ಫೋರ್ಡ್ ಸಿಇಒ ಅಲನ್ ಮುಲಾಲಿ ಕನಸಿನ ಭಾರತ

Posted By:
ವಾಷಿಂಗ್ಟನ್, ಜೂ 20: ದೇಶದ ವಾಹನ ಮಾರುಕಟ್ಟೆಯಲ್ಲಿನ ಕಾರ್ಯತಂತ್ರಗಳನ್ನು, ಅಭಿವೃದ್ಧಿ ರೂಪುರೇಷೆಗಳನ್ನು ಫೋರ್ಡ್ ಅಧ್ಯಕ್ಷ ಮತ್ತು ಸಿಒಒ ಅಲನ್ ಮುಲಾಲಿ ಬಿಚ್ಚಿಟ್ಟಿದ್ದಾರೆ. ಆದರೆ ದೇಶದಲ್ಲಿ ಕಂಪನಿಯ ಪ್ರಗತಿ ನಿಧಾನಗತಿಯಲ್ಲಿದೆ ಎನ್ನುವುದನ್ನು ಹೇಳಲು ಅವರು ಮರೆಯಲಿಲ್ಲ.

ಹೂಡಿಕೆ: ಕಂಪನಿಯು ಈಗಾಗಲೇ ಚೆನ್ನೈ ಘಟಕಕ್ಕೆ 100 ಕೋಟಿ ಡಾಲರಿಗಿಂತಲೂ ಹೆಚ್ಚು ಹೂಡಿಕೆ ಮಾಡಿದೆ. ನಿರ್ಮಾಣ ಹಂತದಲ್ಲಿರುವ ಗುಜರಾತ್ ಘಟಕಕ್ಕೆ 100 ಕೋಟಿ ಡಾಲರ್ ಹೂಡಿಕೆ ಮಾಡುವ ಕುರಿತೂ ಕಂಪನಿ ಪ್ರಕಟಿಸಿದೆ. "ಇದನ್ನೆಲ್ಲೆ ತಿರುಗಿ ಪಡೆಯುತ್ತೇವೆ ಎಂಬ ಭ್ರಮೆ ನಮಗಿಲ್ಲ. ಇಲ್ಲಿನ ನಿಧಾನಗತಿ ಪ್ರಗತಿ ನಮಗೆ ಗೊತ್ತು. ಆದರೂ ನಾವು ಭಾರತದೆಡೆಗೆ ಆಕರ್ಷಿತರಾಗಿದ್ದೇವೆ" ಎಂದು ಅವರು ಹೇಳಿದ್ದಾರೆ.

ಭಾರತದ ಒಕ್ಕೂಟ ಮತ್ತು ರಾಜ್ಯ ಸರಕಾರದ ಅಧಿಕಾರಿಗಳೊಂದಿಗಿನ ವಿಶೇಷ ಸಭೆಯಲ್ಲಿ ಅಲನ್ ಮುಲಾಲಿ ಮಾತನಾಡುತ್ತಿದ್ದರು. "ಆರ್ಥಿಕ ಪ್ರಗತಿಗೆ ಪೂರಕವಾದ ಭಾರತದ ವಾತಾವರಣ ಹಿಡಿಸಿದೆ. ದೀರ್ಘಕಾಲದ ಕುರಿತು ಯೋಚನೆ ಮಾಡಿದರೆ ಇಲ್ಲಿನ ಮಾರುಕಟ್ಟೆ ಅನುಕೂಲಕರ" ಎಂದು ಅಲನ್ ಮುಲಾಲಿ ಹೇಳಿದ್ದಾರೆ.

ಹೊಸ ವಾಹನಗಳು: "ಕಂಪನಿಯು ಮುಂಬರುವ ದಿನಗಳಲ್ಲಿ ಸುಮಾರು 8 ಹೊಸ ವಾಹನಗಳನ್ನು ಪರಿಚಯಿಸಲಿದೆ. ನೂತನ ಹೂಡಿಕೆಯು ಸುಮಾರು 5 ಸಾವಿರ ಪ್ರತ್ಯಕ್ಷ ಉದ್ಯೋಗ ಸೃಷ್ಟಿಸಲಿದೆ. ತಮಿಳುನಾಡಿನಲ್ಲಿ ಕಂಪನಿಯು ಸುಮಾರು 10 ಸಾವಿರಕ್ಕಿಂತಲೂ ಹೆಚ್ಚು ಸಿಬ್ಬಂದಿಗಳನ್ನು ಹೊಂದಲಿದೆ" ಎಂದು ಅವರು ಮಾಹಿತಿ ನೀಡಿದ್ದಾರೆ.

ಫೋರ್ಡ್ ಇಂಡಿಯಾ ಕಂಪನಿಯು ಸಣ್ಣ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ಎಕೊಸ್ಪೋರ್ಟ್ ಅಭಿವೃದ್ಧಿಪಡಿಸುತ್ತಿದೆ. ಈ ಕಾರು 2011ರಲ್ಲಿ ರಸ್ತೆಗಿಳಿದ ಫಿಗೊ, ಕ್ಲಾಸಿಕ್, ಎಂಡೊವರ್ ಮತ್ತು ಫಿಯೆಸ್ಟಾ ಬಳಗಕ್ಕೆ ಸೇರಲಿದೆ. ಕಂಪನಿಯು 20120ಕ್ಕೆ ದೇಶದಲ್ಲಿ ಮೂರನೇ ಬೃಹತ್ ಜಾಗತಿಕ ವಾಹನ ಮಾರುಕಟ್ಟೆಯಾಗುವ ಗುರಿಯನ್ನು ಹೊಂದಿದೆ.

ವಿಸ್ತರಣೆ: ಫಿಗೊ ಕಾರನ್ನು ಸುಮಾರು 50 ದೇಶಗಳಿಗೆ ರಫ್ತು ಮಾಡಲು ಕಂಪನಿ ಯೋಜಿಸಿದೆ. ಈಗ ಫಿಗೊ ಸುಮಾರು 35 ವಾಹನ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿದೆ. ಈ ವರ್ಷದ ಮಧ್ಯಾವದಿಗೆ ಕಂಪನಿಯ ಚೆನ್ನೈ ಘಟಕದ ವಿಸ್ತರಣೆ ಪೂರ್ಣಗೊಳ್ಳಲಿದೆ. ಇಲ್ಲಿನ ಉತ್ಪಾದನಾ ಸಾಮರ್ಥ ವರ್ಷಕ್ಕೆ 2,50.000 ಯುನಿಟಿಗೆ 3,40,000 ಯುನಿಟ್ ಗೆ ತಲುಪಲಿದೆ.

ಹತ್ತು ದಿನಕ್ಕೊಂದು ಹೊಸ ಮಳಿಗೆ: "ಪ್ರತಿ ಹತ್ತು ದಿನಕ್ಕೊಂದರಂತೆ ಕಂಪನಿಯು ಹೊಸ ಮಾರಾಟ ಅಥವಾ ಸರ್ವಿಸಿಂಗ್ ಸೆಂಟರನ್ನು ಭಾರತದಲ್ಲಿ ತೆರೆಯುತ್ತಿದ್ದೇವೆ. ಗ್ರಾಹಕರಿಗೆ ಕಂಪನಿಯ ಅತ್ಯುತ್ತಮ ಸೇವೆ ದೊರಕಬೇಕೆನ್ನುವುದು ಇದರ ಉದ್ದೇಶವಾಗಿದೆ" ಎಂದು ಫೋರ್ಡ್ ಸಿಇಒ ಹೇಳಿದ್ದಾರೆ. ಇದರೊಂದಿಗೆ ಭಾರತದಲ್ಲಿ ಕಂಪನಿಯು ರಸ್ತೆ ಸುರಕ್ಷತೆ, ಶಿಕ್ಷಣ ಮತ್ತು ಆರೋಗ್ಯ ಸೇವಾ ಕಾರ್ಯತಂತ್ರಗಳನ್ನೂ ಮಾಡುತ್ತಿದೆ ಎಂದರು.

ಇದೇ ಕಾರ್ಯಕ್ರಮದಲ್ಲಿ ಮಹೀಂದ್ರ ಗ್ರೂಪಿನ ಎಂಡಿ ಆನಂದ್ ಮಹೀಂದ್ರ ಉಪಸ್ಥಿತರಿದ್ದರು. ಅವರು ಮಾತನಾಡಿ, "ಅಮೆರಿಕದಲ್ಲಿ ಕಂಪನಿಯು ಅಗ್ರ ಮೂರನೇ ಟ್ರಾಕ್ಟರ್ ಕಂಪನಿಯಾಗಲು ಯೋಜಿಸಿದೆ" ಎಂದರು. 1985ರಲ್ಲಿ ಮಹೀಂದ್ರ ಮತ್ತು ಫೋರ್ಡ್ ಕಂಪನಿಯು ಜಂಟಿ ಉದ್ಯಮ ಸ್ಥಾಪಿಸಿತ್ತು. 1998ರಲ್ಲಿ ಫೋರ್ಡ್ ಕಂಪನಿಯು ಜಂಟಿ ಉದ್ಯಮದಿಂದ ಬಹುಪಾಲು ಷೇರು ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು ಎಂಬ ಮಾಹಿತಿಯನ್ನೂ ಆನಂದ್ ಮಹೀಂದ್ರ ನೀಡಿದ್ದಾರೆ.

English summary
Ford president and CEO Alan Mulally revealed Company's growth strategy in India. Ford will invest $1 billion in new Gujarat Plant. Ford will launch 8 new vehicles in India. 
Story first published: Tuesday, June 19, 2012, 10:15 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark