ಪ್ಲೇಬಾಯ್ ಬೆತ್ತಲೆ ಚೆಲುವಿ ಶೆರ್ಲಿನ್ ಕಪ್ಪು ಬ್ಯೂಟಿ

Posted By:

ಹಾಲಿನಷ್ಟೇ ಬೆಳ್ಳಗೆ ಹೊಳೆಯುವ ಶೆರ್ಲಿನ್ ಛೋಪ್ರಾ ಎಂಬ ಬೆಡಗಿಯನ್ನು ಕಪ್ಪು ಸುಂದರಿ ಎಂದು ಕರೆದಿರೆಂದು ಆಕೆಯ ಅಭಿಮಾನಿಗಳು ಕೋಪಿಸಿಕೊಳ್ಳಬಾರದು. ಆಕೆಯೇ ಪ್ರೀತಿಯಿಂದ ತನ್ನ ಬಳಿಯಿರುವ ವಸ್ತುವೊಂದಕ್ಕೆ ಬ್ಲ್ಯಾಕ್ ಬ್ಯೂಟಿ ಎಂದು ನಾಮಕರಣ ಮಾಡಿದ್ದಾರೆ. ಯಾವುದು ಆ ವಸ್ತು? ಎಂದು ತಿಳಿದುಕೊಳ್ಳುವ ಮೊದಲು ಶೆರ್ಲಿನ್ ಬಗೆಗಿನ ಸದ್ಯದ ಬಿಸಿಬಿಸಿ ಸುದ್ದಿಯನ್ನು ತಿಳಿಯೋಣ.

ಪ್ಲೇಬಾಯ್ ಅಂತ ಅಂತಾರಾಷ್ಟ್ರೀಯ ಜನಪ್ರಿಯ ಪೋಲಿ ಮ್ಯಾಗಜಿನ್ ಇದೆ. ಅದರ ಮುಖಪುಟದಲ್ಲಿ ಬೆತ್ತಲೆಯಾಗಿ ನಟಿಯರ, ರೂಪದರ್ಶಿಯರ, ಚೆಲುವೆಯರ ಫೋಟೊ ಪ್ರಕಟಿಸಲಾಗುತ್ತದೆ. ಅಲ್ಲಿ ತಮ್ಮದೂ ಒಂದು ನಗ್ನ ಚಿತ್ರ ಬರಲೆಂದು ದೇಶದ ಹಲವು ನಟಿಯರು ಪ್ರಯತ್ನಿಸಿದ್ದರು. ಹೂಂ ಹೂಂ ಯಾರಿಗೂ ಆ ಅವಕಾಶ ಸಿಕ್ಕಿರಲೇ ಇಲ್ಲ. ಪ್ರಪ್ರಥಮ ಬಾರಿಗೆ ಶೆರ್ಲಿನ್ ಆ ಅವಕಾಶ ಪಡೆದಿದ್ದಾರೆ.

ಈಗ ಬ್ಲ್ಯಾಕ್ ಬ್ಯೂಟಿ ವಿಷಯದ ಬಗ್ಗೆ ಮಾತನಾಡೋಣ. ಬ್ಲ್ಯಾಕ್ ಬ್ಯೂಟಿ ಅಂತ ಶೆರ್ಲಿನ್ ಛೋಪ್ರಾ ಕರೆದಿರುವುದು ತನ್ನ ಪ್ರೀತಿಯ ಬಿಎಂಡಬ್ಲ್ಯು ಎಕ್ಸ್5 ಕಾರನ್ನು. ಆಕೆ 2011ರಲ್ಲಿ ಖರೀದಿಸಿದ ಈ ಕಾರಿಗೆ ಪ್ರೀತಿಯಿಂದ ಕಪ್ಪು ಸುಂದರಿ ಎಂದು ನಾಮಕರಣ ಮಾಡಿದ್ದಾರೆ.

ಪೂನಂ ಪಾಂಡೆ ಅಂದರೆ ನ್ಯಾನೊ ಕಾರು. ಶೆರ್ಲಿನ್ ಅಂದರೆ ಬಿಎಂಡಬ್ಲ್ಯು ಅಂತ ಆಕೆ ಈ ಹಿಂದೊಮ್ಮೆ ಟ್ವಿಟ್ ಮಾಡಿದ್ದರು. ಕಾರು ಖರೀದಿಸಿದ ಸಮಯದಲ್ಲಂತೂ "ಬಿಎಂಡಬ್ಲ್ಯು ಸೂಪರ್ ಸೆಕ್ಸಿ ಆಗಿದೆ ಅಲ್ವಾ?" ಅಂತ ತನ್ನ ಅಭಿಮಾನಿಗಳಲ್ಲಿ ಟ್ವಿಟ್ ಮಾಡಿ ಕೇಳಿದ್ದಳು ಶೆರ್ಲಿನ್. ಹೂಂ ಹೂಂ ಅಂತ ಆಕೆಯ ಅಭಿಮಾನಿಗಳು ರಿಟ್ವಿಟ್ ಮಾಡಿದ್ದರು.

ಶೆರ್ಲಿನ್ ಛೋಪ್ರಾ ಬಳಿಯಿರುವ ಕಪ್ಪು ಸುಂದರಿ "ಬಿಎಂಡಬ್ಲ್ಯು ಎಕ್ಸ್5" ಕಾರಿನ ಬಗ್ಗೆ ತಿಳಿದುಕೊಳ್ಳೋಣ. ಇದು ಕಂಪನಿಯ ಎಕ್ಸ್ ಸೀರಿಸ್ ಕಾರು. ಇದರ ಬೆಂಗಳೂರು ಎಕ್ಸ್ ಶೋರೂಂ ದರ ಸುಮಾರು 64 ಲಕ್ಷ ರುಪಾಯಿಯಿಂದ 81 ಲಕ್ಷ ರುಪಾಯಿವರೆಗಿದೆ.

ಇದು ಎಕ್ಸ್ ಡ್ರೈವ್30ಐ ಮತ್ತು ಎಕ್ಸ್ ಡ್ರೈವ್50ಐ ಎಂಬ ಎರಡು ಆವೃತ್ತಿಗಳಲ್ಲಿ ದೊರಕುತ್ತದೆ. ಇದರಲ್ಲಿ ಎಕ್ಸ್ ಡ್ರೈವ್30ಐ 2,993ಸಿಸಿ, 6 ಸಿಲಿಂಡರ್ ಡೀಸೆಲ್ ಹೊಂದಿದೆ. ಎಕ್ಸ್ ಡ್ರೈವ್50ಐ ಅತ್ಯಧಿಕ ಶಕ್ತಿಶಾಲಿ 4,395ಸಿಸಿ, 8 ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಕಂಪನಿಯು ಸಿಬಿಯು ಹಾದಿ ಮೂಲಕ ಎಕ್ಸ್5 ಕಾರುಗಳನ್ನು ಆಮದು ಮಾಡಿಕೊಳ್ಳುತ್ತಿದೆ.

ಅತ್ಯಧಿಕ ಶಕ್ತಿ ಮತ್ತು ಸೌಂದರ್ಯದ ಯುಗಳಗೀತೆಯಾಗಿ ಬಂದಿರುವ ಬಿಎಂಡಬ್ಲ್ಯು ಎಕ್ಸ್5 ಕಾರು ಶೆರ್ಲಿನ್ ಎಂದಂತೆ ಸೆಕ್ಸಿಯಾಗಿಯೇ ಇದೆ.

ಓದಿ: ಕತ್ರಿನಾಗೆ ಹಳೆ ಬಾಯ್ ಫ್ರೆಂಡಿನ ಹೊಸ ಗಿಫ್ಟ್

English summary
Sherlyn Chopra, the Indian beauty now in the news for making it to the front page of Playboy has her own black beauty - BMW X5. She bought the premium car in 2011. The X5 is a blend of beauty and power.
Please Wait while comments are loading...

Latest Photos