ರೋಲ್ಸ್ ರಾಯ್ಸ್ ಗೆ ಮಲ್ಲಿಕಾ ಶೆರಾವತ್ ಅಂದ್ರೆ ಮೈಲಿಗೆ
ವಿಶೇಷವೆನಿಸಬಹುದು. ನಾವು ದುಡ್ಡು ಕೊಟ್ಟರೂ ಕಾರು ಮಾರಾಟ ಮಾಡದ ಇದೆಂಥ ಕಂಪನಿಯೆಂದು ಭಾವಿಸಬಹುದು. ಆದರೆ ಕಂಪನಿಯ ಮಟ್ಟಿಗೆ ಅದೊಂದು ಸ್ಟಾಂಡರ್ಡ್. ಹೀಗಾಗಿ ರೋಲ್ಸ್ ರಾಯ್ಸ್ ಸೆಕೆಂಡ್ ಹ್ಯಾಂಡ್ ಕಾರಿಗೆ ಹೆಚ್ಚು ಬೇಡಿಕೆಯಿದೆ.
ಬರೀ ಕಾರು ಖರೀದಿ ಮಾತ್ರವಲ್ಲ, ಟೆಸ್ಟ್ ಡ್ರೈವ್ ವಿಷ್ಯದಲ್ಲೂ ರೋಲ್ಸ್ ರಾಯ್ಸ್ ಈ ನೀತಿ ಅನುಸರಿಸುತ್ತದೆ. ಕಾರು ಮಾರಾಟ ಅಥವಾ ಟೆಸ್ಟ್ ಡ್ರೈವ್ ಗೆ ಮುನ್ನ ವ್ಯಕ್ತಿಯ ಸಂಪೂರ್ಣ ಜಾತಕ ಜಾಲಾಡುತ್ತದೆ. ಕೊನೆಗೆ, ಈ ವ್ಯಕ್ತಿಗೆ ಕಾರು ಮಾರಾಟ ಮಾಡಬಹುದು, ಈತನಿಗೆ ಮಾರಾಟ ಮಾಡಿದರೆ ಕಂಪನಿಯ ಪ್ರತಿಷ್ಠೆಗೆ ಕುಂದು ಉಂಟಾಗದು ಎಂದೆನಿಸಿದರೆ ಮಾತ್ರ ಮಾರಾಟ ಮಾಡುತ್ತದೆ.
ಒಂದು ನಿಮಿಷಕ್ಕೆ ಸುಮಾರು ನಾಲ್ಕು ಲಕ್ಷ ರುಪಾಯಿ ದುಡಿಯುವ ಮಲ್ಲಿಕಾ ಶೆರಾವತ್ ಗೂ ರೋಲ್ಸ್ ರಾಯ್ಸ್ ಕಾರಿನ ಮೇಲೆ ಪ್ರೇಮವುಂಟಾಗಿತ್ತು. ಆಕೆಗೆ ದುಡ್ಡಿಗೆ ಬರಗಾಲವಿಲ್ಲ. ಈ ಕುರಿತು ಕಂಪನಿಯನ್ನು ಸಂಪರ್ಕಿಸಿದಾಗ "ಕ್ಷಮಿಸಿ, ನೀವು ರೋಲ್ಸ್ ರಾಯ್ಸ್ ಖರೀದಿಗೆ ಅರ್ಹರಲ್ಲ" ಎಂದು ತಿಳಿಸಿತ್ತು. ಇದು ಕೆಲವು ತಿಂಗಳ ಹಿಂದೆ ನಡೆದ ಘಟನೆ.
ದೇಶದಲ್ಲಿ ಸಂಜಯ್ ದತ್ ರೋಲ್ಸ್ ರಾಯ್ಸ್ ಘೋಸ್ಟ್ ಕಾರನ್ನು ಉಡುಗೊರೆಯಾಗಿ ಪಡೆದಿದ್ದಾರೆ. ಅಮಿತಾಬ್ ಬಚ್ಚನಿಗೆ ವಿನೋದ್ ಛೋಪ್ರಾ ರೋಲ್ಸ್ ರಾಯ್ಸ್ ಪಾಂಟೊಮ್ ಗಿಫ್ಟ್ ನೀಡಿದ್ದಾರೆ.
ಮೈಸೂರಿನ ಮಹಾರಾಜರು ಸೇರುದಂತೆ ದೇಶದ ಕೆಲವು ಮಹಾರಾಜರುಗಳು ರೋಲ್ಸ್ ರಾಯ್ಸ್ ಕಾರುಗಳನ್ನು ಹೊಂದಿದ್ದರು. ಜಾಗತಿಕವಾಗಿ ಜಾನ್ ಲೆನನ್, ಡೇವಿಡ್ ಬಕ್ಹಾಮ್, ಮೈಕಲ್ ಜಾಕ್ಸನ್ ಮುಂತಾದವರು ರೋಲ್ಸ್ ರಾಯ್ಸ್ ಕಾರುಗಳನ್ನು ಹೊಂದಿದ್ದರು.
ಮಲ್ಲಿಕಾ ಶೆರಾವತ್ ಕಾರು ತೊಳೆಯುವುದು ಹೀಗೆ...


Click it and Unblock the Notifications









