ಹಬ್ಬದ ಸಂಭ್ರಮ ಲೆಕ್ಕಿಸದೆ ಹ್ಯುಂಡೈನಿಂದ ಕಾರು ದರ ಏರಿಕೆ

Written By:
To Follow DriveSpark On Facebook, Click The Like Button
ಗ್ರಾಹಕರು ಹಬ್ಬದ ಸಂಭ್ರಮದಲ್ಲಿರುವಂತೆಯೇ ಕಾರು ಮಾರಾಟ ಪ್ರಕಿಯೆ ಭರದಲ್ಲಿ ಸಾಗುತ್ತಿರುವುದು ಸಾಮಾನ್ಯ. ಆದರೆ ಇದನ್ನೇ ಉಚಿತ ಸಂದರ್ಭವೆಂದು ಪರಿಗಣಿಸಿರುವ ಹ್ಯುಂಡೈ ಇಂಡಿಯಾ ಕಾರು ತಯಾರಕ ಕಂಪನಿ ತನ್ನ ಎಲ್ಲ ಮಾದರಿಯ ಕಾರುಗಳಿಗೂ 5000 ರೂಪಾಯಿಗಳಷ್ಟು ದರವನ್ನು ಏರಿಕೆಗೊಳಿಸುವುದಾಗಿ ಘೋಷಿಸಿದೆ.

ಇದರೊಂದಿಗೆ ದೀಪಾವಳಿ ಸಂಭ್ರಮದಲ್ಲಿರುವ ಹ್ಯುಂಡೈ ಗ್ರಾಹಕರು ನಿರಾಸೆ ಅನುಭವಿಸುವಂತಾಗಿದೆ. ಸೆಪ್ಟೆಂಬರ್ ಅಂತ್ಯದ ವೇಳೆ ದೇಶದ ಪ್ರಮುಖ ಕಾರು ತಯಾರಕ ಕಂಪನಿಗಳು ದರ ಏರಿಕೆಗೊಳಿಸಿದ್ದವು. ಇದೀಗ ನವೆಂಬರ್ ಒಂದರಿಂದಲೇ ಅನ್ವಯವಾಗುವಂತೆ ತನ್ನ ಮಾಡೆಲ್‌ಗಳಿಗೆ ಹ್ಯುಂಡೈ ದರ ಏರಿಕೆ ಮಾಡಿದೆ.

ಏರುತ್ತಿರುವ ಆಮದು ವೆಚ್ಚ, ಹಣದುಬ್ಬರ ಒತ್ತಡ ಹಾಗೂ ಡೀಸೆಲ್ ದರ ವರ್ಧನೆಯಿಂದಾಗಿ ಉಂಟಾಗಿರುವ ಸರಕು ಶುಲ್ಕ ಹೆಚ್ಚಳದಿಂದಾಗಿ ಬೆಲೆಯೇರಿಕೆ ಅನಿವಾರ್ಯವಾಗಿದೆ ಎಂದು ಕಂಪನಿ ಸ್ಪಷ್ಟಪಡಿಸಿದೆ.

ಈ ಹಬ್ಬದ ಸೀಸನಿನಲ್ಲಿ ಬಹುತೇಕ ಕಾರು ತಯಾರಕರು ಸ್ಪೆಷಲ್ ಅಡಿಷನ್ ಹಾಗೂ ಸ್ಪೆಷಲ್ ಕೊಡುಗೆಗಳ ಮೂಲಕ ಗ್ರಾಹಕರನ್ನು ಸಮೀಪಿಸುತ್ತಿದೆ. ಆದರೆ ದೀಪಾವಳಿ ಶುಭ ಅವಸರದಲ್ಲಿ ತದ್ವಿರುದ್ಧವಾಗಿ ಯೋಚನೆ ಮಾಡಿರುವ ಹ್ಯುಂಡೈ ಕಾರು ದರ ಏಱರಿಕೆ ತತ್‌ಕ್ಷಣದಿಂದ ಜಾರಿಗೆ ತರಲು ಮುಂದಾಗಿದೆ. ಹಾಗಿದ್ದರೂ ಕಡಿಮೆ ದರ ಏರಿಕೆ ಮಾಡುವ ಮೂಲಕ ಗ್ರಾಹಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವ ಪ್ರಯತ್ನ ಮಾಡಲಾಗಿದೆ ಎಂದು ಹ್ಯುಂಡೈ ಮೋಟಾರ್ ಇಂಡಿಯಾ ಉಪಾಧ್ಯಕ್ಷ (ನ್ಯಾಷನಲ್ ಸೇಲ್ಸ್ ಆಂಡ್ ಮಾರ್ಕೆಟಿಂಗ್) ರಾಕೆಶ್ ಶ್ರೀವಾಸ್ತವಾ ವಾದಿಸಿದ್ದಾರೆ. 

English summary
Hyundai Motors has announced yet another price hike. The South Korea based car maker has stated that increasing input costs had lead to its decision to increase its car prices.
Story first published: Wednesday, October 31, 2012, 10:49 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark