ಮಾರುತಿ ಆಲ್ಟೊ 800: ಹನ್ನೆರಡು ವಿಶೇಷತೆಗಳು

ಅಕ್ಟೋಬರ್ 16ರಂದು ದೇಶದ ರಸ್ತೆಗಿಳಿಯಲಿರುವ 2012ರ ಆಲ್ಟೊ 800 ಸಣ್ಣಕಾರಿನ ಹೆಚ್ಚಿನ ಮಾಹಿತಿ ಬಹಿರಂಗವಾಗಿದೆ. ನೂತನ ಕಾರಿನ ಲುಕ್ಸ್, ಇಂಟಿರಿಯರ್ ಮತ್ತು ಮೆಕಾನಿಕಲ್ ವಿಭಾಗದಲ್ಲಿ ಬದಲಾವಣೆ ಇರಲಿದೆ. ಹೊಸ ಕಾರಿನ ಹನ್ನೆರಡು ಮಾಹಿತಿಗಾಗಿ ಮುಂದೆ ಓದಿ.

* ಆಲ್ಟೊ 800 ಕಾರು 796ಸಿಸಿಯ ಪರಿಷ್ಕೃತ ಎಫ್8ಡಿ ಎಂಜಿನ್ ಹೊಂದಿರಲಿದೆ.
* ಈ ಎಂಜಿನ್ ಹೆಚ್ಚು ಟಾರ್ಕ್ ಮತ್ತು ಅತ್ಯುತ್ತಮ ಇಂಧನ ದಕ್ಷತೆ ನೀಡಲಿದೆ.
* ಸದ್ಯದ 69ಎನ್ಎಂ ಟಾರ್ಕ್ ಪವರಿಗಿಂತ ನೂತನ ಎಂಜಿನ್ 69ಎನ್ಎಂ ಟಾರ್ಕ್ ಪವರ್ ನೀಡಲಿದೆ.
* ರಸ್ತೆಯಲ್ಲಿರುವ ಆಲ್ಟೊ ಕಾರಿಗಿಂತ ಹೆಚ್ಚು ಮೈಲೇಜ್ ನೀಡಲಿದೆ. ಆಲ್ಟೊ 800 ಕಾರು ಎಆರ್ಎಐ ಪ್ರಮಾಣಿತ 22.74 ಕಿ.ಮೀ. ಮೈಲೇಜ್ ನೀಡಲಿದೆ.
* ಗೇರ್ ಬಾಕ್ಸ್ ಪರಿಷ್ಕರಿಸಲಾಗಿದೆ. ಇದರಿಂದ ಗೇರ್ ಶಿಫ್ಟ್ ಸ್ಮೂತಾಗಿರಲಿದೆ.
* ಅತ್ಯುತ್ತಮ ಪ್ರಯಾಣಕ್ಕೆ ಸೂಕ್ತವಾಗುವಂತೆ ಸಸ್ಪೆನ್ಷನ್ ಟ್ಯೂನ್ ಮಾಡಲಾಗಿದೆ.
* ಆಲ್ಟೊ 800 ಸಿಎನ್ ಜಿ ಆಯ್ಕೆಯಲ್ಲೂ ಲಭ್ಯವಿರಲಿದೆ.
* ಪೆಟ್ರೋಲ್ ಮತ್ತು ಸಿಎನ್ಜಿ ಆಯ್ಕೆಗಳಲ್ಲಿ ಆಲ್ಟೊ 800 ಮೂರು ಮೂರು ಆವೃತ್ತಿಗಳಲ್ಲಿ ಲಭ್ಯವಿರಲಿದೆ.
* ಒಂದು ಕೆ.ಜಿ ಸಿಎನ್ಜಿಗೆ ಆಲ್ಟೊ 800 ಕಾರು 30.46 ಕಿ.ಮೀ. ಮೈಲೇಜ್ ನೀಡಲಿದೆ.
* ಆಲ್ಟೊ 800 ಇಂಟಿರಿಯರಿನಲ್ಲಿ(ಲೆಗ್ ರೂಂ, ಹೆಡ್ ರೂಂ) ಹೆಚ್ಚು ಸ್ಥಳಾವಕಾಶವಿರಲಿದೆ.
* ಆಲ್ಟೊ 800 ಬೇಸ್ ಪೆಟ್ರೋಲ್ ಆವೃತ್ತಿ ದರವು ಸುಮಾರು 2.45 ಲಕ್ಷ ರುಪಾಯಿ ಇರುವ ನಿರೀಕ್ಷೆಯಿದೆ. ಟಾಪ್ ಎಂಡ್ ದರ ಸುಮಾರು 3 ಲಕ್ಷ ರು. ಆಸುಪಾಸಿನಲ್ಲಿರಲಿದೆ.
* ಪೆಟ್ರೋಲ್ ಆವೃತ್ತಿಗಿಂತ ಸಿಎನ್ಜಿ ಆವೃತ್ತಿ ದರ 45 ಸಾವಿರ ರು. ಹೆಚ್ಚಿರುವ ನಿರೀಕ್ಷೆಯಿದೆ. (ಕೃಪೆ: TheHinduBusinessLine)

ಮಾರುತಿ ಆಲ್ಟೊ 800 ಕಾರಿನ ಇನ್ನಷ್ಟು ಮಾಹಿತಿ ತಿಳಿದುಕೊಳ್ಳಿ

Most Read Articles

Kannada
English summary
Maruti Alto 800 More Details: Alto 800 Engine, Mileage, Price, Power, Torqe, Features, Performance, space and Price.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X