ಒಲಿಂಪಿಕ್ ಚಾಂಪಿಯನ್ ಮೇರಿ ಕಾಮ್‌ಗೆ ಮಹೀಂದ್ರ ಬೊಲೆರೊ ಗಿಫ್ಟ್

Written By:

ಇತ್ತೀಚೆಗಷ್ಟೇ ಲಂಡನ್ ಒಲಿಂಪಿಕ್ಸ್ ಮಹಿಳಾ ಬಾಕ್ಸಿಂಗ್ ವಿಭಾಗದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ದೇಶದ ಹೆಮ್ಮೆಗೆ ಪಾತ್ರವಾಗಿದ್ದ ಐದು ಬಾರಿಯ ವಿಶ್ವ ಚಾಂಪಿಯನ್ ಎಂಸಿ ಮೇರಿ ಕಾಮ್ ಅವರಿಗೆ ದೇಶದ ಜನಪ್ರಿಯ ಸ್ಫೋರ್ಟ್ಸ್ ಯುಟಿಲಿಟಿ ಕಾರು ತಯಾರಕ ಕಂಪನಿಯಾದ ಮಹೀಂದ್ರ ಆಂಡ್ ಮಹೀಂದ್ರ ತನ್ನ ಶ್ರೇಷ್ಠ ಎಸ್‌ಯುವಿ ಕಾರು ಆದ 'ಮಹೀಂದ್ರ ಬೊಲೆರೊ' ನೀಡಿ ಗೌರವಿಸಿದೆ.

ಯಾವುದೇ ಸನ್ನಿವೇಶದಲ್ಲೂ ಭಾರತೀಯ ಪರಿಸ್ಥಿಯಲ್ಲಿಯಲ್ಲಿ ಉತ್ತಮ ನಿರ್ವಹಣೆಯೊಂದಿಗೆ ಚಲಿಸಬಲ್ಲ ಶ್ರೇಷ್ಠ ಕ್ಷಮತೆಯನ್ನು ಮಹೀಂದ್ರ ಬೊಲೆರೂ ಹೊಂದಿದೆ. ಮಹೀಂದ್ರ ಆಂಡ್ ಮಹೀಂದ್ರ ಚೀಫ್ ಮಾರ್ಕೆಟಿಂಗ್ ಆಫಿಸರ್ ಆದ ವಿವೇಕ್ ನಾಯರ್ ಕಾರು ನೀಡಿ ಮೇರಿ ಅವರನ್ನು ಸನ್ಮಾನಿಸಿದರು.

To Follow DriveSpark On Facebook, Click The Like Button
ಕಳೆದ ಆರು ವರ್ಷಗಳಲ್ಲಿ ಎಸ್‌ಯುವಿ ಕಾರುಗಳ ಪೈಕಿ ಮಹೀಂದ್ರ ಬೊಲೆರೊಗೆ ಅತಿ ಹೆಚ್ಚು ಬೇಡಿಕೆಯಿದೆ. ಇದನ್ನೇ ಪರಿಗಣಿಸಿ 'ಶೋಭಯಾಮಾನ' ಮೇರಿಗೆ ನಂ. 1 ಎಸ್‌ಯುವಿ ತಂತ್ರಜ್ಞಾನದ ಕಾರು ನೀಡಿ ಮಹೀಂದ್ರ ಸನ್ಮಾನಿಸಿದೆ.

ಕ್ರೀಡಾ ಉಪಯೋಗಿ ವಾಹನ (ಎಸ್‌ಯುವಿ) ತಯಾರಿಸುವುದರಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿರುವ ಮಹೀಂದ್ರ ತನ್ನ ಶ್ರೇಷ್ಠ ಎಸ್‌ಯುವಿ ಯುಟಿಲಿಟಿ ಕಾರು ಆದ ಬೊಲೆರೊ ಯಾವುದೇ ಕಠಿಣ ಪರಿಸ್ಥಿತಿಯಲ್ಲಿಯೂ ಗುಣಮಟ್ಟದ ನಿರ್ವಹಣೆ ನೀಡುವ ಸಾಮರ್ಥ್ಯ ಹೊಂದಿದೆ.

ಬಾಕ್ಸಿಂಗ್ ರಿಂಗ್‌ನಲ್ಲಿ ಯಾವುದೇ ಸವಾಲುಗಳನ್ನು ಸ್ವೀಕರಿಸುವ ಮೇರಿ ಕಾಮ್, ಎರಡು ಮಕ್ಕಳ ತಾಯಿ ಆಗಿರುವ ಹೊರತಾಗಿಯೂ ಒಲಿಂಪಿಕ್ಸ್‌ನಲ್ಲಿ ಅದ್ಭುತ ನಿರ್ವಹಣೆ ನೀಡುವ ಮೂಲಕ ದೇಶದ ಜನತೆಯ ಹೆಮ್ಮೆಗೆ ಕಾರಣವಾಗಿದ್ದರು.

English summary
Mahindra and Mahindra have presented London 2012 Olympic bronze medal winner M C Mary Kom with a Bolero SUV
Story first published: Friday, November 2, 2012, 10:31 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark