ಬೆಂಗಳೂರಿನಲ್ಲಿ ಭಾನುವಾರ ಅಂಧರಿಂದ ಕಾರ್ ರೇಸ್

Posted By:
ಬೆಂಗಳೂರು, ಜೂ 16: ಉದ್ಯಾನನಗರಿಯ ಅರಮನೆ ಮೈದಾನದ ಈಡನ್ ಗಾರ್ಡನಿನಲ್ಲಿ ಭಾನುವಾರ(ಜೂ 17) ಅಂಧರ ವಿಶೇಷ ಮೋಟರ್ ಕಾರ್ ರೇಸ್ ನಡೆಯಲಿದೆ. ರಾಷ್ಟ್ರೀಯ ಅಂಧತ್ವ ನಿವಾರಣೆ ಸಂಘ ಮತ್ತು ಇತರ ಸಂಸ್ಥೆಗಳು ಈ ವಿಶೇಷ ಕಾರ್ ರೇಸ್ ಮತ್ತು ಬೃಹತ್ ಮೆರವಣಿಗೆ ಆಯೋಜಿಸಿದೆ.

"ಬೃಹತ್ ಮೆರವಣಿಗೆ ನಂತರ ಈ ವಿಶೇಷ ಕಾರ್ ರೇಸ್ ನಡೆಯಲಿದೆ. ಅಂಧರು ಬ್ರೈಲ್ ಲಿಪಿ ನೆರವಿನೊಂದಿಗೆ ಸುಮಾರು 50 ಕಿ.ಮೀ. ದೂರದವರೆಗೆ ಕಾರ್ ರೇಸ್ ನಡೆಸಲಿದ್ದಾರೆ. ರಸ್ತೆ ಮಾಹಿತಿ, ಕಾರುಗಳ ವೇಗ ಸೇರಿದಂತೆ ಹಲವು ಮಾಹಿತಿಗಳು ಬ್ರೈಲ್ ಲಿಪಿಯಲ್ಲಿರಲಿವೆ. ಕಾರಿನಲ್ಲಿ ಮೂವರಿದ್ದು, ಒಬ್ಬರು ಕಣ್ಣಿನ ದೋಷ ಹೊಂದಿದ್ದು, ಅವರು ಬ್ರೈಲ್ ಲಿಪಿ ಮೂಲಕ ಮಾರ್ಗದರ್ಶನ ನೀಡಬೇಕಿದೆ" ಎಂದು ಬೆಂಗಳೂರು ನೈಟ್ಸ್ ರೌಂಡ್ ಟೇಬಲ್ ಸಂಸ್ಥೆಯ ಅಧ್ಯಕ್ಷರಾದ ರಾಜೀವ್ ದುಸೇಜಾ ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಅಂಧತ್ವ ಸಮಸ್ಯೆ ಕುರಿತು ಜಾಗೃತಿ ಮೂಡಿಸುವುದು, ಅಂಧರ ಬಗೆಗಿನ ತಾತ್ಸಾರ ನಿವಾರಿಸುವುದು, ಅಂಧರು ಯಾವುದರಲ್ಲಿಯೂ ಕಡಿಮೆಯಿಲ್ಲವೆನ್ನುವುದನ್ನು ಜಗತ್ತಿಗೆ ಸಾಧರ ಪಡಿಸುವುದು ಈ ಕಾರ್ಯಕ್ರಮದ ಉದ್ದೇಶ ಎಂದು ಅವರು ಹೇಳಿದ್ದಾರೆ. ಸಂಜೆ ಅಂಧರ ಫ್ಯಾಷನ್ ಶೋ ಕೂಡ ನಡೆಯಲಿದೆ.

"ಸುಮಾರು 150 ಅಂಧರು ಕಾರ್ ರೇಸಿನಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾರ್ ರೇಸ್ ಪ್ರವೇಶ ಶುಲ್ಕ 2 ಸಾವಿರ ರುಪಾಯಿ. ಈ ಹಣವನ್ನು ಬಡ ಮಕ್ಕಳಿಗಾಗಿ ನಿರ್ಮಿಸುತ್ತಿರುವ ಪ್ರಾಥಮಿಕ ಶಾಲಾ ಕಟ್ಟಡಕ್ಕಾಗಿ ಉಪಯೋಗಿಸಲಾಗುವುದು" ಎಂದು ರಾಜೀವ್ ಹೇಳಿದ್ದಾರೆ.

English summary
A special car race for the blind has been organized at Bangalore's Palace Grounds on Sunday, 17th June. Blind people will be navigating as experience rally drivers race a distance of 50 kilometres.
Story first published: Saturday, June 16, 2012, 12:06 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark