ಸ್ಯಾಂಗ್ಯೊಂಗ್ ಜೊತೆ ಮಹೀಂದ್ರ ಕಾರು ಕಟ್ಟೋ ಕೆಲಸ

Mahindra To Assemble Cars In Russia With Ssangyong
ಕೊರಿಯಾದ ಘಟಕದಲ್ಲಿ ಸ್ಯಾನ್ಸೊಂಗ್ ಕಂಪನಿ ಜೊತೆ ಸೇರಿ ವಾಹನಗಳನ್ನು ಅಸೆಂಬಲ್ ಅಥವಾ ಜೋಡನೆ ಮಾಡುವುದಾಗಿ ಮಹೀಂದ್ರ ಆಂಡ್ ಮಹೀಂದ್ರ ತಿಳಿಸಿದೆ. ಮಹೀಂದ್ರ ವಾಹನ ವಿಭಾಗದ ಮುಖ್ಯಸ್ಥ ಪವನ್ ಗೋಯೆಂಕಾ, ಸ್ಪೋರ್ಟ್ ಯುಟಿಲಿಟಿ ಸ್ಪೆಷಲಿಸ್ಟ್ ಕಂಪನಿಯ ಯೋಜನೆ ಕುರಿತು ಮಾಹಿತಿ ನೀಡಿದ್ದಾರೆ.

"ಮಹೀಂದ್ರ ಉತ್ಪನ್ನಗಳನ್ನು ರಷ್ಯಾದಲ್ಲಿ ಅಸೆಂಬಲ್ ಮಾಡಲು ಅಲ್ಲಿನ ವಿತರಕ ಕಂಪನಿ ಸ್ಯಾನ್ಸೊಂಗ್ ಜೊತೆ ಮಾತುಕತೆ ನಡೆಸುತ್ತಿದ್ದೇವೆ. ಆದರೆ ಈ ಯೋಜನೆ ಈಗ ಅತ್ಯಂತ ಆರಂಭಿಕ ಹಂತದಲ್ಲಿದೆ" ಎಂದು ಗೋಯೆಂಕಾ ಹೇಳಿದ್ದಾರೆ.

ಸಿಕೆಡಿ ಘಟಕ ಮೂಲಕ ಮಹೀಂದ್ರ ಕಾರುಗಳನ್ನು ರಷ್ಯಾದಲ್ಲಿ ಉತ್ಪಾದಿಸಲಾಗುವುದೆಂದು ಅವರು ಹೇಳಿದ್ದಾರೆ. ಆದರೆ ಈ ಉತ್ಪಾದನೆ ಯಾವಾಗ ಆರಂಭವಾಗಲಿದೆ ಎನ್ನುವ ಮಾಹಿತಿಯನ್ನು ಪವನ್ ಗೋಯೆಂಕಾ ನೀಡಿಲ್ಲ.

ಕಂಪನಿಯು ದೇಶದಲ್ಲಿ XUV500 ಉತ್ಪಾದನೆ ಸಾಮರ್ಥ್ಯವನ್ನು 5 ಸಾವಿರ ಯುನಿಟ್ ಗೆ ವಿಸ್ತರಿಸಲು ಯೋಜಿಸಿದೆ ಎಂಬ ಮಾಹಿತಿಯನ್ನೂ ಅವರು ನೀಡಿದ್ದಾರೆ. ಮೇ ತಿಂಗಳಿನಿಂದ ಕಂಪನಿಯು ಈಗಿನ 3 ಸಾವಿರ ಎಕ್ಸ್ ಯುವಿ ಉತ್ಪಾದನೆಯನ್ನು ನಾಲ್ಕು ಸಾವಿರ ಯುನಿಟ್ ಗೆ ಹೆಚ್ಚಿಸಲಿದೆಯಂತೆ. ದೇಶದ ಗ್ರಾಹಕರ ಬೇಡಿಕೆ ಪೂರೈಸುವ ಉದ್ದೇಶದಿಂದ ಸದ್ಯಕ್ಕೆ ಜಾಗತಿಕ ಮಾರುಕಟ್ಟೆಗೆ ಯಾವುದೇ ಉತ್ಪನ್ನಗಳನ್ನು ಪರಿಚಯಿಸುವ ಯೋಜನೆಯಿಲ್ಲ ಎಂದಿದ್ದಾರೆ.

"ಆಸ್ಟ್ರೇಲಿಯಾ ಸೇರಿದಂತೆ ಜಾಗತಿಕ ಮಾರುಕಟ್ಟೆಗೆ XUV500 ಪರಿಚಯಿಸಲಿದ್ದೇವೆ. ಆದರೆ ಈಗ ಇಲ್ಲಿನ ಬೇಡಿಕೆಯನ್ನೇ ಪೂರೈಸುವುದು ಪ್ರಮುಖ ಸವಾಲಾಗಿದೆ" ಎಂದು ಗೋಯೆಂಕಾ ಹೇಳಿದ್ದಾರೆ. ಈಗಾಗಲೇ ಕಂಪನಿಯು ದಕ್ಷಿಣ ಆಫ್ರಿಕಾಕ್ಕೆ ಸುಮಾರು 400 ಎಕ್ಸ್ ಯುವಿ 5ಒಒ ಕಾರುಗಳನ್ನು ಮಾರಾಟ ಮಾಡಿದೆ. (ಕನ್ನಡ ಡ್ರೈವ್ ಸ್ಪಾರ್ಕ್)

Most Read Articles

Kannada
English summary
Mahindra and Mahindra has said it intends to assemble its vehicles in Russia along with its Korean Subsidiary. Dr Pawan Goenka who head's Mahindra's automotive division has revealed the SUV specialist's plans.
Story first published: Wednesday, February 22, 2012, 11:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X