ಯುವರಾಜ್ ಸಿಂಗ್: ಸಿಟಿಯಿಂದ ಪಯಣ ಆರಂಭ

ಚಂಡಿಗಢದ ತರುಣ ಯುವರಾಜ್ ಸಿಂಗ್ ಕ್ರಿಕೆಟ್ ಜಗತ್ತಿನಲ್ಲಿ ಮಾತ್ರವಲ್ಲದೇ ಸಾವಿರಾರು ಜನರ ಹೃದಯದ ಪಿಚ್‌ನಲ್ಲೂ ಆವರಿಸಿಕೊಂಡಿದ್ದಾರೆ. ಲಂಡನಿನಲ್ಲಿ ಕಿಮಿಯೊಥೆರಪಿ ಚಿಕಿತ್ಸೆ ಮುಗಿಸಿ ದೆಹಲಿಗೆ ಯುವರಾಜ್ ಸಿಂಗ್ ಮರಳಿದ್ದು ಸದ್ಯದ ಲೇಟೆಸ್ಟ್ ಸುದ್ದಿ. ಈ ಸಂದರ್ಭದಲ್ಲಿ ಅವರ ಕಾರುಲೋಕದಲ್ಲೊಂದು ಕನ್ನಡ ಡ್ರೈವ್‌ಸ್ಪಾರ್ಕ್ ಸುತ್ತು....

ಯುವರಾಜ್ ಸಿಂಗ್ ಚಿನ್ನದ ಚಮಚ ಬಾಯಲಿಟ್ಟುಕೊಂಡು, ಚಿನ್ನದ ಬ್ಯಾಟ್ ಕೈನಲ್ಲಿಡಿದುಕೊಂಡು ಬೆಳೆದವರು. ಅಂದರೆ ಅವರು ಹುಟ್ಟು ಶ್ರೀಮಂತ. ಅಪ್ಪ ಯೋಗರಾಜ್ ಸಿಂಗ್ ಆರಂಭದಲ್ಲಿ ಕ್ರಿಕೆಟಿಗರಾಗಿದ್ದರು. ಮತ್ತೆ ಸಿನಿಮಾ ನಟರಾಗಿ ಜನಪ್ರಿಯರಾಗಿದ್ದರು. ಕ್ರಿಕೆಟ್ ಮಾತ್ರವಲ್ಲದೇ ಯುವಿ ಇಷ್ಟಪಡುವ ಇನ್ನೊಂದು ವಿಷ್ಯ ಡ್ರೈವಿಂಗ್. ಅವರಿಗೆ ವಾಹನ ಚಾಲನೆ ಬಲುಇಷ್ಟ.

2000ನೇ ಇಸವಿಯಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ ಯುವರಾಜ್ ಆಯ್ಕೆಯಾದಗ ಖರೀದಿಸಿದ ಚಿನ್ನದ ಬಣ್ಣದ ಕಾರಿನ ಹೆಸರು ಹೋಂಡಾ ಸಿಟಿ. ಇದು ಇವರ ಮೊದಲ ಕಾರು ಕೂಡ ಹೌದು. ಹೋಂಡಾ ಸಿಟಿಯಿಂದ ಇವರ ಕಾರು ಕ್ರೇಜು ಆರಂಭ. ಈಗ ಹಲವು ಐಷಾರಾಮಿ ಕಾರುಗಳ ಹೆಮ್ಮೆಯ ಮಾಲೀಕ.

ಆರು ಬಾಲಿಗೆ ಆರು ಸಿಕ್ಸ್ ಹೊಡೆದು ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ್ದರು. 2007ರಲ್ಲಿ ಐಸಿಸಿ ವರ್ಲ್ಡ್ ಟಿ20ಯಲ್ಲಿ ತ್ವರಿತವಾಗಿ ಅರ್ಧಶತಕ ಹೊಡೆದು ದಾಖಲೆ ಮಾಡಿ ಎಲ್ಲರ ಹೃದಯದಲ್ಲೂ ಕಿಂಗ್ ಆಗಿ ಹೊರಹೊಮ್ಮಿದ್ದರು.

ಆರು ಸಿಕ್ಸ್ ಹೊಡೆದ ಯುವರಾಜ್ ಪ್ರತಿಭೆಗೆ ಬಿಸಿಸಿಐ ಉಪಾಧ್ಯಕ್ಷರು ಪೊರ್ಷ್ 911 ಕಾರು ಉಡುಗೊರೆ ನೀಡಿದ್ದರು. ಜೊತೆಗೆ 10 ಲಕ್ಷ ರುಪಾಯಿ ಮೊತ್ತ ಬಹುಮಾನವನ್ನೂ ಪಡೆದಿದ್ದರು. ಪೊರ್ಷ್ 911 ನಂತರ ಇವರು ಇನ್ನಷ್ಟು ಐಷಾರಾಮಿ ಕಾರುಗಳ ಮಾಲೀಕರಾದರು.

ಯುವರಾಜ್ ಸಿಂಗ್ ಮರ್ಸಿಡಿಸ್ ಬೆಂಝ್, ಬಿಎಂಡಬ್ಲ್ಯು ಎಂ5 ಮತ್ತು ಎಂ3 ಕಾರುಗಳ ಹೆಮ್ಮೆಯ ಮಾಲೀಕರಾಗಿದ್ದಾರೆ. ಇದರಲ್ಲಿ ಎಂ5 ಕಾರಿನ ದರ ಸುಮಾರು ಒಂದು ಕೋಟಿ ರುಪಾಯಿ. ಎಂ3 ದರ 80 ಲಕ್ಷ ರುಪಾಯಿ ಇದೆ. ಯುವರಾಜನ ಕಾರು ಕಥೆ ಇಲ್ಲಿಗೆ ಮುಗಿಯುವುದಿಲ್ಲ. ಇತ್ತೀಚೆಗೆ ವಿಶ್ವಕಪ್ ಕ್ರಿಕೆಟಿನಲ್ಲಿನ ಸಾಧನೆಗಾಗಿ ಆಡಿ ಕಂಪನಿಯು ದುಬಾರಿ ಕಾರಿನ ಉಡುಗೊರೆ ನೀಡಿತ್ತು. (ಕನ್ನಡ ಡ್ರೈವ್‌ಸ್ಪಾರ್ಕ್)

Most Read Articles

Kannada
English summary
Yuvraj Singh, the Indian cricketer who has returned to India after his treatment for cancer has a enviable car collection that includes Audi Q5, BMW M5, BMW M3 and a Mercedes-Benz. His first car was a Honda City.
Story first published: Monday, April 9, 2012, 14:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X