ಬಿಎಂಡಬ್ಲ್ಯು ಹಿಟ್ ಆಂಡ್ ರನ್ ಅಪರಾಧಿ ಬಂಧನ

ನವದೆಹಲಿ, ಮೇ 15: ಗುರ್ ಗಾಂವ್ ಐಎಫ್ಎಫ್‌ಸಿಒ ಚೌಕದ ಸಮೀಪ ಇತ್ತೀಚೆಗೆ ಬಿಎಂಡಬ್ಲ್ಯು ಕಾರು ಅಪಘಾತ ನಡೆಸಿ ಗರ್ಭಿಣಿ ಮತ್ತು ಆಕೆಯ ಚಾಲಕನ ಸಾವಿಗೆ ಕಾರಣವಾಗಿದ್ದ "ನಿಜವಾದ" ಅಪರಾಧಿ ಕೊನೆಗೂ ನ್ಯಾಯಾಲಯಕ್ಕೆ ಶರಣಾಗತನಾಗಿದ್ದಾನೆ.

ವಿಶೇಷವೆಂದರೆ ಸೋಮವಾರ ರಾಜೇಶ್ ಎಂಬಾತ, ಕಾರಿನ ಚಾಲಕನಾದ ತಾನೇ ಅಪಘಾತ ನಡೆಸಿದ್ದನೆಂದು ಕೋರ್ಟಿನಲ್ಲಿ ಬೇಲ್ ಅರ್ಜಿ ಸಲ್ಲಿಸಿದ್ದ. ಆದರೆ ಚಾಣಾಕ್ಷ್ಯ ಗುರ್ ಗಾಂವ್ ಪೊಲೀಸರು ಆತನ ಬೇಲ್ ಅರ್ಜಿಗೆ ವಿರೋಧ ವ್ಯಕ್ತಪಡಿಸಿದ್ದರು. ಯಾಕೆಂದರೆ ಪೊಲೀಸರ ಆರಂಭಿಕ ತನಿಖೆಯಿಂದ ಬಂಧಿತ ವ್ಯಕ್ತಿ ಕಾರು ಚಾಲನೆ ಮಾಡಿಲ್ಲವೆಂದು ಸಾಬೀತಾಗಿತ್ತು.

ಮೇ 5ರಂದು ಅಪಘಾತ ನಡೆಸಿ ಇಬ್ಬರ ಸಾವಿಗೆ ಕಾರಣವಾದ ಬಿಎಂಡಬ್ಲ್ಯು ಕಾರಿನ ಸ್ಟಿಯರಿಂಗ್ ವೀಲ್ ನಲ್ಲಿದ್ದ ರಕ್ತದ ಕಲೆಗಳು ನಿಜವಾದ ಅಪರಾಧಿಯನ್ನು ಪತ್ತೆ ಹಚ್ಚಲು ಪೊಲೀಸರಿಗೆ ನೆರವಾಗಿತ್ತು. ಆ ರಕ್ತದ ಕಲೆಗಳನ್ನು ಕೇಂದ್ರ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು.

ವಿಧಿ ವಿಜ್ಞಾನ ಪರೀಕ್ಷೆಯಲ್ಲಿ ಈ ರಕ್ತದ ಕಲೆಗಳು ಬಂಧಿತ ರಾಜೇಶನದ್ದು ಅಲ್ಲವೆಂದು ಸಾಬೀತಾಗಿತ್ತು. ಇದೀಗ ಬಿಎಂಡಬ್ಲ್ಯು ಕಾರಿನ ಮಾಲಿಕನ ಪುತ್ರ ಸೂರಜ್ ಸಿಂಗ್ ನ್ಯಾಯಾಲಯಕ್ಕೆ ಶರಣಾಗಿದ್ದಾನೆ.

ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಸೇರಿದಂತೆ ದೇಶದ ಹೆಚ್ಚಿನ ಭಾಗಗಳಲ್ಲಿ ಹಿಟ್ ಆಂಡ್ ರನ್ ಪ್ರಕರಣಗಳು ಹೆಚ್ಚಾಗುತ್ತಿವೆ. ಹಿಟ್ ಆಂಡ್ ರನ್ ಪ್ರಕರಣಗಳಲ್ಲಿ ಅಮಾಯಕರಿಗೆ ಅಪಘಾತ ನಡೆಸಿದರೂ ಪಾರಾಗಬಹುದೆಂದು ಭಾವಿಸುವರಿಗೆ ಈ ಮೂಲಕ ಗುರ್ ಗಾಂವ್ ಪೊಲೀಸರು ಸೂಕ್ತ ಉತ್ತರ ನೀಡಿದ್ದಾರೆ.

Most Read Articles

Kannada
English summary
A 21-year-old youth has surrendered at the court in connection with the Gurgaon BMW hit-and-run case. Earlier, the driver of the car had surrendered to the police, but they had found that he had not driven the car which killed two people including a pregnant woman.
Story first published: Wednesday, May 16, 2012, 9:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X