ಫಸ್ಟ್ ಕ್ಲಾಸ್ ಆಗಿದೆ ಮರ್ಸಿಡಿಸ್ ಎ-ಕ್ಲಾಸ್ ಕಾರು!
ಮರ್ಸಿಡಿಸ್ ಬೆಂಝ್ ಕಂಪನಿಯು ನೂತನ ಸ್ಪೋರ್ಟಿ ಕಾಂಪ್ಯಾಕ್ಟ್ "ಎ-ಕ್ಲಾಸ್" ಹ್ಯಾಚ್ ಬ್ಯಾಕ್ ಕಾರನ್ನು ಜಿನಿವಾ ಅಂತಾರಾಷ್ಟ್ರೀಯ ವಾಹನ ಪ್ರದರ್ಶನದಲ್ಲಿ ಅನಾವರಣ ಮಾಡಿದೆ. ದೇಶದ ರಸ್ತೆಗೆ ಮುಂದಿನ ವರ್ಷ ಎ-ಕ್ಲಾಸ್ ಕಾರುಗಳು ಆಗಮಿಸುವ ನಿರೀಕ್ಷೆಯಿದೆ. ಈ ಕಾರು ಈ ವರ್ಷದ ಆರಂಭದಲ್ಲಿ "ದೆಹಲಿ ವಾಹನ ಪ್ರದರ್ಶನ"ದಲ್ಲೂ ಪ್ರದರ್ಶಿಸಲ್ಪಟ್ಟಿತ್ತು.
ಎ-ಕ್ಲಾಸ್ ಕಾರುಗಳು ದೇಶದ ರಸ್ತೆಗೆ ಎಂಟ್ರಿ ಲೆವೆಲ್ ಅಥವಾ ಆರಂಭಿಕ. ಆದರೆ ಎ-ಕ್ಲಾಸ್ ಕಾರುಗಳಿಗಿಂತ ಮುನ್ನ ಬೆಂಝ್ ಬಿಕ್ಲಾಸ್ ಕಾರುಗಳು ದೇಶದ ರಸ್ತೆಗೆ ಆಗಮಿಸುವ ನಿರೀಕ್ಷೆಯಿದೆ.
ಮರ್ಸಿಡಿಸ್ ಬೆಂಝ್ ಎ ಕ್ಲಾಸ್ ಕಾರುಗಳು ಫ್ರಂಟ್ ವೀಲ್ ಡ್ರೈವ್ ಕಾರಾಗಿದ್ದು, ಮರ್ಸಿಡಿಸ್ ಫ್ರಂಟ್ ವೀಲ್ ಆರ್ಕಿಟೆಕ್ಚರ್(ಎಂಎಫ್ಎ) ಪ್ಲಾಟ್ ಫಾರ್ಮ್ ನಿಂದ ವಿನ್ಯಾಸ ಮಾಡಲಾಗಿದೆ. ಈ ಕಾರು ಪೆಟ್ರೋಲ್ ಮತ್ತು ಡೀಸೆಲ್ ಆಯ್ಕೆಗಳಲ್ಲಿ ದೊರಕುತ್ತದೆ.
ನೂತನ ಎ-ಕ್ಲಾಸ್ ಕಾರಿನ ದರ ದೇಶದಲ್ಲಿ ಸುಮಾರು 20 ಲಕ್ಷ ರುಪಾಯಿ ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ. ಈ ಕಾರು ಆಡಿ ಎ3 ಸೆಡಾನ್ ಮತ್ತು ಬಿಎಂಡಬ್ಲ್ಯು 1 ಸೀರಿಸ್ ಕಾರುಗಳಿಗೆ ಪೈಪೋಟಿ ನೀಡುವ ನಿರೀಕ್ಷೆಯಿದೆ.


Click it and Unblock the Notifications









