ಮಾರುತಿಗೆ ಏಪ್ರಿಲ್‌ನಲ್ಲಿ ಆಸರೆ ನೀಡಿದ ಎರ್ಟಿಗಾ

Posted By:
ಕಳೆದ ತಿಂಗಳ ವಾಹನ ಮಾರಾಟದಲ್ಲಿ ಮಾರುತಿ ಸುಜುಕಿ ತುಸು ಏರಿಕೆ ದಾಖಲಿಸಿದೆ. ಕಂಪನಿಯು 2012ರ ಏಪ್ರಿಲ್ ತಿಂಗಳಲ್ಲಿ ಸುಮಾರು 1,00,415 ವಾಹನಗಳನ್ನು ಮಾರಾಟ ಮಾಡಿದ್ದು, ಕಳೆದ ವರ್ಷದ ಏಪ್ರಿಲ್ ತಿಂಗಳ 97,155 ಯುನಿಟ್ ಮಾರಾಟಕ್ಕೆ ಹೋಲಿಸಿದರೆ ಶೇಕಡ 3.4ರಷ್ಟು ಏರಿಕೆ ಕಂಡಿದೆ.

ಮಾರುತಿ ಸುಜುಕಿ ಕಳೆದ ತಿಂಗಳು ಎಲ್‌ಯುವಿ ಎರ್ಟಿಗಾ ಪರಿಚಯಿಸಿತ್ತು. ಇದು ಯುಟಿಲಿಟಿ ವೆಹಿಕಲ್ ಸೆಗ್ಮೆಂಟಿನಲ್ಲಿ ಭಾರಿ ಪ್ರಮಾಣದ ಮಾರಾಟ ಹೆಚ್ಚಲು ನೆರವಾಗಿತ್ತು. ಕಂಪನಿಯು ಕಳೆದ ತಿಂಗಳಲ್ಲಿ ಸುಮಾರು 5,593 ಯುನಿಟ್ ಯುಟಿಲಿಟಿ ವಾಹನ ಮಾರಾಟ ಮಾಡಿದೆ. ಅದರಲ್ಲಿ ಎರ್ಟಿಗಾ, ಜಿಪ್ಸಿ ಮತ್ತು ವಿಟಾರಾ ಸೇರಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ ಕಂಪನಿಯು ಕೇವಲ 217 ಯುನಿಟ್ ಯುಟಿಲಿಟಿ ವಾಹನ ಮಾರಾಟ ಮಾಡಿತ್ತು.

ಮಾರುತಿ ಸುಜುಕಿ ಕಂಪನಿಯು ಸಣ್ಣಕಾರು ಮಾರಾಟ ಹೆಚ್ಚಿಸಲು ಕಳೆದ ತಿಂಗಳೂ ಸೋತಿದೆ. ಅಂದರೆ ಆಲ್ಟೊ, ಮಾರುತಿ 800, ಎ-ಸ್ಟಾರ್ ಮತ್ತು ವ್ಯಾಗನಾರ್ ಕಾರುಗಳ ಮಾರಾಟ ಶೇಕಡ 26.4ರಷ್ಟು ಇಳಿಕೆ ಕಂಡಿದೆ. ಆದರೆ ಸ್ವಿಫ್ಟ್, ಎಸ್ಟಿಲೊ ಮತ್ತು ರಿಟ್ಜ್ ಕಾರುಗಳ ಮಾರಾಟ ಗಮನಾರ್ಹವಾಗಿ ಶೇಕಡ 43ರಷ್ಟು ಏರಿಕೆ ಕಂಡಿದೆ.

ಸ್ವಿಫ್ಟ್ ಡಿಜೈರ್ ಕಾರಿನ ಮಾರಾಟ 15,510 ಯುನಿಟಿಗೆ ತಲುಪಿದ್ದು ಶೇಕಡ 31.5ರಷ್ಟು ಏರಿಕೆ ಕಂಡಿದೆ. ಕಳೆದ ವರ್ಷ ಏಪ್ರಿಲಿನಲ್ಲಿ ಕೇವಲ 11,797 ಯುನಿಟ್ ಡಿಜೈರ್ ಮಾರಾಟವಾಗಿತ್ತು. ಆದರೆ ಮಾರುತಿ ಸುಜುಕಿ ಕಂಪನಿಯ ಸೆಡಾನ್ ಎಸ್ಎಕ್ಸ್4 ಮಾರಾಟವು 634 ಯುನಿಟಿಗೆ ತಲುಪಿ ಶೇಕಡ 70ರಷ್ಟು ಇಳಿಕೆ ಕಂಡಿದೆ. ಕಳೆದ ವರ್ಷದ ಏಪ್ರಿಲಿನಲ್ಲಿ ಎಸ್ಎಕ್ಸ್4 ಮಾರಾಟ 2,011 ಯುನಿಟ್ ಆಗಿತ್ತು.

ಮಾರುತಿ ಸುಜುಕಿ ಕಂಪನಿಯು ಕಳೆದ ತಿಂಗಳು ಸುಮಾರು 90,255 ಯುನಿಟ್ ವಾಹನ ಮಾರಾಟ ಮಾಡಿದೆ. ಇದೇ ಸಮಯದಲ್ಲಿ ಸುಮಾರು 10,160 ಯುನಿಟ್ ವಾಹನಗಳನ್ನು ರಫ್ತು ಮಾಡಿದೆ.

English summary
Maruti Suzuki has posted sober April sales figures with an increase of 3.4%. The Indian carmaker has stated in its press release that it sold a total of 100,415 vehicles in April 2012 as against the 97,155 vehicles it sold in April 2011. 
Story first published: Wednesday, May 2, 2012, 16:23 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark