ಹುಟ್ಟುಹಬ್ಬಕ್ಕೆ ವೇಗದ ದುಬಾರಿ ಕಾರು ಖರೀದಿಸಿದ ರೊನಾಲ್ಡೊ

ಕ್ರಿಶ್ಚಿಯಾನೊ ರೊನಾಲ್ಡೊ ಖರೀದಿಸಿದ ಲಂಬೊರ್ಗಿನಿ ಅವೆಂಟಡೊರ್ ಕಪ್ಪು ಬಣ್ಣದ ಆಕರ್ಷಕ ಕಾರು. ಇದು ಲಂಬೊರ್ಗಿನಿ ಕಂಪನಿಯು ಇತ್ತೀಚೆಗೆ ರಸ್ತೆಗೆ ಬಿಟ್ಟ ಕಾರು. ಇದು 6.4 ಲೀಟರಿನ ವಿ12 ಪೆಟ್ರೋಲ್ ಎಂಜಿನ್ ಹೊಂದಿದ್ದು 700 ಹಾರ್ಸ್ ಪವರ್ ನೀಡುತ್ತದೆ. ಕೇವಲ ನಾಲ್ಕು ಸೆಕೆಂಡಿನಲ್ಲಿ 0-100 ಕಿ.ಮೀ. ವೇಗ ಪಡೆದುಕೊಳ್ಳುತ್ತದೆ. ಈ ಕಾರಿನ ಗರಿಷ್ಠ ವೇಗ ಗಂಟೆಗೆ 324 ಕಿ.ಮೀ.
ಮುರ್ಸಿಲಾಗೊ ಕಾರಿನ ಮರುವಿನ್ಯಾಸದ ಆವೃತ್ತಿಯಾಗಿ ಅವೆಂಟಡೊರ್ ರಸ್ತೆಗಿಳಿದಿದೆ. ಇದು ಹಳೆಯ ಮುರ್ಸಿಲಾಗೊ ಕಾರಿಗಿಂತ ಹೆಚ್ಚು ವೇಗ ಮತ್ತು ಶಕ್ತಿಶಾಲಿಯಾಗಿರೋ ಬಂಡಿಯಾಗಿದೆ. ರೊನಾಲ್ಟೊ ಗೆ ಕಾರುಗಳೆಂದರೆ ಏನೋ ಕ್ರೇಝು. ಅವರ್ಲ್ಲಿ ಫೆರಾರಿ 599, ಫೆರಾರಿ 599 ಜಿಟಿಒ, ಆಡಿ ಆರ್8 ಸೂಪರ್ ಕಾರು ಸೇರಿದಂತೆ ಹಲವು ಐಷಾರಾಮಿ ವೇಗದ ಕಾರುಗಳಿವೆ. (ಕನ್ನಡ ಡ್ರೈವ್ ಸ್ಪಾರ್ಕ್)


Click it and Unblock the Notifications








