ರೇವಾ ಎನ್ಎಕ್ಸ್ಆರ್: ಎಲೆಕ್ಟ್ರಿಕ್ ಕಾರಿನ ತಾಜಾ ಸುದ್ದಿ

ಬೆಂಗಳೂರು, ಆ 22: ರೇವಾ ಎಲೆಕ್ಟ್ರಿಕ್ ಕಾರು ಕಂಪನಿಯ ನೂತನ ಘಟಕವಿಂದು ಬೆಂಗಳೂರಿನ ಬೊಮ್ಮಸಂದ್ರ ಸಮೀಪ ಉದ್ಘಾಟನೆಯಾಗಿದೆ. ಹಳೆಯ ಘಟಕದ ಪಕ್ಕದಲ್ಲಿಯೇ ಇರುವ ನೂತನ ಘಟಕದಲ್ಲಿ ನೂತನ ರೇವಾ ಎನ್ಎಕ್ಸ್ಆರ್ ಕಾರಿಗೆ ಸಂಬಂಧಿಸಿದಂತೆ ಕೊಂಚ ಮಾಹಿತಿ ನಮಗೆ ಲಭಿಸಿದೆ.

ಪ್ರಸಕ್ತ ವರ್ಷದ ಅಂತ್ಯದ ವೇಳೆಗೆ ಅಥವಾ ಹಬ್ಬದ ಸೀಸನಿನಲ್ಲಿ ನೂತನ ರೇವಾ ರಸ್ತೆಗಿಳಿಯಲಿದೆ. ಪರಿಸರ ಸ್ನೇಹಿ ಕಾರು ಬಯಸುವರಿಗೆ ಇದು ಸೂಕ್ತವಾಗಿರಲಿದೆ. ಇದು ಎರಡು ಡೋರಿನ ಎಲೆಕ್ಟ್ರಿಕ್ ಹ್ಯಾಚ್ ಬ್ಯಾಕ್ ಕಾರಾಗಿದ್ದು, ಲೀಥಿಯಂ ಐಯಾನ್ ಬ್ಯಾಟರಿ ಅಥವಾ ಲೀಡ್ ಆಸೀಡ್ ಬ್ಯಾಟರಿ ಪ್ಯಾಕ್ ಹೊಂದಿರುವ ನಿರೀಕ್ಷೆಯಿದೆ.

Mahindra Reva NXR

ನೂತನ ರೇವಾ ಎನ್ಎಕ್ಸ್ಆರ್ ಕಾರು ಪೂರ್ತಿ ಚಾರ್ಜಿಗೆ ಸುಮಾರು 160 ಕಿ.ಮೀ. ದೂರ ಕ್ರಮಿಸುವ ನಿರೀಕ್ಷೆಯಿದೆ. ಇತ್ತೀಚೆಗೆ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಒಂದು ಚಾರ್ಜಿಗೆ 180 ಕಿ.ಮೀ. ಕ್ರಮಿಸುವ ಸ್ಕೂಟರ್ ಕಂಡುಹಿಡಿದಿರುವ ಸುದ್ದಿ ನಿಮಗೆ ನೆನಪಿರಬಹುದು.

ರೇವಾ ಎನ್ಎಕ್ಸ್ಆರ್ ಕಾರಿಗೆ ಸದ್ಯ ದೇಶದಲ್ಲಿ ಯಾವುದೇ ಪ್ರತಿಸ್ಪರ್ಧಿಗಳು ಇಲ್ಲ. ಆದರೆ ದೇಶದ ರಸ್ತೆಗೆ ಆಗಮಿಸಲಿರುವ ನಿಸ್ಸಾನ್ ಲೀಫ್ ಇದಕ್ಕೆ ಪ್ರಮುಖ ಪ್ರತಿಸ್ಪರ್ಧಿಯಾಗಿರುವ ನಿರೀಕ್ಷೆಯಿದೆ. ನೂತನ ರೇವಾ ಎನ್ಎಕ್ಸ್ಆರ್ ಕಾರು ಹಳೆಯ ರೇವಾಕ್ಕಿಂತ ಸೌಂದರ್ಯ ಹೆಚ್ಚಿಸಿಕೊಂಡಿದೆ.

ಇಂದು ಮಹೀಂದ್ರ ನೂತನ ಘಟಕ ಉದ್ಘಾಟನಾ ಕಾರ್ಯಕ್ರಮದ ಸಂದರ್ಭದಲ್ಲಿ ನಮ್ಮ ಗಮನ ಹೊಸ ಎನ್ಎಕ್ಸ್ಆರ್ ಕಡೆಗಿತ್ತು. ಘಟಕದಲ್ಲಿ ಸಾಲಾಗಿರಿಸಿದ್ದ ಹಲವು ರೇವಾ ಎನ್ಎಕ್ಸ್ಆರ್ ಕಾರುಗಳ ಚಿತ್ರಗಳನ್ನು ತೆಗೆದು ಫೇಸ್ಬುಕ್ ಪುಟದಲ್ಲಿ ಜೋಡಿಸಿದ್ದೇವೆ. ನಿಮಗೂ ಇಷ್ಟವಾಗಬಹುದು.

ಓದಿ: ಬೆಂಗ್ಳೂರಲ್ಲಿ ರೇವಾ ಪರಿಸರ ಸ್ನೇಹಿ ಘಟಕ ಉದ್ಘಾಟನೆ

Most Read Articles

Kannada
English summary
Have a look at the exclusive pic and information of Mahindra Reva NXR at Mahindra Reva plant, Bangalore. Mahindra Reva NXR details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X