ಮಹೀಂದ್ರ XUV500: ಇದು ಕ್ಯಾರೆಟ್ ಜಾಹೀರಾತು!!

ಆದ್ರೂ ಕಂಪನಿಯು ಟಿವಿ ಜಾಹೀರಾತು ನೀಡಿದೆ. ಆದರೆ ಈ ಜಾಹೀರಾತು ನಿಜಕ್ಕೂ ಕನ್ ಫ್ಯೂಸ್ ಆಗುವಂತಿದೆ. ಇದು ಕ್ಯಾರೆಟ್ ಜಾಹೀರಾತಿನಂತಿದೆ. ಎಕ್ಸ್ ಯುವಿ ಕಾರಿನಲ್ಲಿ ಹೀರೋ ಕಾಡಿನಲ್ಲಿ ವೇಗವಾಗಿ ಹೋಗುತ್ತಾನೆ. ಅಲ್ಲಿಂದ ಇಳಿದು ನಡೆದು ಸಾಗುವಾಗ ಮೂರು ಬೆಡಗಿಯರು ಆತನ ಸುತ್ತ ನೆರೆಯುತ್ತಾರೆ. ಒಬ್ಬಳು ಈತನಿಗೆ ಕ್ಯಾರೆಟ್ ತಿನ್ನಲು ಕೊಡುತ್ತಾಳೆ.. ಆತ ಅಲ್ಲಿಂದ ವೇಗವಾಗಿ ಕಾರಿನಲ್ಲಿ ವಾಪಸ್ ಬರುತ್ತಾನೆ. ನಂತರ ತನ್ನ ಸ್ನೇಹಿತನಲ್ಲಿ ನಾನು ಯಾಕೆ ಕ್ಯಾರೆಟನ್ನು ಇಷ್ಟಪಡುವುದಿಲ್ಲವೆಂದು ಹೀರೋ ಹೇಳಲು ಸುರುಮಾಡುತ್ತಾನೆ.
ಈ ಜಾಹೀರಾತು ಸುಲಭವಾಗಿ ಅರ್ಥವಾಗುವಂತೆ ಕಾಣುತ್ತಿಲ್ಲ. ಈ ಜಾಹೀರಾತಿನಲ್ಲಿ ನಾಯಕನ ಸುತ್ತ ಇರುವ ಮೂರು ಬೆಡಗಿಯರು ಗಮನ ಸೆಳೆಯುತ್ತಾರೆ. ಈಗಾಗಲೇ ಮಹೀಂದ್ರ ಕಂಪನಿಯು ಎಕ್ಸ್ ಯುವಿ ಬುಕ್ಕಿಂಗ್ ಪುನಾರಂಭಗೊಳಿಸಿದೆ. ಕಳೆದ ಸೆಪ್ಟಂಬರ್ ನಂತರ ಕಂಪನಿಯು ಬುಕ್ಕಿಂಗ್ ಮಾಡುತ್ತಿರುವುದು ಎರಡನೇ ಬಾರಿ. ಜನವರಿ 25ಕ್ಕೆ ಕಂಪನಿಯು ಬುಕ್ಕಿಂಗ್ ಪುನಾರಂಭಗೊಳಿಸಿತ್ತು. ಎರಡು ದಿನದಲ್ಲಿ ಸುಮಾರು 5,900 ಗ್ರಾಹಕರು ಬುಕ್ಕಿಂಗ್ ಮಾಡಿದ್ದರು.
7,200ಕ್ಕಿಂತ ಹೆಚ್ಚು ಬುಕ್ಕಿಂಗ್ ಆದ ನಂತರ ಕಂಪನಿಯು ಲಾಟರಿ ಸಿಸ್ಟಮ್ ಮೂಲಕ ಈ ಕಾರಿನ ಬುಕ್ಕಿಂಗ್ ವ್ಯವಸ್ಥೆ ಮಾಡಲಿದೆ. ಅಂದರೆ ಅದೃಷ್ಟವಿದ್ದವರಿಗೆ ಮಾತ್ರ ಈ ಕಾರನ್ನು ಈಗ ಬುಕ್ಕಿಂಗ್ ಮಾಡುವ ಅವಕಾಶ ದೊರಕಲಿದೆ. Mahindra XUV500 ಇಷ್ಟೆಲ್ಲ ಫೇಮಸ್ ಆದ ನಂತರ ಈ ರೀತಿಯಾಗಿ ಟಿವಿ ಜಾಹೀರಾತು ನೀಡುವುದು ಎಷ್ಟು ಸೂಕ್ತವಾಗಿತ್ತು ಎನ್ನುವ ಪ್ರಶ್ನೆ ವಾಹನ ವಿಶ್ಲೇಷಕರದ್ದು.


Click it and Unblock the Notifications








