2013ರಲ್ಲಿ ದೇಶದ ರಸ್ತೆಗಿಳಿಯಲಿರುವ ಹೊಂಡಾ ಬ್ರಿಯೊ ಸೆಡಾನ್
ಭಾರತ ಮಾರುಕಟ್ಟೆಯನ್ನು ಪ್ರಮುಖವಾಗಿಯೂ ಗುರಿಯಾಗಿರಿಸಿ ಹೊಂಡಾ ಸದ್ಯದಲ್ಲೇ ಹೊಸ ಕಾರನ್ನು ಪರಿಚಯಿಸಲಿದೆ. ಜಪಾನ್‌ನ ಈ ದೈತ್ಯ ಆಟೋ ಕಂಪನಿಯಿಂದ 2014ರಲ್ಲಿ ವೆನೆರೆಬಲ್ ಸಿಟಿ ಕೂಡಾ ಆಗಮಿಸುವ ನಿರೀಕ್ಷೆಯಿದೆ.
1.6 ಲೀಟರ್‌ನ ಐ-ಡಿಟೆಕ್ ತಂತ್ರಜ್ಞಾನದ ಡೀಸೆಲ್ ಎಂಜಿನ್ ಹೊಂದಿರುವ ಬ್ರಿಯೊ ಬಗ್ಗೆ ಗ್ರಾಹಕರು ಅತ್ಯಂತ ಕುತೂಹಲ ಹೊಂದಿದ್ದಾರೆ. ಈಗಾಗಲೇ ಈ ಬಹುನಿರೀಕ್ಷಿತ ಕಾರು ಯುರೋಪ್ ಮಾರುಕಟ್ಟೆಯನ್ನು ಪ್ರವೇಶಿಸಿದೆ.
ಬ್ರಿಯೊ ಸೆಡಾನ್ ಡೀಸೆಲ್ ಕಾರು ಮುಂದಿನ ವರ್ಷ ಭಾರತದ ರಸ್ತೆಗಿಳಿಯಲಿದೆ ಎಂದು ಹೊಂಡಾ ಥೈಲಾಂಡ್ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದ್ದು, ಅತ್ಯಾಕರ್ಷಕ ಪೋಟೊ ಬಿಡುಗಡೆ ಮಾಡಲಾಗಿದೆ. ಆದರೆ ಈ ಚಿತ್ರದ ಹೊರತಾಗಿ ಕಾರಿನ ಇನ್ನಷ್ಟು ವೈಶಿಷ್ಟ್ಯಗಳ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ಪ್ರಮುಖವಾಗಿಯೂ ಯುವ ಜನಾಂಗವನ್ನು ಗುರಿಯಾಗಿರಿಸಿಕೊಂಡು ಕಾರು ತಯಾರಿಸಲಾಗುತ್ತಿದೆ.
ಬ್ರಿಯೊ ಸೆಡಾನ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಬರಲಿರುವುದಂತೂ ಖಚಿತ. ಕಾರಿನ ದರ 5ಲಕ್ಷದಿಂದ 6.5 ಲಕ್ಷ ರುಪಾಯಿಗಳ ವರೆಗೆ ಇರುವ ಸಾಧ್ಯತೆಯಿದೆ.


Click it and Unblock the Notifications









