ಹೊಸ ಮಿಟ್ಸುಬಿಸಿ ಮೊಂಟೆರೊ ರಸ್ತೆಗೆ, ದರ 41 ಲಕ್ಷ

Posted By:

ಮಿಟ್ಸುಬಿಸಿ ಮೊಂಟೆರೊ ಪರಿಷ್ಕೃತ ಆವೃತ್ತಿಯೊಂದನ್ನು ಹಿಂದೂಸ್ತಾನ್ ಮೋಟರ್ಸ್ ಲಿಮಿಟೆಡ್ ಪರಿಚಯಿಸಿದೆ. ಹಳೆಯ ಆವೃತ್ತಿಯಲ್ಲಿ ಕೆಲವು ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿ ನೂತನ ಮೊಂಟೆರೊ ಎಸ್‌ಯುವಿಯನ್ನು ರಸ್ತೆಗಿಳಿಸಲಾಗಿದೆ. ಹೊಸ ಮೊಂಟೆರೊ ದರ 41 ಲಕ್ಷ ರು. ಆಸುಪಾಸಿನಲ್ಲಿದೆ.

ಹೊಸ ಫೀಚರುಗಳು ಯಾವುದಿದೆ ಅಂತೀರಾ? ಮುಂಭಾಗದ ಬಂಪರಿಗೆ ಕಡುಬಣ್ಣದ ವಿನ್ಯಾಸ. ಬೈ ಕ್ಷೆನನ್ ಲೈಟ್ ಪ್ಯಾನೆಲಿನ ಎರಡೂ ತುದಿಯಲ್ಲಿ ಕ್ರೋಮ್ ರೇಡಿಯೆಟರ್ ಗ್ರಿಲ್, ಹೊಸ ವಿನ್ಯಾಸದ ಪವರ್ ವಿಂಡೋ ಪ್ಯಾನೆಲ್ ಮತ್ತು ಹೊಸ ಮಾದರಿಯ ಚರ್ಮದ ಸೀಟು ಇತ್ಯಾದಿ ಹೊಸ ಫೀಚರುಗಳು ಇವೆ. ಕಾರಿನೊಳಗೂ ಕೆಲವು ಹೊಸ ವಿನ್ಯಾಸಗಳನ್ನು ಪರಿಚಯಿಸಲಾಗಿದೆ.

ಮಿಟ್ಸುಬಿಸಿ ಮೊಂಟೆರೊ ಎಸ್‌ಯುವಿ 3,200 ಸಿಸಿಯ ಡಿಒಎಚ್‌ಸಿ ಡೀಸೆಲ್ ಎಂಜಿನ್ ಹೊಂದಿದೆ. ಈ ಟರ್ಬೊ ಚಾರ್ಜರ್ ಎಂಜಿನ್ 3,800 ಆವರ್ತನಕ್ಕೆ 202 ಪಿಎಸ್ ಪವರ್ ಮತ್ತು 2 ಸಾವಿರ ಆವರ್ತನಕ್ಕೆ 441 ಟಾರ್ಕ್ ಪವರ್ ನೀಡುತ್ತದೆ. ಸಾಲಿಡ್ ಬಿಳಿ, ಮೈಕಾ ಕಪ್ಪು, ಕೂಲ್ ಸಿಲ್ವರ್ ಮೆಟಾಲಿಕ್ ಶೇಡ್ ಬಣ್ಣಗಳ ಆಯ್ಕೆಗಳಲ್ಲಿ ದೊರಕುತ್ತದೆ.

ಮಿಟ್ಸುಬಿಸಿ ಮೊಂಟೆರೊ ಕಾರು ರೇಸಿಂಗ್‌ನಲ್ಲೂ ಭಾಗವಹಿಸಿದ ಎಸ್‌ಯುವಿ. 1983ರಲ್ಲಿ ಪ್ರಪ್ರಥಮ ಬಾರಿಗೆ ಪ್ಯಾರಿಸ್ ಡೆಕರ್ ರಾಲಿಯಲ್ಲಿ ಭಾಗವಹಿಸಿತ್ತು. 1985ರಲ್ಲಿ ಪ್ಯಾರಿಸ್ ಡೆಕರ್ ರಾಲಿಯಲ್ಲಿ ಪ್ರಥಮ ಸ್ಥಾನವನ್ನು ಮೊಂಟೆರೊ ಪಡೆದಿತ್ತು.

ಮಿಟ್ಸುಬಿಸಿ ಮೊಂಟೆರೊ ಎಕ್ಸ್‌ಶೋರೂಂ ದರ 41,34,000 ರುಪಾಯಿ ಇದೆ. (ಕನ್ನಡ ಡ್ರೈವ್‌ಸ್ಪಾರ್ಕ್)

English summary
HM Launches New Upgraded Mitsubishi Montero. The new Montero boasts of several new features including body coloured bumpers, chrome radiator grille, improved interior fit and finish and new stitching on leather seats. Mitsubishi Montero ex-showroom Price Rs. 41,34,000.
Story first published: Thursday, April 19, 2012, 10:36 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark