ಯೂಟ್ಯೂಬ್‌ನಲ್ಲಿ ವೇಗೋತ್ಕರ್ಷ ವಿಡಿಯೋ ನೋಡಿದ್ದೀರಾ?

Posted By:
Best of Acceleration
ಯೂಟ್ಯೂಬ್ ನಲ್ಲಿ ನೀವು ಹಲವು ಜನಪ್ರಿಯ ವಿಡಿಯೋಗಳನ್ನು ನೋಡಿರಬಹುದು. ಈಗ ಕಾರಿನ ಆಕ್ಸೆಲರೇಷನ್(ವೇಗೋತ್ಕರ್ಷ) ಕುರಿತಾದ ಹೊಸ ವಿಡಿಯೋ ಹಿಟ್ ಆಗುತ್ತಿದೆ. ಈ ವಿಡಿಯೋ ಹೆಸರು "Best of Acceleration".

ಆಕ್ಸೆಲರೇಷನ್ ನೀಡುವ ಸಂತೋಷ, ಸಂಭ್ರಮ, ಖುಷಿ, ಭಯದ ಕ್ಷಣಗಳನ್ನು ಈ 3.17 ನಿಮಿಷದ ವಿಡಿಯೋದಲ್ಲಿ ದಾಖಲಿಸಲಾಗಿದೆ. ಆಕ್ಸೆಲರೇಷನ್ ಪೆಡಲ್ ತುಳಿದಾಗ ಆಗುವ ಅನುಭವವನ್ನು ಈ ವಿಡಿಯೋದಲ್ಲಿ ಒತ್ತಿಹೇಳಲಾಗಿದೆ.

ಆದರೆ ರಾತ್ರಿ ಹಗಲು ಬಿಡುವಿಲ್ಲದೇ ಡ್ರೈವಿಂಗ್ ಮಾಡುವರು ಇರುತ್ತಾರೆ. ಅವರಿಗೆ ಆಕ್ಸೆಲರೇಷನ್ ಮೇಲೆ ಒಂದಿಷ್ಟು ಅಸಹನೆ ಇರಬಹುದು. ಪೆಡಲ್ ಅದುಮಿ ಕಾಲು ನೋವು ಆರಂಭವಾಗಿರಬಹುದು.

ಈಗಲೂ ಕೆಲವು ಲಾರಿ ಚಾಲಕರು ಆಕ್ಸೆಲರೇಷನ್ ಮೇಲೆ ಕಲ್ಲೊಂದು ಇಟ್ಟು ಆರಾಮವಾಗಿ ಡ್ರೈವಿಂಗ್ ಮಾಡುತ್ತಾರೆ ಎಂದು ಲಾರಿ ಜಂಗಮನೊಬ್ಬ ಇತ್ತೀಚೆಗೆ ಹೇಳಿದ್ದ. ಹೆದ್ದಾರಿಯಲ್ಲಿ ಅಪಘಾತ ಹೆಚ್ಚಾಗಲು ಇದೂ ಪ್ರಮುಖ ಕಾರಣ.

ಓದುಗರೇ, ಆಕ್ಸೆಲರೇಷನ್ ಕುರಿತ ವಿಡಿಯೋ ನೋಡಬೇಕೆಂದಿದ್ದರೆ ಯೂಟ್ಯೂಬ್ ಅಥವಾ ಗೂಗಲ್ ಪುಟಕ್ಕೆ ಹೋಗಿ ಬೆಸ್ಟ್ ಆಫ್ ಆಕ್ಸೆಲರೇಷನ್ ಎಂದು ಹುಡುಕಿ.

ಓದಿ: ವಾಹನ ಚಾಲನೆ ಪಾಠ: ಕಾರು ಬಿಡೋದು ಹೇಗೆ?

Read more on ಕಾರು car
English summary
Best of Acceleration Youtube Video Story. I Saw new video in youtube titled Best of Acceleration. These video containing joyous feeling of acceleration story.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark