ಬಿಎಂಡಬ್ಲ್ಯು ಎಕ್ಸ್6 ಲಗ್ಷುರಿ ಕಾರು ಬಿಡುಗಡೆಗೆ ರೆಡಿ

Posted By:

ಸಮರ್ಥ ಕಾರ್ಯನಿರ್ವಹಣೆ ಹಾಗೂ ವಿಲಾಸಿ ಕಾರುಗಳಿಗೆ ಹೆಸರುವಾಸಿಯಾಗಿರುವ ಜರ್ಮನ್ ಕಾರು ತಯಾರಕ ಸಂಸ್ಧೆ ಬಿಎಂಡಬ್ಲ್ಯು ಭಾರತ ಮಾರುಕಟ್ಟೆಗೆ ಇನ್ನು ಕೆಲವೇ ದಿನಗಳಲ್ಲಿ ಅತಿ ದುಬಾರಿ ಎಕ್ಸ್6 ಕ್ರಾಸೋವರ್ ಕಾರನ್ನು ಪರಿಚಯಿಸಲಿದೆ.

ಜರ್ಮನ್ ಪ್ರೀಮಿಯಂ ಕಾರು ತಯಾರಕರಾದ ಬಿಎಂಡಬ್ಲ್ಯು ಎಕ್ಸ್6 ಮಾದರಿ ನವೆಂಬರ್ 22ರಂದು ದೇಶಿಯ ಮಾರುಕಟ್ಟೆಗೆ ಪ್ರವೇಶಿಸಲಿದೆ. ಎಕ್ಸ್5 ಆವೃತ್ತಿಗೆ ಹೋಲಿಸಿದಾಗ ಎಕ್ಸ್6 ಸ್ವಲ್ಪ ಹಿರಿದಾದ ಕ್ರಾಸೋವರ್ ಸೆಗ್ಮೆಂಟ್ ಆಗಿರಲಿದೆ. ಅಲ್ಲದೆ ಡಿಸೈನ್ ಸಿರೀಸ್ 5 ಹಾಗೂ ಎಕ್ಸ್5 ಸಿರೀಸ್‌ನ ಮಿಶ್ರಿತವಾಗಿರಲಿದೆ. ನೂತನ ಬಿಎಂಡಬ್ಲ್ಯುಕ್ರಾಸೋವರ್ ಸ್ಪೋರ್ಟ್ಸ್ ಕಾರು ನೂತನ ಎಲ್‌ಇಡಿ ತಂತ್ರಜ್ಞಾನದ ಹೆಡ್‌ಲೈಟ್ ಹೊಂದಿರಲಿದೆ. ಪರಿಷ್ಕೃತ ಬಂಪರ್, ಹೊಸ ಫಾಗ್ ಲ್ಯಾಂಪ್, ಪರಿಷ್ಕೃತ ಗ್ರಿಲ್ ಹಾಗೂ ಹೊಸ ಎಲ್‌ಇಡಿ ಟೈಲ್ ಲೈಟ್‌ಗಳು ಕಾರಿನ ಪ್ರಮುಖ ಫೀಚರ್‌ಗಳಾಗಿವೆ.

To Follow DriveSpark On Facebook, Click The Like Button
ಬಿಎಂಡಬ್ಲ್ಯು ಎಕ್ಸ್6

ಜರ್ಮನ್ ಕಾರು ತಯಾರಕ ಕಂಪನಿ ಬಿಎಂಡಬ್ಲ್ಯು ಮುಂದಿನ ಕೆಲವೇ ದಿನಗಳಲ್ಲಿ ಸ್ಪೋರ್ಟ್ಸ್ ಆಕ್ಟಿವಿಟಿ ವೆಹಿಕಲ್ (ಎಸ್‌ಎವಿ) ಎಕ್ಸ್6 ಕಾರನ್ನು ಅನಾವರಣಗೊಳಿಸಲಿದೆ. ಸ್ಲೋಪಿಂಗ್ ರೂಫ್ ಕಾರಿನ ವಿಶಿಷ್ಟ ಆಕರ್ಷಣೆಗೆ ಕಾರಣವಾಗಲಿದೆ.

ಬಿಎಂಡಬ್ಲ್ಯು ಎಕ್ಸ್6

ಬಿಎಂಡಬ್ಲ್ಯು ಎಕ್ಸ್6 ಇಂಟಿರಿಯರ್ ಭಾಗಗಳಲ್ಲಿ ಹೆಚ್ಚಿನ ಬದಲಾವಣೆ ಮಾಡಲಾಗಿಲ್ಲ. ಹಾಗಿದ್ದರೂ ಇಂಟಿರಿಯರ್ ಕಲರ್ ಹಾಗೂ ಸೌಲಭ್ಯಗಳಲ್ಲಿ ಕೆಲವೊಂದು ಬದಲಾವಣೆಗಳನ್ನು ನಿರೀಕ್ಷಿಸಬಹುದಾಗಿದೆ.

 ಬಿಎಂಡಬ್ಲ್ಯು ಎಕ್ಸ್6 ದರ ಮಾಹಿತಿ

ಈಗಿನ ಬಿಎಂಡಬ್ಲ್ಯು ಎಕ್ಸ್6 ಎಕ್ಸ್‌ಡ್ರೈವ್ 30ಡಿ ಡೀಸೆಲ್ ವೆರಿಯಂಟ್ ಕಾರುಗಳ ದರ ನವದೆಹಲಿಯ ಎಕ್ಸ್ ಶೋರೂಂಗಳಲ್ಲಿ 68.70 ಲಕ್ಷ ರುಪಾಯಿಗಳಾಗಿದೆ. ಇದರಂತೆ ಬಿಎಂಡಬ್ಲ್ಯು ಎಕ್ಸ್6 ಕ್ರಾಸೋವರ್ ದರ ಇದಕ್ಕಿಂತಲೂ ಸ್ವಲ್ಪ ಹೆಚ್ಚಾಗಿರುವ ಸಾಧ್ಯತೆಯಿದೆ.

ಬಿಎಂಡಬ್ಲ್ಯು ಎಕ್ಸ್6

ಇನ್ನು ತಾಂತ್ರಿಕತೆ ಬಗ್ಗೆ ಗಮನ ಹಾಯಿಸಿದಾಗ, ಬಿಎಂಡಬ್ಲ್ಯು ಎಕ್ಸ್6 ಆವೃತ್ತಿಯು 3 ಲೀಟರ್ 235 ಬಿಎಚ್‌ಪಿ ಡೀಸೆಲ್ ಎಂಜಿನ್ ಹಾಗೂ ಟರ್ಬೊಚಾರ್ಜ್‌ 4.4 ಲೀಟರ್ 407 ಬಿಎಚ್‌ಪಿ ಪೆಟ್ರೋಲ್ ಎಂಜಿನ್ ಹೊಂದಿರಲಿದೆ. ಇವೆರಡು 8 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್‌ನಿಂದ ನಿಯಂತ್ರಿಸಲ್ಪಡಲಿದೆ.

ಬಿಎಂಡಬ್ಲ್ಯು ಎಕ್ಸ್6 ಎಂ50ಡಿ

ಇದೇ ಸಂದರ್ಭದಲ್ಲಿ ಎಕ್ಸ್6‌ನ ಪವರ್ ಪ್ಯಾಕ್ಡ್ ಎಂ ಆವೃತ್ತಿಯಾದ ಎಂ50ಡಿ ಕೂಡಾ ಲಾಂಚ್ ಮಾಡಲು ಬಿಡಎಂಡಬ್ಲ್ಯು ಆಯೋಚಿಸುತ್ತಿದೆ. ಹೆಸರಿನಲ್ಲೇ ಸೂಚಿಸಿದಂತೆಯೇ ಬಿಎಂಡಬ್ಲ್ಯು ಎಕ್ಸ್6 ಎಂ50ಡಿ ತ್ರಿಪಲ್ ಟರ್ಬೊ 3 ಲೀಟರ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 282 ಬಿಎಚ್‌ಪಿ ಪವರ್ ಹಾಗೂ 740 ಎನ್‌ಎಂ ಟರ್ಕ್ಯೂ ಉತ್ಪಾದಿಸಲಿದೆ. ಆದರೆ ಭಾರತ ಮಾರುಕಟ್ಟೆಗೆ ಇದೇ ನವೆಂಬರ್ ತಿಂಗಳಲ್ಲಿ ಪ್ರವೇಶಿಸಲಿದೆಯೇ ಎಂಬುದು ಇನ್ನೂ ಸ್ಪಷ್ಟಗೊಂಡಿಲ್ಲ.

English summary
BMW India continues its aggressive new product launch plans with the upcoming launch of the new 2013 X6 crossover. The German premium car leader will launch the new X6 in India on November 22 within a month of launching the 6-Series Gran Coupe.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark