ಚೀನಿ ಕಿತಾಪತಿ, ಮಾರುತಿ 800 ತ್ರಿಚಕ್ರ ವಾಹನ

Three-wheeled Maruti 800
ಆಡು ಮುಟ್ಟದ ಸೊಪ್ಪಿಲ್ಲ, ಚೀನಿಯರು ಮಾಡದ ಕಿತಾಪತಿ ಇಲ್ಲ. ಪುಟ್ಟ ಪಿನ್ ನಿಂದ ಪೆನ್ ವರೆಗೆ, ಐಪ್ಯಾಡಿನಿಂದ ಕಂಪ್ಯೂಟರ್ ವರೆಗೆ, ಬೈಸಿಕಲಿಂದ ಕಾರಿನವರೆಗೆ ಉತ್ಪನ್ನಗಳನ್ನು ಕಾಪಿ ಮಾಡೋದ್ರಲ್ಲಿ ಚೀನಿಯರು ಕುಖ್ಯಾತಿ ಪಡೆದಿದ್ದಾರೆ.

ಅವ್ರು ನಮ್ಮ ಮಾರುತಿ 800 ಕಾರನ್ನೂ ಬಿಟ್ಟಿಲ್ಲಾರಿ. ನಾಲ್ಕು ಚಕ್ರದ ಪುಟ್ಟ ಕಾರನ್ನು ಮೂರು ಚಕ್ರಕ್ಕೆ ಪರಿವರ್ತಿಸಿದ್ದಾರೆ. ಇದರ ಸಿಸಿ, ಕಾರ್ಯಕ್ಷಮತೆ ಎಲ್ಲವೂ ಕಡಿಮೆಯಾಗಿದೆ. ಇದು ಗ್ರಾಮೀಣ ಚೀನಾದ ಜನರ ಸವಾರಿಗೆ ಅತ್ಯುತ್ತಮ ಕಾರಾಗಲಿದೆಯಂಬ ನಿರೀಕ್ಷೆಯಲ್ಲಿ ಕಂಪನಿಯಿದೆ.

ಚೀನಾದ ಜಿನನ್ ಕ್ವಿನ್ಕಿ ಮೋಟರ್ ಸೈಕಲ್ ಕಾರ್ಪೋರೇಷನ್ ಕಂಪನಿಯು ಆಲ್ಟೋ ಕಾರಿನ(ನಮ್ಮಲ್ಲಿ ಮಾರುತಿ 800) ಮೂರು ಚಕ್ರದ ಆವೃತ್ತಿಯನ್ನು ಪರಿಚಯಿಸಿದೆ. ಇದರ ಹೆಸರು ಕ್ವಿನ್ಕಿ ಆಲ್ಟೋ ಟ್ರೈಸೈಕಲ್. ಇದು ಸುಮಾರು 125 ಸಿಸಿ ವಾಹನವಾಗಿದ್ದು 12 ಕಿಲೋವ್ಯಾಟಿನ ಮೋಟರ್ ಸೈಕಲ್ ಎಂಜಿನ್ ಹೊಂದಿದೆ.

ಚೀನಾದಲ್ಲಿ ಈ ಕಾರಿನ ದರ ಸುಮಾರು 75-80 ಸಾವಿರ ರುಪಾಯಿಯಷ್ಟಿದೆ. ಗ್ರಾಮೀಣ ಚೀನದಲ್ಲಿ ಮೂರು ಚಕ್ರದ ವಾಹನಗಳು ಜನಪ್ರಿಯತೆ ಪಡೆದಿವೆ. ಸ್ವ ಉದ್ಯೋಗಿಗಳಿಗೆ, ಸಣ್ಣಪುಟ್ಟ ಕಂಪನಿಗಳಿಗೆ ಕೃಷಿಕರಿಗೆ ಮೂರು ಚಕ್ರದ ವಾಹನ ಹೆಚ್ಚು ನೆರವು ನೀಡುತ್ತದೆ.

ಗ್ರಾಮೀಣ ಚೀನಾದ ಜನತೆ ಕೊಂಚ ವೈರೈಟಿಯ ತ್ರಿಚಕ್ರ ವಾಹನ ಹುಡುಕುತ್ತಿದ್ದರು. ಇದನ್ನು ಮನಗಂಡು ಕ್ವಿನ್ಕಿ ಕಂಪನಿಯು ಆಲ್ಟೋ ಟ್ರೈಸೈಕಲ್ ಅಭಿವೃದ್ಧಿಮಾಡಿದೆ.

Most Read Articles

Kannada
English summary
Chinese car makers are famous for copying car designs. Even our own Maruti 800 could not escape from them. Jinan Qingqi Motorcycle Corporation has created a three wheeler that looks exactly like the 800.
Story first published: Tuesday, February 7, 2012, 17:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X