ಆಲ್ಟೊ ಮತ್ತೊಂದು ದಾಖಲೆ; 111 ಕಾರುಗಳ ಹಸ್ತಾಂತರ

Written By:
ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ ಮತ್ತೊಂದು ದಾಖಲೆ ಸ್ಥಾಪಿಸಿದ್ದು, ಸಿಂಗಲ್ ಡೀಲರ್‌ಶಿಪ್‌ವೊಂದರಲ್ಲಿ ದಿನವೊಂದರಲ್ಲಿ 111 ಕಾರುಗಳನ್ನು ಗ್ರಾಹಕರಿಗೆ ಹಸ್ತಾಂತರಿಸುವ ಮೂಲಕ ಮತ್ತೆ ಸುದ್ದಿ ಗಿಟ್ಟಿಸಿಕೊಂಡಿದೆ.

ವಿಶೇಷವೆಂದರೆ ಈ ಸಾಧನೆ ಕೂಡಾ ಕೇರಳ ರಾಜ್ಯದಲ್ಲೇ ಕಂಡುಬಂದಿದೆ. ಕೆಲವು ದಿನಗಳ ಹಿಂದೆಯಷ್ಟೇ ಮಲಪ್ಪುರಂನ ಡೀಲ‌ರ್‌ಶಿಪ್‌ವೊಂದರಲ್ಲಿ ದಿನವೊಂದರಲ್ಲಿ 200 ಕಾರುಗಳನ್ನು ಹಸ್ತಾಂತರಿಸಿದ ಮಾರುತಿ ದಾಖಲೆ ಸೃಷ್ಟಿ ಮಾಡಿತ್ತು. ಇದೀಗ ಕೇರಳದ ಕಾಸರುಗೋಡು ಜಿಲ್ಲೆಯಲ್ಲಿ 111 ಕಾರುಗಳನ್ನು ಗ್ರಾಹಕರಿಗೆ ಹಸ್ತಾಂತರಿಸುವ ಮೂಲಕ ಸಾಧನೆ ಪುನರಾವರ್ತಿಸಿದೆ.

ಕಾಸರಗೋಡಿನ ಮುನ್ಸಿಪಾಲ್ ಸ್ಟೇಡಿಯಂನಿಂದ 111 ಕಾರುಗಳನ್ನು ಗ್ರಾಹಕರಿಗೆ ಹಸ್ತಾಂತರಿಸಲಾಗಿದೆ. ಈ ಮೂಲಕ ಕೇರಳದಲ್ಲಿ ಆಲ್ಟೊ 800 ಅತಿ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಂಡಿದೆ.

ಅಂದ ಹಾಗೆ ಮಾರುತಿ ಆಲ್ಟೊ ಬುಕ್ಕಿಂಗ್ ಈಗಾಗಲೇ 30,000 ಸಾವಿರ ದಾಟಿದೆ. ಕೇರಳ ಸೇರಿದಂತೆ ಅಸ್ಸಾಂ ಹಾಗೂ ಪಂಜಾಬ್ ರಾಜ್ಯಗಳಲ್ಲೂ ಆಲ್ಟೊ 800 ಕಾರುಗಳಿಗೆ ಭಾರಿ ಬೇಡಿಕೆ ಕಂಡುಬಂದಿದೆ. 

English summary
Maruti is set to create a second record for delivering the highest number of cars from a single outlet on November 1 when it delivers 111 of its new Alto 800 cars in Kerala.
Story first published: Friday, November 2, 2012, 11:48 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark