ಹೋಂಡಾ ನಂತ್ರ ಹ್ಯುಂಡೈನಿಂದ ಗುಡ್ ಬೈ ಮಂತ್ರ
ದಕ್ಷಿಣ ಕೊರಿಯಾದ ವಾಹನ ಕಂಪನಿ ಹ್ಯುಂಡೈ ದೇಶದ ರಸ್ತೆಗೆ 1999ರಲ್ಲಿ ಆಗಮಿಸಿತ್ತು. ಆ ಸಮಯದಲ್ಲಿ ಕಂಪನಿಯು ಸ್ಯಾಂಟ್ರೊ ಹ್ಯಾಚ್ ಮತ್ತು ಅಸೆಂಟ್ ಸೆಡಾನ್ ಕಾರುಗಳನ್ನು ಪರಿಚಯಿಸಿತ್ತು. ಈ ಕಾರುಗಳು ಮಾರುತಿ ಸುಜುಕಿಯ ಝೆನ್, ಎಸ್ಟಿಮ್ ನಂತಹ ಕಾರುಗಳಿಗೆ ಪ್ರಬಲ ಪೈಪೋಟಿ ನೀಡಿತ್ತು.
ಹೋಂಡಾ ಸಿಟಿಗೆ ಎದುರಾಗಿ ಹ್ಯುಂಡೈ ಅಸೆಂಟ್ ಮಾರಾಟವಾಗುತ್ತಿತ್ತು. ಇದು ಕಂಪನಿಯ ಬೆಸ್ಟ್ ಸೆಲ್ಲರ್ ಸೆಡಾನ್ ಕಾರು ಕೂಡ ಹೌದು. ಇತ್ತೀಚಿನವರೆಗೆ ಹ್ಯುಂಡೈ ಅಸೆಂಟ್ ಡೀಸೆಂಟಾಗಿ ಮಾರಾಟವಾಗುತ್ತಿತ್ತು. ಇದರ ಸಿಆರ್ ಡಿಐ ಆವೃತ್ತಿಯು ಕಂಪನಿಯ ಬ್ರಾಂಡ್ ಇಮೇಜ್ ಹೆಚ್ಚಿಸಿತ್ತು.
ಮಾರುತಿ ಡಿಜೈರ್ ನಂತಹ ಸೆಡಾನ್ ಕಾರುಗಳ ಪೈಪೋಟಿ ಹೆಚ್ಚಾಗಿರುವುದರಿಂದ ಹ್ಯುಂಡೈ ಕಂಪನಿಯು ಅಸೆಂಟ್ ಕಾರಿನ ಮಾರಾಟ ನಿಲ್ಲಿಸಲು ಯೋಜಿಸಿದೆ ಎಂದು ಡ್ರೈವ್ ಸ್ಪಾರ್ಕ್ ವಾಹನ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಕಂಪನಿಯು ಕಳೆದ ವರ್ಷ ಸುಮಾರು 11 ಸಾವಿರ ಅಸೆಂಟ್ ಕಾರುಗಳನ್ನು ಮಾರಾಟ ಮಾಡಿತ್ತು.
ಹ್ಯುಂಡೈ ಅಸೆಂಟ್ ಕಾರು ಕೊಂಚ ಔಟ್ ಡೇಟೆಡ್ ಆದ ಕಾರಿನಂತೆ ಕಾಣುತ್ತದೆ. ಪ್ರಮುಖವಾಗಿ ಇದು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿಲ್ಲ. ಹೀಗಾಗಿ ಕಂಪನಿಯು ಶೀಘ್ರದಲ್ಲಿ ಅಸೆಂಟ್ ಮಾರಾಟ ಸ್ಥಗಿತಗೊಳಿಸುವ ನಿರೀಕ್ಷೆಯನ್ನು ಮೂಲಗಳು ವ್ಯಕ್ತಪಡಿಸಿವೆ.


Click it and Unblock the Notifications









