ಬಿಎಂಡಬ್ಲ್ಯು x6 : ಫುಲ್ ಬಾಡಿ ಸ್ಕ್ಯಾನಿಂಗ್

Posted By:

ವಿಶ್ವದ ಪ್ರತಿಷ್ಠಿತ ವಾಹನ ತಯಾರಕ ಕಂಪನಿಯಾದ ಬಿಎಂಡಬ್ಲ್ಯು ಇದೀಗಷ್ಟೇ ಜಗತ್ತಿನ ಮೊದಲ ಸ್ಪೋರ್ಟ್ಸ್ ಆಕ್ಟಿವಿಟಿ ಕೋಪ್ ವಿನ್ಯಾಸದ ಕಾರನ್ನು ಬಿಡುಗಡೆಗೊಳಿಸಿದೆ. ಕಾರು ಉತ್ಸಾಹಿ ಅಭಿಮಾನಿಗಳಲ್ಲಿ ಬಿಎಂಡಬ್ಲ್ಯು ಎಕ್ಸ್6 ಕಾರಿನ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಹಂಬಲವಿರಬಹುದು. ಇದರಂತೆ ಹೆಚ್ಚು ಆಧುನಿಕ ಅಭಿವ್ಯಕ್ತ ವಿನ್ಯಾಸ ಹಾಗೂ ಯೂನಿಕ್ ಡಿಸೈನ್ ಹೊಂದಿದ ಬಿಎಂಡಬ್ಲ್ಯು ಎಕ್ಸ್6 ಬಗ್ಗೆ ಮಾಹಿತಿ ನೀಡುವ ಪ್ರಯತ್ನ ಡ್ರೈವ್ ಸ್ಪಾರ್ಕ್‌ನಿಂದ ನಡೆದಿದೆ.

ನಾವಿಂದು ಐಷಾರಾಮಿ ಬಿಎಂಡಬ್ಲ್ಯು ಎಕ್ಸ್6 ಕಾರಿನ ವಿವಿಧ ಭಂಗಿಗಳನ್ನು ಪ್ರದರ್ಶಿಸಲಿದ್ದು, ಈ ಬಗ್ಗೆ ಮಾಹಿತಿಯನ್ನು ಕೊಡಲಿದ್ದೇವೆ. ಖಂಡಿತವಾಗಿಯೂ ಕಾರು ಪ್ರಿಯರಿನ್ನು ಆಕರ್ಷಿಸುವ ನಿರೀಕ್ಷೆಯಿದೆ.

ದರ ಮಾಹಿತಿ (ದೆಹಲಿ ಎಕ್ಸ್ ಶೋ ರೂಂ)

ದರ ಮಾಹಿತಿ (ದೆಹಲಿ ಎಕ್ಸ್ ಶೋ ರೂಂ)

2013 ಬಿಎಂಡಬ್ಲ್ಯು ಎಕ್ಸ್6 ಸ್ಪೋರ್ಟ್ಸ್ ಆಕ್ಟಿವಿಟಿ ಕೋಪ್ ಕಾರು ನಿಮ್ಮ ಫೇವರಿಟ್ ಲಿಸ್ಟ್‌ನಲ್ಲಿ ಇದೆಯೇ?

ಬಿಎಂಡಬ್ಲ್ಯು ಎಕ್ಸ್6 ಎಕ್ಸ್‌ಡ್ರೈವ್50ಐ- 93,40,000 ಲಕ್ಷ ರು.

ಬಿಎಂಡಬ್ಲ್ಯು ಎಕ್ಸ್6 ಎಕ್ಸ್‌ಡ್ರೈವ್40ಡಿ- 78,90,000 ಲಕ್ಷ ರು.

ಇಂಧನ ಕ್ಷಮತೆ

ಇಂಧನ ಕ್ಷಮತೆ

ಎಕ್ಸ್6 ಎಕ್ಸ್‌ಡ್ರೈವ್ 50ಐ- 4,395 ಸಿಸಿ (ಪೆಟ್ರೋಲ್ ಎಂಜಿನ್)- ಪ್ರತಿ ಲೀಟರ್‌ಗೆ 8 ಕಿ. ಮೀ.

ಎಕ್ಸ್6 ಎಕ್ಸ್‌ಡ್ರೈವ್ 40ಡಿ- 2993 (ಡೀಸೆಲ್ ಎಂಜಿನ್)- ಪ್ರತಿ ಲೀಟರ್‌ಗೆ 13.33 ಕಿ. ಮೀ.

ಕಲರ್ ವೆರಿಯಂಟ್

ಆಲ್ಪೈನ್ ವೈಟ್

ಬ್ಲ್ಯಾಕ್ ಸಪೈರ್

ಡೀಪ್ ಸಿ ಬ್ಲ್ಯೂ

ಮರಕೇಶ್ ಬ್ರೌನ್

ಮಿಡ್‌ನೈಟ್ ಬ್ಲ್ಯೂ

ಒರಿಯನ್ ಸಿಲ್ವರ್

ಸ್ಪೇಸ್ ಗ್ರೇ

ಟೈಟಾನಿಯಂ ಸಿಲ್ವರ್

ವೆರ್ಮಿಲಿಯನ್ ರೆಡ್

ಎಂಜಿನ್

ಎಂಜಿನ್

407 ಹಾರ್ಸ್ ಪವರ್ ಉತ್ಪಾದಿಸಲು ಶಕ್ತವಿರುವ ಬಿಎಂಡಬ್ಲ್ಯು ಎಕ್ಸ್6 ಪೆಟ್ರೋಲ್ ಎಂಜಿನ್ ಕಾರು 5.4 ಸೆಕೆಂಡುಗಳಲ್ಲಿ 0-100 ಕಿಲೋಮೀಟರ್ ವೇಗ ಹೆಚ್ಚಿಸಲು ಸಮರ್ಥವಾಗಿದೆ. ಅಲ್ಲದೆ ಕಾರಿನ ಟಾಪ್ ಸ್ಪಿಡ್ ಗಂಟೆಗೆ 240 ಕಿಲೋಮೀಟರ್ ಆಗಿದೆ. ಮತ್ತೊಂದೆಡೆ 306 ಹಾರ್ಸ್ ಪವರ್ ಉತ್ಪಾದಿಸಲು ಶಕ್ತವಿರುವ ಬಿಎಂಡಬ್ಲ್ಯು ಎಕ್ಸ್6 ಡೀಸೆಲ್ ಎಂಜಿನ್ ಕಾರು 6.5 ಸೆಕೆಂಡುಗಳಲ್ಲಿ 0-100 ಕಿಲೋಮೀಟರ್ ವೇಗ ವರ್ಧಿಸಲಿದೆ. ಈ ಕಾರಿನ ಗರಿಷ್ಠ ಸ್ಪೀಡ್ ಗಂಟೆಗೆ 236 ಕಿಲೋಮೀಟರ್ ಆಗಿದೆ.

2013 ಬಿಎಂಡಬ್ಲ್ಯು ಎಕ್ಸ್6

ಹೊಸ BMW X6 ಒಂದು BMW X ಮಾದರಿಯ ಚೈತನ್ಯದ ಜೊತೆ ಅಥ್ಲೆಟಿಕ್ ಮತ್ತು ಸೊಗಸಾದ ಕೋಪ್ ಮಾದರಿಯನ್ನು ಹೊಂದಿದೆ. X6 ಸೊಬಗು ಜೊತೆ ಚಾಣಾಕ್ಷತೆ ಮತ್ತು ಸ್ಪೋರ್ಟ್ಸ್ ಗಾತ್ರದ ಒಗ್ಗಟ್ಟಾಗುವುದಕ್ಕೆ ಬಿಎಂಡಬ್ಲ್ಯು ಹೆಸರುವಾಸಿಯಾಗಿದೆ.

2013 ಬಿಎಂಡಬ್ಲ್ಯು ಎಕ್ಸ್6

2013 ಬಿಎಂಡಬ್ಲ್ಯು ಎಕ್ಸ್6 ಕಾರು 8 ಸ್ಪೀಡ್ ಸ್ಪೋರ್ಟ್ಸ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದಿದ್ದು, ಇದರಿಂದ ನಯವಾದ ಚಾಲನೆಗೆ ಹಾಗೂ ಗೇರ್ ಶಿಫ್ಟ್‌ಗಳಿಗೆ ನೆರವಾಗಲಿದೆ.

2013 ಬಿಎಂಡಬ್ಲ್ಯು ಎಕ್ಸ್6

ತನ್ನದೇ ಆದ ವಿಭಿನ್ನ ಶೈಲಿಗೆ ಬಿಎಂಡಬ್ಲ್ಯು ಎಕ್ಸ್6 ಹೆಸರುವಾಗಿಯಾಗಿದೆ. ಎಸ್‌ಯುವಿ ಹಾಗೂ ಕೋಪ್ ಶೈಲಿಗೆ ಬಿಎಂಡಬ್ಲ್ಯು ಮಾತ್ರವಾಗಿದೆ.

2013 ಬಿಎಂಡಬ್ಲ್ಯು ಎಕ್ಸ್6

ಬಿಎಂಡಬ್ಲ್ಯು ಎಕ್ಸ್6 ನೂತನ ಕಿಡ್ನಿ ಗ್ರಿಲ್ ತ್ರಿ ಡೈಮೆಷನ್ ಕ್ರೋಮ್ ಫ್ರೇಮ್‌ನಲ್ಲಿ ಆಗಮನವಾಗಿದೆ.

2013 ಬಿಎಂಡಬ್ಲ್ಯು ಎಕ್ಸ್6

ಬಿಎಂಡಬ್ಲ್ಯು ಎಕ್ಸ್6 ಗುಣಮಟ್ಟದ ಸ್ಪೋರ್ಟ್ಸ್ ಸೀಟ್‌ಗಳನ್ನು ಲಗ್ಗತ್ತಿಸಲಾಗಿದೆ. ನೆವೆಡಾ ಲೆಥನ್ ಸೀಟ್‌ಗಳು Beige, Black, Oyster/Black, Saddle Brown/Black and Vermillion Red/Black ಆಯ್ಕೆಗಳಲ್ಲಿ ಲಭ್ಯವಿರಲಿದೆ.

2013 ಬಿಎಂಡಬ್ಲ್ಯು ಎಕ್ಸ್6

ಸ್ಥಾನ ಬದಲಾವಣೆಯ ಫಾಗ್ ಲ್ಯಾಂಪ್‌ಗಳನ್ನು ಬಿಎಂಡಬ್ಲ್ಯು ಎಕ್ಸ್6 ಆಫರ್ ಮಾಡುತ್ತಿದೆ. ಖಂಡಿತವಾಗಿಯೂ ರಾತ್ರಿ ಪಯಣದಲ್ಲೂ ಇದು ನೆರವಿಗೆ ಬರಲಿದೆ.

2013 ಬಿಎಂಡಬ್ಲ್ಯು ಎಕ್ಸ್6

ಇಲ್ಲಿದೆ ನೋಡಿ ಬಿಎಂಡಬ್ಲ್ಯು ಎಕ್ಸ್ ಡೇ ಟೈಮ್ ರನ್ನಿಂಗ್ ಲೈಟ್‌ನ ನಿಕಟ ನೋಟ. ಕ್ಸೆನಾನ್ ಲೈಟ್‌ಗಳು ರೇಂಜ್ ಕಂಟ್ರೋಲ್ ಜತೆ ಹೆಡ್‌ಲೈಟ್ ವಾಷಿಂಗ್ ಸಿಸ್ಟಂ ಹೊಂದಿರಲಿದೆ.

2013 ಬಿಎಂಡಬ್ಲ್ಯು ಎಕ್ಸ್6

ಇಲ್ಲಿದೆ ನೋಡಿ ಮ್ಯಾನುವಲ್ ಗೇರ್ ಶಿಫ್ಟ್ ಸಂದರ್ಭದಲ್ಲಿನ ಶಿಫ್ಟ್ ಪ್ಯಾಡೆಲ್. ಗೇರ್ ಬದಲಾವಣೆಗಾಗಿ ಚಾಲಕ ತನ್ನ ಬಲಗೈ ಹೆಬ್ಬೆರಳನ್ನು ಬಳಸಬೇಕಾಗುತ್ತದೆ.

2013 ಬಿಎಂಡಬ್ಲ್ಯು ಎಕ್ಸ್6

ಇಲ್ಲಿದೆ ನೋಡಿ ಮತ್ತೊಂದು ಕ್ಲೋಸ್-ಅಪ್ ಲುಕ್.

2013 ಬಿಎಂಡಬ್ಲ್ಯು ಎಕ್ಸ್6

ಬಿಎಂಡಬ್ಲ್ಯು ಎಕ್ಸ್6 ಮಾದರಿಯಲ್ಲಿ 22.3 ಸೆಂಟಿಮೀಟರ್ ಜತೆ 1280x480 ಡಿಸ್‌ಪ್ಲೇ ಆಳವಡಿಸಲಾಗಿದೆ. ಅಲ್ಲದೆ ಚಾಲಕನಿಗೆ ನೆರವಾಗುವ ರೀತಿಯಲ್ಲಿ ಐಡ್ರೈವ್ ಹಾಗೂ ನೆವಿಗೇಷನ್ ಪ್ರವೃತ್ತಿ ಆಳವಡಿಸಲಾಗಿದೆ.

2013 ಬಿಎಂಡಬ್ಲ್ಯು ಎಕ್ಸ್6

ಬಿಎಂಡಬ್ಲ್ಯು ಎಕ್ಸ್6 ಕಾರಿನ ಮತ್ತೊಂದು ವಿಶೇಷತೆ ಏನೆಂದರೆ ಎಇಡಿ ಟೈಲ್ ಲೈಟ್‌ಗಳಾಗಿವೆ.

 2013 ಬಿಎಂಡಬ್ಲ್ಯು ಎಕ್ಸ್6

ನೆವೆಡಾ ಲೆಥರ್ ಮೆತ್ತೆಯಲ್ಲಿ ನಿರ್ಮಿಸಲಾದ ರಿಯರ್ ಸೈಡ್ ಡೋರ್.

2013 ಬಿಎಂಡಬ್ಲ್ಯು ಎಕ್ಸ್6

ಬಿಎಂಡಬ್ಲ್ಯು ಎಕ್ಸ್6 ಸ್ಪೋರ್ಟ್ಸ್ ಆಕರ್ಷಕ ಎಕ್ಸ್‌ಹಾಸ್ಟ್ ಪೈಪ್‌ಗಳು ರಿಯರ್ ಬಂಪರ್ ಜತೆ ಸೊಗಸಾಗಿ ಬೆಂಡ್ ಆಗಲಿದೆ. ಪಾರ್ಕಿಂಗ್ ಡಿಸ್ಟನ್ಸ್ ಕಂಟ್ರೋಲ್‌ಗಳಂತಹ ರಿಯರ್, ರಿಯರ್ ವ್ಯೂ ಕ್ಯಾಮೆರಾಗಳನ್ನು ಹೊಂದಿದೆ.

2013 ಬಿಎಂಡಬ್ಲ್ಯು ಎಕ್ಸ್6

ಎಕ್ಸ್6 ಹಿಂದುಗಡೆ ಮೂರು ಸಿಟ್ಟಿಂಗ್ ಸೀಟ್‌ಗಳನ್ನು ಹೊಂದಿದೆ. ಅಲ್ಲದೆ ಹಿಂದುಗಡೆ ಪ್ರಯಾಣಿಕನಿಗೆ ಏರ್ ಕಂಡಿಷನರ್ ವ್ಯವಸ್ಥೆ ಆಳವಡಿಸಲಾಗಿದೆ.

2013 ಬಿಎಂಡಬ್ಲ್ಯು ಎಕ್ಸ್6

ಬಿಎಂಡಬ್ಲ್ಯು ಎಕ್ಸ್6 ಕಾರಿನ ಆಕರ್ಷಕ ಡಬಲ್ ಸ್ಪೋಕ್ ಬ್ಲ್ಯಾಕ್ 19 ಇಂಚು ಅಲಾಯ್ ವೀಲ್‌ಗಳು.

ಸುರಕ್ಷತೆ

ಸುರಕ್ಷತೆ

ಬಿಎಂಡಬ್ಲ್ಯು ಎಕ್ಸ್6 ಸುರಕ್ಷತೆಗೂ ಅತೀವ ಪ್ರಾಧಾನ್ಯತೆ ನೀಡಲಾಗಿದ್ದು, ಡ್ರೈವರ್ ಸೇರಿದಂತೆ ಪ್ರಯಾಣಿಕರಿಗೆ ಏರ್ ಬ್ಯಾಗ್ ಸಿಸ್ಟಂ ಆಳವಡಿಸಲಾಗಿದೆ. ಇದರ ಜತೆ ಫ್ರಂಟ್ ಹಾಗೂ ರಿಯರ್ ಪ್ರಯಾಣಿಕರಿಗೆ ಹೆಚ್ಚುವರಿ ಹೆಡ್ ಏರ್‌ಬ್ಯಾಗ್‌ಗಳ ಸಹಿತ ಚಾಲಕ ಹಾಗೂ ಎದುರಿನ ಪ್ರಯಾಣಿಕನಿಗೆ ಸೈಡ್ ಏರ್‌ಬ್ಯಾಗ್ ಕೂಡಾ ಆಳವಡಿಸಲಾಗಿದೆ.

2013 ಬಿಎಂಡಬ್ಲ್ಯು ಎಕ್ಸ್6

ಬಿಎಂಡಬ್ಲ್ಯು ಎಕ್ಸ್6 ಗ್ಲಾಸ್ ರೂಫ್, ಎಲೆಕ್ಟ್ರಿಕ್, ಸ್ಲೈಡಿಂಗ್ ಹಾಗೂ ಇತರ ಸೌಲಭ್ಯಗಳು ಖಂಡಿತವಾಗಿಯೂ ನಿಮ್ಮ ಗಮನ ಸೆಳೆಯಲಿದೆ.

2013 ಬಿಎಂಡಬ್ಲ್ಯು ಎಕ್ಸ್6

ಸ್ಪೋರ್ಟ್ಸ್ ಲೆಥರ್ ಸ್ಟೀರಿಂಗ್ ವೀಲ್ ಹಾಗೂ ಬಹುಕ್ರಿಯಾತ್ಮಕ ಗೇರ್ ಶಿಫ್ಟ್ ಪ್ಯಾಡೆಲ್‌ಗಳ ಆಕರ್ಷಕ ನೋಟ.

2013 ಬಿಎಂಡಬ್ಲ್ಯು ಎಕ್ಸ್6

ಬಿಎಂಡಬ್ಲ್ಯು ಎಕ್ಸ್6 ಸ್ಪೋರ್ಟ್ಸ್ ಕೋಪ್ ಉತ್ತಮ ವೇಗವರ್ಧನೆ ಪಡೆದುಕೊಳ್ಳಲಿದೆ. ಸುರಕ್ಷತಾ ಭಾಗವಾಗಿ ಸ್ಟೈಲಿಷ್ ಬ್ರೇಕಿಂಗ್ ಸಿಸ್ಟಂ ಹಾಗೂ ಆಂಟಿ ಬ್ರೇಕಿಂಗ್ ಸಿಸ್ಟಂ (ಎಬಿಎಸ್) ಆಳವಡಿಸಲಾಗಿದೆ.

English summary
BMW has launched the new BMW X6 which is the world's first Sports Activity Coupe. If you are a coupe enthusiast or looking to buy a coupe, which has uniqueness and a modern expressive design which combines athletic and elegant coupe lines with the dynamism of a BMW X model; the X6 should be on your hunt for list.

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more