಷನ್ ಹೊಂದಿದೆ.

ಕ್ಲೈಮೆಟ್ ಕಂಟ್ರೋಲ್

ಕ್ಲೈಮೆಟ್ ಕಂಟ್ರೋಲ್

ಬೆಸ್ಟ್ ಕ್ಲೈಮೆಟ್ ಕಂಟ್ರೋಲ್ ಸಿಸ್ಟಂ, ನ್ಯೂ ಪವರ್‌ಫುಲ್ ಪ್ರೀಮಿಯಂ ಫೋರ್ ಜೋನ್ ಸಿಸ್ಟಂ.

ಎಸ್‌ಯುವಿ ಲಗ್ಷುರಿ

ಎಸ್‌ಯುವಿ ಲಗ್ಷುರಿ

ಲಗ್ಷುರಿ ಸಿಟ್ಟಿಂಗ್, ಪರಿಷ್ಕೃತ ಸೀಟ್ ಜತೆ ಐಷಾರಾಮಿ ಸೌಲಭ್ಯಗಳನ್ನು ಆಳವಡಿಸಲಾಗಿದೆ. ಮಲ್ಟಿ ಮೋಡ್ ಮೆಸೇಜ್, ಎಕ್ಸ್‌ಕ್ಲೂಸಿವ್ ನ್ಯೂ ಎಕ್ಸಿಕ್ಯೂಟಿವ್ ಕ್ಲಾಸ್ ರಿಯರ್ ಸಿಟ್ಟಿಂಗ್ ಪ್ಯಾಕೇಜ್ ಕೂಡಾ ಇದೆ.

ಇಂಟಿರಿಯರ್

ಇಂಟಿರಿಯರ್

ಸೂಕ್ಷ್ಮ ಮತ್ತು ಅತ್ಯಾಧುನಿಕ ಲೈಟಿಂಗ್ ಹಾಗೂ ಡ್ರೈವರ್ ಆಯ್ಕೆಗಣುವಾಗಿ ಕಲರ್ ಮೋಡ್ ಬದಲಾಯಿಸುವ ಆಯ್ಕೆಯಿದೆ.

ರೇಂಜ್ ರೋವರ್ ಭಾರತದಲ್ಲಿ ಲಾಂಚ್

ನಾಲ್ಕನೇ ತಲೆಮಾರಿನ ರೇಂಜ್ ರೋವರ್

ರೇಂಜ್ ರೋವರ್ ಭಾರತದಲ್ಲಿ ಲಾಂಚ್

ರೇಂಜ್ ರೋವರ್ ಐಷಾರಾಮಿ ಲುಕ್

English summary
The all new Range Rover has been launched in India by Land rover today. Priced at an incredible Rs.1.73 crores, the flagship model of Tata Motors' premium SUV brand has arrived in its fourth generation avatar.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark