ಚಂದಿರನ ಮೇಲೆ ಕಾಲಿಟ್ಟವನ ಕಾರು ಖರೀದಿಸ್ತಿರಾ?

Posted By:

967ರ ಷೆವರ್ಲೆ ಕೊರ್ವೆಟ್ 427 ಕೂಪ್ ಕಾರೊಂದನ್ನು ಇಬೇ ತಾಣದಲ್ಲಿ ಹರಾಜಿಗಿಡಲಾಗಿದೆ. ಚಂದ್ರನ ಮೇಲೆ ಮೊದಲು ಕಾಲಿಟ್ಟ ನೀಲ್ ಆರ್ಮ್ ಸ್ಟ್ರಾಂಗ್ ಈ ಕಾರನ್ನು ಬಳಸುತ್ತಿದ್ದರಿಂದ ಈ ಹರಾಜಿಗೆ ವಿಶೇಷ ಮಹತ್ವ ಬಂದಿದೆ. ಅಮೆರಿಕದ ಗಗನಯಾತ್ರಿಗೆ ಫ್ಲೋರಿಡಾದ ಮೆಲ್ಬೊರ್ನ್ ನಲ್ಲಿ ಜಿಮ್ ರಾಥ್ಮನ್ ಷೆವರ್ಲೆ ಈ ಕಾರನ್ನು ನೀಡಿದ್ದರು.

ಚಂದ್ರನ ಮೇಲೆ ಪ್ರಪ್ರಥಮ ಬಾರಿಗೆ ಕಾಲಿಟ್ಟ ಗಗನಯಾತ್ರಿ ನೀಲ್ ಆರ್ಮ್ ಸ್ಟ್ರಾಂಗ್ ಈ ಕಾರನ್ನು ಒಂದು ವರ್ಷ ಬಳಸಿದ್ದರು. ನಂತರ ಬೇರೊಂದು ಕಾರನ್ನು ಖರೀದಿಸಿದ್ದರು. ಷೆವರ್ಲೆ ಕೊರ್ವೆಟ್ 427 ಕೂಪ್ ಕಾರನ್ನು ನೀಲ್ ಆರ್ಮ್ ಸ್ಟ್ರಾಂಗ್ ಗೆ 1966ರ ಡಿಸೆಂಬರ್ 15ರಂದು ಡೆಲಿವರಿ ಮಾಡಲಾಗಿದೆ.

ತದನಂತರ ನಾಸಾ ಉದ್ಯೋಗಿಯೊಬ್ಬರು ಈ ಕಾರನ್ನು ಖರೀದಿಸಿದ್ದರು. ಆತ ಈ ಕಾರು ಡ್ರೈವಿಂಗನ್ನು 1981ರಲ್ಲಿ ಕೊನೆಗೊಳಿಸಿದ್ದರು. ಕೆಲವು ತಿಂಗಳ ಹಿಂದೆ ಈ ಕಾರು ಮರುಮಾರಾಟವಾಗಿತ್ತು. ಇದೀಗ ಮತ್ತೆ ಇಬೇ ಡಾಟ್ ಕಾಂನಲ್ಲಿ ಈ ಕಾರನ್ನು ಹರಾಜಿಗಿಡಲಾಗಿದೆ.

ಈಗ ಇಬೇ ತಾಣದಲ್ಲಿ ನೀಲ್ ಆರ್ಮ್ ಸ್ಟ್ರಾಂಗ್ ಡ್ರೈವಿಂಗ್ ಮಾಡಿದ್ದ 1967ರ ಷೆವರ್ಲೆ ಕೊರ್ವೆಟ್ 427 ಕೂಪ್ ಕಾರನ್ನು 2,49,990 ಡಾಲರಿಗೆ ಹರಾಜಿಗಿಡಲಾಗಿದೆ. ಇದಕ್ಕಿಂತ ಕಡಿಮೆ ದರಕ್ಕೆ ಕೊರ್ವೆಟ್ 427 ಕೂಪ್ ಕಾರನ್ನು ಮಾರಾಟ ಮಾಡಲು ಪ್ರಸಕ್ತ ಮಾಲೀಕರು ಬಿಲ್ ಕುಲ್ ಒಪ್ಪೊದಿಲ್ಲವಂತೆ!

English summary
First Man On The Moon Neil Armstrong’s 1967 Chevrolet Corvette 427 coupe Car currently up for auction on eBay. If you want buy Neil Armstrongs Vintage car pay up to $249,990.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark