ಆಲ್ಟೊ 800 ರಫ್ತು ಮಾಡಲು ಮಾರುತಿ ಯೋಜನೆ

ದೇಶದ ರಸ್ತೆಗೆ ಅಕ್ಟೋಬರ್ 16ರಂದು ಆಗಮಿಸಲಿರುವ ನೂತನ ಆಲ್ಟೊ 800 ಕುರಿತು ಮಾರುತಿ ಸುಜುಕಿ ಮಹತ್ವದ ಯೋಜನೆಗಳನ್ನು ಹೊಂದಿದೆ. ಕಂಪನಿಯು ನೂತನ ಆಲ್ಟೊ 800 ಕಾರನ್ನು ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕ ದೇಶಗಳಿಗೆ ರಫ್ತು ಮಾಡಲು ಯೋಜಿಸಿದೆ.

ಈ ವರ್ಷದ ಡಿಸೆಂಬರ್ ವೇಳೆಗೆ ಆಲ್ಟೊ 800 ಕಾರುಗಳನ್ನು ರಫ್ತು ಮಾಡಲು ಕಂಪನಿಯು ಯೋಜಿಸಿದೆ. ಎಲ್ಲಾದರೂ ನಿರೀಕ್ಷೆಗೂ ಮೀರಿ ದೇಶದಲ್ಲಿ ಆಲ್ಟೊ 800 ಕಾರಿಗೆ ಬೇಡಿಕೆ ಹೆಚ್ಚಾದರೆ ರಫ್ತು ಯೋಜನೆಯನ್ನು ಮುಂದೂಡುವ ಸಾಧ್ಯತೆಯಿದೆ.

ಮಾರುತಿ ಸುಜುಕಿ ಕಂಪನಿಯು ಈಗಾಗಲೇ ಜಾಗತಿಕ ಮಾರುಕಟ್ಟೆಗೆ ಸಣ್ಣಕಾರುಗಳನ್ನು ರಫ್ತು ಮಾಡುತ್ತಿದೆ. ರೂಪಾಯಿ ಮತ್ತು ಯುಎಸ್ ಡಾಲರ್ ಮೌಲ್ಯದ ಏರಿಳಿತ ಸೇರಿದಂತೆ ದೇಶದಿಂದ ಕಾರು ರಫ್ತು ಮಾಡುವುದರಿಂದ ಮಾರುತಿ ಸುಜುಕಿಗೆ ಹತ್ತು ಹಲವು ಲಾಭಗಳಿವೆ.

ಮಾರುತಿ ಸುಜುಕಿ ಕಂಪನಿಯು ರಿಟ್ಜ್, ಡಿಜೈರ್, ಎ-ಸ್ಟಾರ್, ಎರ್ಟಿಗಾ ಕಾರುಗಳನ್ನು ಜಾಗತಿಕ ಮಾರುಕಟ್ಟೆಗೆ ರಫ್ತು ಮಾಡುತ್ತಿದೆ. ಕೆಲವು ಕಾರುಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಬೇರೆ ಬೇರೆ ಹೆಸರನ್ನಿಡಲಾಗಿದೆ. ಕೆಲವು ಕಾರುಗಳು ಇಲ್ಲಿಯ ಹೆಸರನ್ನೇ ಜಾಗತಿಕ ಮಾರುಕಟ್ಟೆಯಲ್ಲಿ ಹೊಂದಿವೆ.

ಉದಾಹರಣೆಗೆ ಮಾರುತಿ ಸುಜುಕಿ ರಿಟ್ಜ್ ಕಾರಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಸ್ಪ್ಲಾಷ್ ಎಂದು, ಎಸ್ಟಾರಿಗೆ ಆಲ್ಟೊ ಎಂದು ಹೆಸರಿಟ್ಟಿದೆ. ನೂತನ ಆಲ್ಟೊ 800 ಕಾರಿನ ಕುರಿತು ಹೆಚ್ಚಿನ ಮಾಹಿತಿ ಪಡೆಯಿರಿ.

Most Read Articles

Kannada
English summary
India largest car manufacturer Maruti Suzuki planning to export umcoming new alto 800 car to Africa and latin America.
Story first published: Thursday, September 27, 2012, 14:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X