ಮಹೀಂದ್ರ ಬೊಲೆರೊ ಲಕ್ಷ ಸಾಧನೆ ಮಾಡಿದ ಎಸ್‌ಯುವಿ

Posted By:

2011-12ನೇ ಆರ್ಥಿಕ ವರ್ಷದಲ್ಲಿ ಸುಮಾರು 1,00,686 ಬೊಲೆರೊ ಕಾರುಗಳನ್ನು ಮಾರಾಟ ಮಾಡಿರುವುದಾಗಿ ಮಹೀಂದ್ರ ಕಂಪನಿಯು ಪ್ರಕಟಿಸಿದೆ. ದೇಶದಲ್ಲಿ ಒಂದು ವರ್ಷದಲ್ಲಿ ಲಕ್ಷ ಸಂಖ್ಯೆಯಲ್ಲಿ ಮಾರಾಟ ಮಾಡಿದ ಮೊದಲ ಎಸ್‌ಯುವಿ ಇದಾಗಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ. ಜೊತೆಗೆ ಬೊಲೆರೊ ರಸ್ತೆಗಿಳಿದ ನಂತರದ ಬೃಹತ್ ಮಾರಾಟ ಇದಾಗಿದೆ.

ದೇಶದಲ್ಲಿ ಸತತ ಆರು ವರ್ಷಗಳಿಂದ ಬೊಲೆರೊ ಅತ್ಯಧಿಕ ಮಾರಾಟದ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ಆಗಿದೆ. 2010ರಿಂದ 11ರವರೆಗೆ ಕಂಪನಿಯು ಸುಮಾರು 83,112 ಬೊಲೆರೊ ಮಾರಾಟ ಮಾಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಆರ್ಥಿಕ ವರ್ಷ ಬೊಲೆರೊ ಮಾರಾಟ ಶೇಕಡ 21ರಷ್ಟು ಏರಿಕೆ ಕಾಣುವ ನಿರೀಕ್ಷೆಯಿದೆ.

To Follow DriveSpark On Facebook, Click The Like Button

ಮಾರ್ಚ್ ತಿಂಗಳ ಮಾರಾಟದಲ್ಲೂ ಬೊಲೆರೊ ಹೊಸ ದಾಖಲೆ ಮಾಡಿದೆ. ಕಳೆದ ತಿಂಗಳು ಕಂಪನಿಯು ಎಂಟ್ರಿ ಲೆವೆಲ್ ಎಸ್‌ಯುವಿ 10,026 ಬೊಲೆರೊ ಮಾರಾಟ ಮಾಡಿದೆ. ತಿಂಗಳ ಮಾರಾಟದಲ್ಲಿ ಇದು ಅತ್ಯಧಿಕವಾಗಿದೆ.

2011-12ನೇ ಸಾಲಿನಲ್ಲಿ ದೇಶದಲ್ಲಿ ಅತ್ಯಧಿಕ ಮಾರಾಟದ ಕಾರುಗಳಲ್ಲಿ ಬೊಲೆರೊ 7ನೇ ಸ್ಥಾನ ಪಡೆದಿದೆ. ಇದಕ್ಕೂ ಮೊದಲು ಇದು 9ನೇ ಸ್ಥಾನದಲ್ಲಿತ್ತು. ಪ್ರಯಾಣಿಕ ಕಾರು ವಿಭಾಗದಲ್ಲಿ ಟಾಪ್ ಟೆನ್ ಕಾರುಗಳಲ್ಲಿ ಸ್ಥಾನ ಪಡೆದಿರುವ ಒಂದೇ ಒಂದು ಎಸ್‌ಯುವಿ ಇದಾಗಿದೆ. (ಕನ್ನಡ ಡ್ರೈವ್‌ಸ್ಪಾರ್ಕ್)

English summary
Mahindra has announced that it sold 1,00,686 Boleros in the financial year 2011-12. The SUV specialist in its press release stated that this is the first time an SUV has crossed one lakh sales in a year in India. Further this is the highest sales Bolero has ever achieved in a year since its launch.
Story first published: Tuesday, April 17, 2012, 12:44 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark