ಸೆಪ್ಟೆಂಬರ್ 18ಕ್ಕೆ ಮರ್ಸಿಡಿಸ್ ಬಿ ಕ್ಲಾಸ್ ಆಗಮನ

Posted By:
ಪ್ರಸಕ್ತ ಸೆಪ್ಟೆಂಬರ್ ತಿಂಗಳಲ್ಲಿ ರಸ್ತೆಗಿಳಿಯಲು ವಿವಿಧ ಕಾರು, ಬೈಕ್, ಸ್ಕೂಟರುಗಳು ಸರತಿ ಸಾಲಿನಲ್ಲಿವೆ. ಮರ್ಸಿಡಿಸ್ ಬೆಂಝ್ ಕಂಪನಿಯ ಅದ್ದೂರಿ ಕಾರೊಂದರ ನಿರೀಕ್ಷೆಯಲ್ಲಿದ್ದವರು ಇನ್ನು ಹೆಚ್ಚು ದಿನ ಕಾಯಬೇಕಾಗಿಲ್ಲ. ನೂತನ ಮರ್ಸಿಡಿಸ್ ಬಂಝ್ ಬಿ ಕ್ಲಾಸ್ ಸ್ಪೋರ್ಟ್ ಟೂರರ್ ಕಾರು ಇದೇ ಸೆಪ್ಟೆಂಬರ್ 18ರಂದು ದೇಶದ ರಸ್ತೆಗೆ ಆಗಮಿಸಲಿದೆ.

ಕಂಪನಿಯು ಬುದ್ ಇಂಟರ್ ನ್ಯಾಷನಲ್ ಸರ್ಕ್ಯೂಟಿನಲ್ಲಿ ಕೆಲವು ಸಮಯದ ಹಿಂದೆ ಲೆಫ್ಟ ಹ್ಯಾಂಡ್ ಡ್ರೈವಿನ ಬಿ ಕ್ಲಾಸ್ ಬಿ200 ಕಾರನ್ನು ಅನಾವರಣ ಮಾಡಿತ್ತು. ಇದೀಗ ದೇಶಿ ಆವೃತ್ತಿಯನ್ನು ಸಿದ್ಧಪಡಿಸಿರುವ ಕಂಪನಿಯು ಬಿ ಕ್ಲಾಸ್ ಟೂರರ್ ಪರಿಚಯಿಸಲು ಸಜ್ಜಾಗಿದೆ.

ನೂತನ ಕಾರು ಬಿಡುಗಡೆ ಕಾರ್ಯಕ್ರಮವು ಮುಂಬೈನಲ್ಲಿ ನಡೆಯಲಿದೆ. ಕಂಪನಿಯು ಕಂಪ್ಲಿಟ್ಲಿ ಬಿಲ್ಡ್ ಯುನಿಟ್(ಸಿಬಿಯು) ಹಾದಿ ಮೂಲಕ ದೇಶಕ್ಕೆ ಬಿ ಕ್ಲಾಸ್ ಕಾರನ್ನು ಆಮದು ಮಾಡಿಕೊಂಡು ಮಾರಾಟ ಮಾಡಲಿದೆ.

ಆರಂಭಿಕವಾಗಿ ಮರ್ಸಿಡಿಸ್ ಬೆಂಝ್ ಬಿ ಕ್ಲಾಸ್ ಬಿ180 ಕಾರು ಪೆಟ್ರೋಲ್ ಆಯ್ಕೆಯಲ್ಲಿ ಮಾತ್ರ ಲಭ್ಯವಿರಲಿದೆ. ಡೀಸೆಲ್ ಆವೃತ್ತಿಯು ಮುಂದಿನ ವರ್ಷದ ಆರಂಭದಲ್ಲಿ ಆಗಮಿಸುವ ನಿರೀಕ್ಷೆಯಿದೆ. ಇದು ಕಂಪನಿಯು ಭಾರತದ ರಸ್ತೆಗೆ ಪರಿಚಯಿಸುತ್ತಿರುವ ಮೊದಲ ಸ್ಪೋರ್ಟ್ಸ್ ಟೂರರ್ ಆಗಿರಲಿದೆ.

ಬೆಂಝ್ ಬಿ ಕ್ಲಾಸ್ ನಿರೀಕ್ಷಿತ ಆವೃತ್ತಿಗಳು

* ಬಿ 180

* ಬಿ 180 ಸ್ಪೋರ್ಟ್

ಬಿ-ಕ್ಲಾಸ್ ಎಂಜಿನ್ ಮಾಹಿತಿ

* ನಾಲ್ಕು ಸಿಲಿಂಡರಿನ 1.6 ಲೀಟರಿನ ಪೆಟ್ರೋಲ್ ಎಂಜಿನ್

* 122 ಅಶ್ವಶಕ್ತಿ ಮತ್ತು 200ಎನ್ಎಂ ಟಾರ್ಕ್ ಪವರ್

English summary
Mercedes Benz has confirmed their sports tourer B class will be launched on September 18, 2012. The B Class initially will be offered only in the petrol variant B180. The diesel variant is expected to make its in-roads into India by early 2013.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark