ಕಾರುಗಳಿಗೆ ಮೈಲೇಜ್ ಲೇಬಲ್ ಹಚ್ಚುವತ್ತ ಸರಕಾರ

ದೇಶದಲ್ಲಿ ಮಾರಾಟವಾಗುವ ಕಾರುಗಳಿಗೆ ಕಠಿಣ ಮೈಲೇಜ್ ನೀತಿ ಅಳವಡಿಸುವ ಪ್ರಸ್ತಾಪವನ್ನು ಕೇಂದ್ರ ಸರಕಾರ ಮಾಡಿದೆ. ಮಾರಾಟ ಮಾಡುವ ಎಲ್ಲಾ ಕಾರುಗಳಿಗೂ ಕಂಪನಿಗಳು ಇಂಧನ ದಕ್ಷತೆಯ ಲೇಬಲ್ ಹಚ್ಚಬೇಕೆಂಬ ಷರತ್ತಿನ ಪ್ರಸ್ತಾಪ ಇದಾಗಿದೆ. ಜೊತೆಗೆ 2015ರಿಂದ ಕಾರು ಕಂಪನಿಗಳಿಗೆ ಹೊಸ ಮೈಲೇಜ್ ಸ್ಟಾಂಡರ್ಡ್ ವಿಧಿಸಲು ಸರಕಾರ ನಿರ್ಧರಿಸಿದೆ.

ಏನಿದು ಮೈಲೇಜ್ ಲೇಬಲ್?: ಕಾರು ಉತ್ತಮ ಸ್ಥಿತಿಯಲ್ಲಿರುವಾಗ ನೀಡುವ ಮೈಲೇಜ್ ಮಾಹಿತಿಯ ಚೀಟಿಯನ್ನು ಕಾರಿನಲ್ಲಿ ಅಂಟಿಸಬೇಕು ಎನ್ನುವ ಪ್ರಸ್ತಾಪ ಇದಾಗಿದೆ. ಜೊತೆಗೆ ಬೇರೆ ಕಾರುಗಳಿಗೆ ಹೋಲಿಕೆ ಮಾಡುವಾಗ ಈ ಮೈಲೇಜ್ ಎಷ್ಟು ಉತ್ತಮ ಎನ್ನುವ ಮಾಹಿತಿಯೂ ಲೇಬಲ್‌ನಲ್ಲಿರಬೇಕು. ಈ ಮೈಲೇಜ್ ಚೀಟಿಯನ್ನು ಪ್ರತಿಕಾರುಗಳಿಗೆ ಅಂಟಿಸುವುದು 2015ರ ನಂತರ ಕಡ್ಡಾಯವಾಗಲಿದೆ.

ಕಾರು ಮೈಲೇಜ್ ಹೆಚ್ಚಿಸಿದರೆ ಕಾರು ದರ ಹೆಚ್ಚಾಗುವ ಸಾಧ್ಯತೆಯಿದೆ ಎನ್ನುವುದು ಸರಕಾರಕ್ಕೆ ಗೊತ್ತಿದೆ. ಆದರೆ ಮೈಲೇಜ್ ಹೆಚ್ಚಾದರೆ ಒಂದೆರಡು ವರ್ಷಗಲ್ಲಿ ಇಂಧನ ಬಳಕೆಯ ವೆಚ್ಚ ಕಡಿಮೆಯಾಗಲಿದೆ. ಸರಕಾರದ ಈ ಖಡಕ್ ನೀತಿಯಿಂದಾಗಿ ಕಾರು ಮಾರುಕಟ್ಟೆಯಲ್ಲಿ ಮೈಲೇಜ್ ಸಮರ ಹೆಚ್ಚಾಗುವ ನಿರೀಕ್ಷೆಯಿದೆ.

2020ಕ್ಕೆ ಪ್ರತಿಕಾರುಗಳ ಸ್ಟಾಂಡರ್ಡ್ ಮೈಲೇಜ್ ಲೀಟರಿಗೆ 18.15 ಕಿ.ಮೀ. ಇರಬೇಕಿದೆ. ಈಗ ಮಾರಾಟವಾಗುತ್ತಿರುವ ಟಾಪ್ ಟೆನ್ ಕಾರುಗಳ ಮೈಲೇಜ್ ಪ್ರತಿಲೀಟರಿಗೆ 16.42 ಕಿ.ಮೀ. ಇದೆ. ಇದನ್ನು ಲೀಟರಿಗೆ 20.79 ಕಿ.ಮೀ. ಮಾಡುವ ಗುರಿಯನ್ನು ಸರಕಾರ ಹೊಂದಿದೆ.

ಆದರೆ ಸರಕಾರದ ಈ ಮೈಲೇಜ್ ನೀತಿಗೆ ಹಲವು ಕಾರುಕಂಪನಿಗಳು ಬೆಚ್ಚಿ ಬಿದ್ದಿವೆ. ಡೈಮ್ಲಾರ್ ಎಜಿ, ಮಹೀಂದ್ರ ಆಂಡ್ ಮಹೀಂದ್ರ, ಬಿಎಂಡಬ್ಲ್ಯು, ನಿಸ್ಸಾನ್, ಆಡಿ, ಟೊಯೊಟಾ, ಹಿಂದೂಸ್ತಾನ್ ಮೋಟರ್ಸ್ ಮತ್ತು ಫೋಕ್ಸ್‌ವ್ಯಾಗನ್ ಕಂಪನಿಗಳು ತಮ್ಮ ಮೈಲೇಜನ್ನು ಸಾಕಷ್ಟು ಇಂಪ್ರೂವ್ ಮಾಡಬೇಕಿದೆ. ಮಾರುತಿ ಸುಜುಕಿ ಮತ್ತು ಹ್ಯುಂಡೈ ಮೋಟರ್ಸ್‌ಗಳೂ ಮೈಲೇಜ್ ಹೆಚ್ಚಿಸಲು ಪ್ರಯತ್ನಮಾಡಬೇಕಿದೆ ಎಂದು ಸರಕಾರದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸ್ಟಾಂಡರ್ಡ್ ಮೈಲೇಜಿಗಿಂತ ಕಡಿಮೆಯಿದ್ರೆ ಸರಕಾರವು ಕಾರುಕಂಪನಿಗಳ ಮೇಲೆ 10 ಲಕ್ಷ ರುಪಾಯಿಗಿಂತ ಹೆಚ್ಚು ದಂಡ ವಿಧಿಸಲು ಅವಕಾಶವಿದೆ. ಅಂದರೆ ಗ್ರಾಹಕರೊಬ್ಬರು ಕಾರು ಖರೀದಿಸಿದಾಗ ಆ ಲೇಬಲಿನಲ್ಲಿ ಉಲ್ಲೇಖಿಸಿದಷ್ಟು ಮೈಲೇಜ್ ಇಲ್ಲಾಂದ್ರೆ ಈ ಫೈನ್ ವಿಧಿಸಲಾಗುತ್ತದೆ.

ಆದರೆ ಕಾರು ಕಂಪನಿಗಳು ಸರಕಾರದ ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿವೆ. ದೇಶದ ಕೆಟ್ಟ ರಸ್ತೆ, ಗುಣಮಟ್ಟವಿಲ್ಲದ ಇಂಧನ ಇತ್ಯಾದಿ ಕಾರಣಗಳಿಂದ ಇಷ್ಟೊಂದು ಮೈಲೇಜ್ ಪಡೆಯಲು ಸಾಧ್ಯವಿಲ್ಲವೆನ್ನುವುದು ಇವುಗಳ ವಾದ. ಶೀಘ್ರದಲ್ಲಿ ಭಾರತ್ 4 ಗುಣಮಟ್ಟದ ಇಂಧನವನ್ನು ಎಲ್ಲಾ ಕಡೆ ಪೂರೈಸಲಾಗುವುದು ಎಂದು ಸರಕಾರ ಹೇಳಿದೆ. ಇದರಿಂದ ಮೈಲೇಜ್ ಶೇಕಡ 2.8ರಷ್ಟು ಹೆಚ್ಚಾಗಲಿದೆ. (ಕನ್ನಡ ಡ್ರೈವ್‌ಸ್ಪಾರ್ಕ್)

Most Read Articles

Kannada
English summary
The central government has proposed some tough new measures to improve the mileage of cars sold in India. According to the government's proposal, carmakers will have to put fuel efficiency labels on all the cars they sell. The government has also set new mileage standards that carmakers have to adhere to from 2015.
Story first published: Monday, April 16, 2012, 14:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X