ಆಸ್ಟನ್ ಮಾರ್ಟಿನ್ ವಿ12 ವ್ಯಾಂಟೆಜ್ ರೋಡ್‌ಸ್ಟಾರ್ ರಸ್ತೆಗೆ

Posted By:

ವಿ12 ವ್ಯಾಂಟೆಜ್ ರೋಡ್ ಸ್ಟಾರ್ ನಾಮಧೇಯದ ನೂತನ ಸ್ಪೋರ್ಟ್ಸ್ ಕಾರೊಂದನ್ನು ಆಸ್ಟನ್ ಮಾರ್ಟಿನ್ ಪರಿಚಯಿಸಿದೆ. ಇದು ವಿ12 ವ್ಯಾಂಟೆಜ್ ಆವೃತ್ತಿಯ ಕನ್ವರ್ಟೆಬಲ್ ವರ್ಷನ್ ಆಗಿದೆ. ಆಸ್ಟನ್ ಮಾರ್ಟಿನ್ ನೂತನ ರೋಡ್ ಸ್ಟಾರ್ ಲಿಮಿಟೆಡ್ ಅಡಿಷನ್ ಕಾರಾಗಿದ್ದು, ಜಾಗತಿಕವಾಗಿ ಆಯ್ದ ಕೆಲವು ಭಾಗಗಳಲ್ಲಿ ಮಾತ್ರ ಮಾರಾಟ ಮಾಡುವುದಾಗಿ ಕಂಪನಿ ಹೇಳಿದೆ.

ನೂತನ ಆಸ್ಟನ್ ಮಾರ್ಟಿನ್ ವಿ12 ವ್ಯಾಂಟೆಜ್ ರೋಡ್ ಸ್ಟಾರ್ 6 ಲೀಟರಿನ ವಿ12 ಎಂಜಿನ್ ಹೊಂದಿದೆ. ವೇಗದ ಆವೇಗಕ್ಕೆ ಸೆಡ್ಡು ಹೊಡೆಯುವ ನೂತನ ವಿ12 ಕಾರಿನಲ್ಲಿ ಕೇವಲ 4.5 ಸೆಕೆಂಡಿನಲ್ಲಿ ಸೊನ್ನೆಯಿಂದ 100 ಕಿ.ಮೀ. ವೇಗ ಪಡೆಯಬಹುದಾಗಿದೆ. ಇದು 515 ಅಶ್ವಶಕ್ತಿ ಮತ್ತು 570 ಎನ್ಎಂ ಟಾರ್ಕ್ ಪವರ್ ನೀಡುತ್ತದೆ.

ವಿ12 ವ್ಯಾಂಟೆಜ್ ಆಸ್ಟನ್ ಮಾರ್ಟಿನ್ ಕಂಪನಿಯ ಅತ್ಯಧಿಕ ಶಕ್ತಿಶಾಲಿ ಕನ್ವರ್ಟೆಬಲ್ ಕಾರಾಗಿದೆ. ಈ ಕಾರಲ್ಲಿ ಹೃದಯದ ಬಡಿತ ಢವಢವ ಎನ್ನುವಂತೆ ಅತ್ಯಧಿಕ ವೇಗದಲ್ಲಿ ಸಾಗಬಹುದಾಗಿದೆ. ಆಸ್ಟನ್ ಮಾರ್ಟಿನ್ ವಿ12 ವ್ಯಾಂಟೆಜ್ ಕನ್ವರ್ಟೆಬಲ್ ಕಾರಿನಲ್ಲಿ ಗಂಟೆಗೆ ಗರಿಷ್ಠ 305 ಕಿ.ಮೀ. ವೇಗದಲ್ಲಿ ಸಾಗಬಹುದಾಗಿದೆ. ವ್ಯಾಂಟೆಜ್ ಕೂಪೆ ಆವೃತ್ತಿಯಲ್ಲಿರುವ ಟೆಕ್ ವಿಶೇಷತೆಗಳೇ ಇದರಲ್ಲಿದೆ.

ವಿ12 ವ್ಯಾಂಟೆಜ್ ರೋಡ್ ಸ್ಟಾರ್ ಕಾರಿನ ಹಿಂಭಾಗದ ಬೂಟ್ ಮರುವಿನ್ಯಾಸ ಮಾಡಲಾಗಿದೆ. "ಇದು ನಿಜಾರ್ಥದಲ್ಲಿ ಡ್ರೈವರ್ಸ್ ಕಾರು. ಚಾಲಕನ ಸಂಪೂರ್ಣ ಇನ್ವಾಲ್ ಮೆಂಟ್ ಬಯಸುವ ಈ ಕಾರು ಅತ್ಯಧಿಕ ವೇಗ, ಕಾರ್ಯಕ್ಷಮತೆ ಅನನ್ಯವಾಗಿದೆ" ಎಂದು ಆಸ್ಟನ್ ಮಾರ್ಟಿನ್ ಸಿಇಒ ಡಾ. ಉಲ್ರಿಚ್ ಬೆಝ್ ಹೇಳಿದ್ದಾರೆ.

ಆಸ್ಟನ್ ಮಾರ್ಟಿನ್ ವಿ12 ವ್ಯಾಂಟೆಜ್ ರೋಡ್ ಸ್ಟಾರ್ ದರ 1,50,000 ಪೌಂಡ್. ಅಂದ್ರೆ ಸುಮಾರು 1.29 ಕೋಟಿ ರುಪಾಯಿ.

English summary
Aston Martin has unleashed a new sports car in the form of the V12 Vantage Roadster, the convertible version of the highly venerated sports car. Aston Martin has stated that the new car will be a limited edition model and will be available only in select markets worldwide.
Please Wait while comments are loading...

Latest Photos