ದಿನಂಪ್ರತಿ ಪೆಟ್ರೋಲ್ ದರ ಬದಲಾಯಿಸುವ ಪ್ರಸ್ತಾಪ

ಅನಿರ್ಧಿಷ್ಟಾವಧಿಗೊಮ್ಮೆ ಪೆಟ್ರೋಲ್ ದರವನ್ನು ಸರಕಾರ ಹೆಚ್ಚಿಸಿದಾಗ ಜನರೆಲ್ಲ ತಲೆಮೇಲೆ ಆಕಾಶವೇ ಬಿದ್ದಂತೆ ಆಡುತ್ತಾರೆ. ತಿಂಗಳಿಗೊಮ್ಮೆ ದರ ಹೆಚ್ಚಿಸಿದರಂತೂ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಾರೆ. ವಾರಕ್ಕೊಮ್ಮೆ ದರ ಹೆಚ್ಚಿಸಿದ್ರೆ ಸರಕಾರದ ಬುಡವೇ ಅಲ್ಲಾಡಬಹುದು. ಆದ್ರೆ ಪ್ರತಿದಿನ ಪೆಟ್ರೋಲ್ ದರ ಹೆಚ್ಚಳ ಅಥವಾ ಇಳಿಕೆ ಮಾಡುತ್ತಿದ್ದರೆ ಹೇಗಿರಬಹುದು?

ಚಿನ್ನದ ದರ ಪ್ರತಿದಿನ ಏರಿಳಿತವಾಗುತ್ತದೆಯಲ್ವ? ಅದೇ ರೀತಿ ಪೆಟ್ರೋಲ್ ದರವೂ ಭವಿಷ್ಯದಲ್ಲಿ ಪ್ರತಿದಿನ ಏರಿಕೆ ಅಥವಾ ಇಳಿಕೆ ಕಾಣಲಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಮತ್ತು ರೂಪಾಯಿ ಮೌಲ್ಯ ಏರುಪೇರಿಗೆ ತಕ್ಕಂತೆ ದಿನಂಪ್ರತಿ ಪೆಟ್ರೋಲ್ ದರ ಏರಿಳಿತ ಮಾಡುವ ಕುರಿತು ಕೇಂದ್ರ ಸರಕಾರ ಅವಲೋಕಿಸುತ್ತಿದೆ ಎಂದು ವರದಿಗಳು ಹೇಳಿವೆ.

ಈಗ ಪ್ರತಿ ಹದಿನೈದು ದಿನಕ್ಕೊಮ್ಮೆ ತೈಲಕಂಪನಿಗಳು ಸರಕಾರವನ್ನು ಭೇಟಿಯಾಗಿ ತೈಲದರದ ಹೆಚ್ಚಳ ಅಥವಾ ಇಳಿಕೆ ಕುರಿತು ಚರ್ಚಿಸುತ್ತಿವೆ. ಇದನ್ನು ಇನ್ನು ಪ್ರತಿದಿನವೂ ಮಾಡುವ ಪ್ರಸ್ತಾಪ ಇದಾಗಿದೆ. ಕೆಲವೇ ಪೈಸೆಗಳ ಲೆಕ್ಕದಲ್ಲಿ ದರ ಏರಿಳಿತವಾಗುವುದರಿಂದ ಗ್ರಾಹಕರಿಗೂ ದೊಡ್ಡ ಹೊರೆಯಾದಂತೆ ಅನಿಸದು.

ಈಗ ತೈಲ ಕಂಪನಿಗಳು ಪೆಟ್ರೋಲ್ ದರವನ್ನು ಏರಿಕೆ ಮಾಡುವ ಅಭ್ಯಾಸವನ್ನು ಬೆಳೆಸಿಕೊಂಡಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಇಳಿಕೆ ಕಂಡರೂ ಪೆಟ್ರೋಲ್ ದರ ತಗ್ಗಿಸಲು ಕಂಜೂಸ್ ಮಾಡುತ್ತಿವೆ. ಪ್ರತಿದಿನ ದರವನ್ನು ಮಾನಿಟರ್ ಮಾಡಿದರೆ ಗ್ರಾಹಕರಿಗೆ ಹೆಚ್ಚಿನ ನಷ್ಟವಿಲ್ಲ ಎನ್ನಲಾಗಿದೆ.

ಈಗ ಪೆಟ್ರೋಲ್ ದರ ಲೀಟರಿಗೆ 80 ರುಪಾಯಿ ಆಸುಪಾಸಿನಲ್ಲಿದೆ. ಇದರಿಂದ ಪೆಟ್ರೋಲ್ ಕಾರುಗಳ ಮಾರಾಟವೂ ಗಣನೀಯವಾಗಿ ತಗ್ಗಿದೆ. ವಾಹನ ಕಂಪನಿಗಳಿಗೆ ಪೆಟ್ರೋಲ್ ದರವೂ ದೊಡ್ಡ ತಲೆನೋವು ಆಗಿದೆ. ಇದೇ ಸಮಯದಲ್ಲಿ ಡೀಸೆಲ್ ಕಾರುಗಳ ಬೇಡಿಕೆಯೂ ಹೆಚ್ಚಾಗಿದೆ. ಆದರೆ ಡೀಸೆಲ್ ದರದ/ತೆರಿಗೆಗಳ ಕುರಿತೂ ಅನಿಶ್ಚಿತತೆ ಕಾಡುತ್ತಿದೆ.

Most Read Articles

Kannada
English summary
The government of India is reportedly working on a proposal to oil companies on fixing petrol prices on a daily prices. The proposal is aimed at modifying petrol prices based on international crude oil prices on the day. The government believes such a measure will help oil companies respond to crude oil price cuts immediately thus passing on the benefits to buyers.
Story first published: Wednesday, June 27, 2012, 16:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X