ಅಗ್ಗದ ಫೋರ್ಡ್ ಫಿಯೆಸ್ಟಾ ರಸ್ತೆಗೆ, ದರ 7 ಲಕ್ಷ ರು.

ತನ್ನ ದರ ಕಾರ್ಯತಂತ್ರದ ಕುರಿತು ಮರುಪರಿಶೀಲಿಸುವುದಾಗಿ ಫೋರ್ಡ್ ಇತ್ತೀಚೆಗೆ ಪ್ರಕಟಿಸಿತ್ತು. ನೂತನ ಫಿಯೆಸ್ಟಾ ಆ್ಯಂಬಿಯೆಂಟ್ ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳಲ್ಲಿ ದೊರಕುತ್ತಿದೆ. ಇದು 1.5 ಲೀಟರ್ ಎಂಜಿನ್ ಹೊಂದಿದೆ.
ಸದ್ಯ ರಸ್ತೆಯಲ್ಲಿರುವ ಫಿಯೆಸ್ಟಾ ಕಾರನ್ನು ಹೆಚ್ಚು ಜನರು ಇಷ್ಟಪಟ್ಟಿದ್ದರು. ಆದರೆ ದರ ತುಸು ಹೆಚ್ಚಾಗಿದೆ ಎನ್ನುವುದು ಎಲ್ಲರ ದೂರಾಗಿತ್ತು. ಯಾಕೆಂದರೆ ಫಿಯೆಸ್ಟಾ ಸೆಡಾನ್ ಕಾರಿನ ಆರಂಭಿಕ ದರ 8.25 ಲಕ್ಷ ರುಪಾಯಿಯಿದೆ. ಫಿಯೆಸ್ಟಾ ಡೀಸೆಲ್ ಕಾರಿನ ದರ 10.44 ಲಕ್ಷ ರುಪಾಯಿ ಇದೆ. ಇವೆಲ್ಲ ದೆಹಲಿ ಎಕ್ಸ್ ಶೋರೂಂ ದರ. ಪ್ರತಿಸ್ಪರ್ಧಿ ಕಂಪನಿಗಳ ಮಧ್ಯಮ ಗಾತ್ರದ ಸೆಡಾನ್ ಕಾರುಗಳಿಗೆ ಹೋಲಿಸಿದರೆ ಫಿಯೆಸ್ಟಾ ಕೊಂಚ ದುಬಾರಿ ಎಂದೆನಿಸುತ್ತದೆ.
"ಹೋಂಡಾ ಸಿಟಿ ಮತ್ತು ಹ್ಯುಂಡೈ ವೆರ್ನಾನಂತಹ ಕಾರುಗಳೊಂದಿಗೆ ನೂತನ ಫಿಯೆಸ್ಟಾ ಆ್ಯಂಬಿಯೆಟ್ ಪ್ರತಿಸ್ಪರ್ಧೆ ನಡೆಸಲಿದೆ" ಎಂದು ಜಾಗತಿಕ ಫಿಯೆಸ್ಟಾ ಕಾರಿನ ನೂತನ ಆವೃತ್ತು ಕುರಿತು ಕಂಪನಿಯ ಅಧ್ಯಕ್ಷರಾದ ಮೈಕಲ್ ಎನ್ ಬೊನೆಮ್ ಹೇಳುತ್ತಾರೆ. (ಕನ್ನಡ ಡ್ರೈವ್ ಸ್ಪಾರ್ಕ್)


Click it and Unblock the Notifications








