ಬೆಂಗ್ಳೂರಲ್ಲಿ ಟಿಂಟೆಡ್ ನಿಷೇಧ ಗಡುವು ಜೂ.5ವರೆಗೆ ವಿಸ್ತರಣೆ

Posted By:
ಬೆಂಗಳೂರು, ಮೇ 18: ಕಾರುಗಳ ಗಾಜಿನ ಮೇಲೆ ಅಂಟಿಸಿರುವ ಟಿಂಟೆಡ್ ಫಿಲ್ಮ್ ತೆಗೆಯಲು ನೀಡಿದ ಗಡುವನ್ನು ಜೂನ್ 5ರವರೆಗೆ ಬೆಂಗಳೂರು ಟ್ರಾಫಿಕ್ ಪೊಲೀಸರು ವಿಸ್ತರಿಸಿದ್ದಾರೆ. ಮೇ 19ರವರೆಗೆ ಈ ಹಿಂದೆ ಗಡುವು ನೀಡಲಾಗಿತ್ತು.

"ಸಾರ್ವಜನಿಕರು ಮತ್ತು ವಿವಿಧ ಸಂಘ ಸಂಸ್ಥೆಗಳ ಮನವಿಯ ಮೇರೆಗೆ ಟಿಂಟೆಡ್ ಗ್ಲಾಸ್ ನಿಷೇಧ ಕಡ್ಡಾಯ ಅನುಷ್ಠಾನಕ್ಕೆ ಜೂನ್ 5ರವರೆಗೆ ಕಾಲಾವಕಾಶ ನೀಡಲಾಗಿದೆ" ಎಂದು ನಗರ ಪೊಲೀಸ್ ಆಯುಕ್ತ ಬಿ ಜಿ ಜ್ಯೋತಿಪ್ರಕಾಶ್ ಮಿರ್ಜಿ ಹೇಳಿದ್ದಾರೆ.

ವಾಹನ ಕಾಯಿದೆಯಲ್ಲಿ ಸೂಚಿಸಿದಂತೆ ಅನುಮತಿ ಇರುವುದಕ್ಕಿಂತ ಹೆಚ್ಚು ಪ್ರಮಾಣದ ಗಾಢ ಟಿಂಟೆಡ್ ಗ್ಲಾಸ್ ಬಳಸುವುದನ್ನು ನಿಷೇಧಿಸುವ ಕಾನೂನನ್ನು ಮೇ 4ರಿಂದ ಕಡ್ಡಾಯವಾಗಿ ಅನುಷ್ಠಾನಗೊಳಿಸುವಂತೆ ಇತ್ತೀಚೆಗೆ ಕೋರ್ಟ್ ಆದೇಶಿಸಿತ್ತು.

ಜೂನ್ 5ರ ನಂತರ ಟಿಂಟೆಡ್ ಗ್ಲಾಸ್ ತೆಗೆಯದಿದ್ದರೆ ಚಾಲಕರಿಗೆ 300 ರುಪಾಯಿ ದಂಡ ವಿಧಿಸಲಾಗುವುದು. ಎರಡನೇ ಬಾರಿ ಸಿಕ್ಕಿಬಿದ್ದರೆ 500 ರುಪಾಯಿ ದಂಡ ವಿಧಿಸಲಾಗುವುದು. ಮೂರನೇ ಬಾರಿ ಇದೇ ತಪ್ಪು ಪುನರಾವರ್ತನೆಯಾದರೆ ವಾಹನವನ್ನು ಟ್ರಾಫಿಕ್ ಪೊಲೀಸರು ಸೀಝ್ ಮಾಡಲಿದ್ದಾರೆ.

ಟಿಪ್ಸ್: ನೀವೇ ಫಿಲ್ಮ್ ಕಿತ್ತು ತೆಗೆಯಿರಿ

English summary
Tinted glass or Sun film removal deadline extended to June 5th in Bangalore city due to public demand. After deadline Bangalore traffic police will fine you Rs 300. Rs 500 for committing the offense a second time. If the act is repeated for the third time, the police will seize Your car.
Story first published: Friday, May 18, 2012, 10:10 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark