ಬಜೆಟ್ ಭೀತಿ: 3 ಸಾವಿರ ಕೋಟಿ ರುಪಾಯಿ ಕಿಸೆಯಲ್ಲೇ ಬಾಕಿ

ಮಾರುತಿ ಸುಜುಕಿ, ಹ್ಯುಂಡೈ, ಜನರಲ್ ಮೋಟರ್ಸ್, ಫೋರ್ಡ್ ಮತ್ತು ಟಾಟಾ ಮೋಟರ್ಸ್ ಮುಂತಾದ ಕಂಪನಿಗಳು ಕೇಂದ್ರ ಬಜೆಟನ್ನು ಕಾಯುತ್ತಿವೆ. ಈ ಕಂಪನಿಗಳು ಸರಕಾರದ ಡೀಸೆಲ್ ದರ ನೀತಿ ಕುರಿತು ಕಾದು ನೋಡುವ ತಂತ್ರ ಅನುಸರಿಸುತ್ತಿವೆ.

ಹೀಗಾಗಿ ಈ ಕಂಪನಿಗಳು ಡೀಸೆಲ್ ಘಟಕಗಳಿಗೆ ಹೂಡಿಕೆ ಮಾಡಲು ಇಚ್ಚಿಸಿದ ಸುಮಾರು 3 ಸಾವಿರ ಕೋಟಿ ರುಪಾಯಿಗಳಿಗಿಂತಲೂ ಹೆಚ್ಚು ಹಣ ಹಾಗೇ ಇದೆ. ಡೀಸೆಲ್ ದರ ನೀತಿ ಕುರಿತು ಯಾವುದೇ ಸಂದಿಗ್ಧತೆಗಳು ಇಲ್ಲದಿದ್ದಲ್ಲಿ ಈ ಕಂಪನಿಗಳು ಈಗಾಗಲೇ ಈ ಬೃಹತ್ ಹೂಡಿಕೆ ಮಾಡಿಯಾಗುತ್ತಿತ್ತು ಎಂದು ವಾಹನ ಒಕ್ಕೂಟ ಸ್ಯಾಮ್ ಹೇಳಿದೆ.

"ಡೀಸೆಲ್ ತಂತ್ರಜ್ಞಾನಕ್ಕೆ ಹೂಡಿಕೆ ಮಾಡಬೇಕೆ, ಬೇಡವೇ ಎನ್ನುವ ಕುರಿತು ಹೆಚ್ಚಿನ ಕಂಪನಿಗಳು ಸಂದಿಗ್ಧತೆಯಲ್ಲಿವೆ. ಭವಿಷ್ಯದಲ್ಲಿ ಇಂಧನ ದರ(ಡೀಸೆಲ್) ಹೆಚ್ಚಾಗಬಹುದೇ ಎನ್ನುವ ಕುರಿತು ಯಾವುದೇ ಖಾತ್ತಿ ಇಲ್ಲ. ಇದರ ಫಲಿತಾಂಶವಾಗಿ ಸುಮಾರು 3 ಸಾವಿರ ರುಪಾಯಿ ಕೋಟಿ ಹೂಡಿಕೆ ಅನಿಶ್ವಿತತೆಯಲ್ಲಿದೆ" ಎಂದು ಸ್ಯಾಮ್ ನಿರ್ದೇಶಕ ವಿಷ್ಣು ಮಾಥುರ್ ಹೇಳಿದ್ದಾರೆ.

ಆದರೆ ಯಾವ ಕಂಪನಿ ಎಷ್ಟು ಹೂಡಿಕೆ ಮಾಡಲಿದೆ ಎನ್ನುವ ಮಾಹಿತಿಯನ್ನು ನೀಡಲು ಅವರು ನಿರಾಕರಿಸಿದ್ದಾರೆ.

ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ವರ್ಷಕ್ಕೆ 1,50,000 ಯುನಿಟ್ ಉತ್ಪಾದನೆ ಸಾಮರ್ಥ್ಯದ ಡೀಸೆಲ್ ಎಂಜಿನ್ ಘಟಕ ಸ್ಥಾಪಿಸುವ ಇಂಗಿತವನ್ನು ಹ್ಯುಂಡೈ ಪ್ರಕಟಿಸಿತ್ತು. ಡೀಸೆಲ್ ನೀತಿ ಕುರಿತು ಯಾವುದೇ ಸ್ಪಷ್ಟತೆ ದೊರಕದೇ ಹೂಡಿಕೆ ಮಾಡುವುದಿಲ್ಲವೆಂದು ಮಾರುತಿ ಸುಜುಕಿ ಹೇಳಿತ್ತು. (ಕನ್ನಡ ಡ್ರೈವ್ ಸ್ಪಾರ್ಕ್)

Most Read Articles

Kannada
English summary
Lack of certainty on diesel pricing policy before the Union budget has made car manufacturers like Maruti Suzuki, Hyundai, GM, Ford and Tata Motors hold their investments of more than 3,000 crore at diesel plants in India, as reported by industry body Society of Indian Automobile Manufacturers (SIAM).
Story first published: Thursday, March 15, 2012, 10:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X