2016ಕ್ಕೆ ನಿಸಾನ್ ಹತ್ತು ಕಾರುಗಳ ಆಗಮನ

ನಿಸಾನ್ ಇಂಡಿಯಾ ಕಂಪನಿಯು ದೇಶದ ರಸ್ತೆಗೆ ಹಲವು ಹೊಸ ಕಾರುಗಳನ್ನು ಪರಿಚಯಿಸುವ ಯೋಜನೆಯಲ್ಲಿದೆ. 2016ರ ವೇಳೆಗೆ ಕಂಪನಿಯು ಒಟ್ಟು 10 ಕಾರುಗಳನ್ನು ಪರಿಚಯಿಸುವ ಯೋಜನೆ ಹಾಕಿಕೊಂಡಿದೆ.

ಈಗಾಗಲೇ ದೇಶದಲ್ಲಿ ಸನ್ನಿ, ಇವಾಲಿಯಾ ಜನಪ್ರಿಯತೆ ಪಡೆದಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಶೇಕಡ 8ರಷ್ಟು ಮಾರುಕಟ್ಟೆ ಪಾಲು ಪಡೆಯುವ ಕಂಪನಿಯ ಗುರಿಗೆ ದೇಶದ ಮಾರುಕಟ್ಟೆ ನೆರವಾಗುವ ನಿರೀಕ್ಷೆಯನ್ನು ಕಂಪನಿ ಹೊಂದಿದೆ.

ರಾಜ್ಯಕ್ಕೆ ಇವಾಲಿಯಾ ಪರಿಚಯಿಸಿದ ಸಂದರ್ಭದಲ್ಲಿ ನಿಸಾನ್ ಇಂಡಿಯಾ ಕಂಪನಿಯ ಮಾರುಕಟ್ಟೆ ವಿಭಾಗದ ನಿರ್ದೇಶಕರಾದ ನಿತೀಶ್ ಟಿಪಿನ್ಸ್ ಈ ಮಾಹಿತಿ ನೀಡಿದ್ದಾರೆ. "ಕಂಪನಿಯು 2016ರ ವೇಳೆಗೆ ಸುಮಾರು 10 ಕಾರುಗಳನ್ನು ಪರಿಚಯಿಸಲಿದೆ" ಎಂದು ಅವರು ಹೇಳಿದ್ದಾರೆ.

ನಿಸಾನ್ ಕಂಪನಿಯು ಮೈಕ್ರಾ ಹೆಸರಿನ ಸಣ್ಣ ಕಾರು ಪರಿಚಯಿಸುವ ಮೂಲಕ ದೇಶದಲ್ಲಿ ವಹಿವಾಟು ಆರಂಭಿಸಿತು. ನಂತರ ರಸ್ತೆಗೆ ಸನ್ನಿ ಕಾರನ್ನು ಪರಿಚಯಿಸಿತು. ನಿಸಾನ್ ಸನ್ನಿ ಕಾರಿಗೆ ಗ್ರಾಹಕರಿಂದ ಅತ್ಯುತ್ತಮ ಬೇಡಿಕೆ ವ್ಯಕ್ತವಾಗಿದೆ.

ನಿಸಾನ್ ಕಂಪನಿಯು ಮೂರು ಕಾರುಗಳನ್ನು ಜಪಾನಿನಿಂದ ಆಮದು ಮಾಡಿಕೊಂಡು ಮಾರಾಟ ಮಾಡುತ್ತಿದೆ. ಟೀನಾ ಪ್ರೀಮಿಯಂ ಸೆಡಾನ್, ಎಕ್ಸ್ ಟ್ರೈಲ್ ಮತ್ತು 370ಝಡ್ ಸ್ಪೋರ್ಟ್ಸ್ ಕಾರನ್ನು ಮಾರಾಟ ಮಾಡುತ್ತಿದೆ. ಇತ್ತೀಚೆಗೆ ಕಂಪನಿಯು ನಿಸಾನ್ ಇವಾಲಿಯಾ ಪರಿಚಯಿಸಿದೆ.

Most Read Articles

Kannada
English summary
Nissan India which is on a roll following the huge success of the Sunny sedan has launched the new Evalia MPV. The Japanese carmaker is looking at emerging markets like India to help reach its target of 8% market share globally and a 8% profit margin
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X