ಪೆಂಗ್ವಿನ್ ಕೋಶ ಹೊತ್ತು ದೇಶ ಸುತ್ತಲಿದೆ ಅಂಬಾಸಡರ್

ಪೆಂಗ್ವಿನ್ ಇಂಡಿಯಾ ಕಂಪನಿಯು ತನ್ನ ದೇಶ ಸುತ್ತುವ ಯಾತ್ರೆಗೆ ಹಿಂದೂಸ್ತಾನ್ ಮೋಟರ್ಸ್ ಕಂಪನಿಯ ಐಕಾನಿಕ್ ಅಂಬಾಸಡರ್ ಕಾರನ್ನೇ "ರಥ"ವಾಗಿ ಆಯ್ಕೆ ಮಾಡಿದೆ. ದೇಶದ ಪ್ರಮುಖ ಮೆಟ್ರೊ ಸಿಟಿಗಳಲ್ಲಿ ಈ ಭಾರತ ದರ್ಶನ ಯಾತ್ರೆ ನಡೆಯಲಿದೆ.
ಹಿಂದೂಸ್ತಾನ್ ಮೋಟರ್ಸ್ ಕಂಪನಿಯ ಅಂಬಾಸಡರ್ ಕಾರಿನಲ್ಲಿ ಇಬುಕ್ಕುಗಳು ಮತ್ತು ಡಿಜಿಟಲ್ ಕಾಪಿಗಳು ಇರಲಿವೆ. ದೇಶದ ಯುವಕರಲ್ಲಿ ಓದುವ ಹುಚ್ಚು ಹೆಚ್ಚಿಸಲು ಅಂಬಾಸಡರ್ ಕಾರು ಮೂಲಕ ದೇಶ ಸುತ್ತಲಿದ್ದೇವೆ ಎಂದು ಕಂಪನಿ ಹೇಳಿದೆ.
ಹಿಂದೂಸ್ತಾನ್ ಮೋಟರ್ಸ್ ಕಂಪನಿಯು ಪೆಟ್ರೋಲ್, ಡೀಸೆಲ್ ಮತ್ತು ಸಿಎನ್ ಜಿ ಅಂಬಾಸಡರ್ ಕಾರುಗಳನ್ನು ಮಾರಾಟ ಮಾಡುತ್ತಿದೆ. ಕಂಪನಿಯು ಕಳೆದ ವರ್ಷ ಅಂಬಾಸಡರ್ ಕಾರಿಗೆ ಹೊಸ ಲುಕ್ ನೀಡಿತ್ತು. ಅಂದರೆ ಡ್ಯಾಷ್ ಬೋರ್ಡ್ ಮತ್ತು ಇಂಟಿರಿಯರ್ ವಿನ್ಯಾಸವನ್ನು ಪರಿಷ್ಕರಿಸಿತ್ತು. ಕಾಮನ್ ರೈಲ್ ಎಂಜಿನ್ ತಂತ್ರಜ್ಞಾನ ಅಳವಡಿಸುವ ಯೋಜನೆಯೂ ಕಂಪನಿಗಿದೆಯೆಂದು ಹಿಂದೂಸ್ತಾನ್ ಮೋಟರ್ಸ್ ಹೇಳಿದೆ.


Click it and Unblock the Notifications








