ಜ್ಯೂಟ್! ದೇಶಕ್ಕೆ ಬಂತು ಸ್ಕೋಡಾ ಫಾಬಿಯಾ ಸ್ಕೌಟ್

Posted By:

ಸ್ಕೋಡಾ ಕಂಪನಿಯ ಫ್ಯಾಬಿಯಾ ಫ್ಯಾಮಿಲಿಗೆ ಸ್ಕೌಟ್ ಎಂಬ ಹೊಸ ಕಾರೊಂದು ಆಗಮಿಸಿದೆ. ಜೆಕ್ ಗಣರಾಜ್ಯದ ಕಾರು ಕಂಪನಿಯ ಭಾರತದ ಅಂಗಸಂಸ್ಥೆ ಸ್ಕೋಡಾ ಇಂಡಿಯಾ ಸೈಲೆಂಟಾಗಿ ಫಾಬಿಯಾ ಸ್ಕೌಟ್ ಹ್ಯಾಚ್‌ಬ್ಯಾಕ್ ಕಾರನ್ನು ಪರಿಚಯಿಸಿದೆ.

ನೂತನ ಸ್ಕೋಡಾ ಸ್ಕೌಟ್ ಪೆಟ್ರೋಲ್ ಆವೃತ್ತಿ ಆರಂಭಿಕ ದರ 6.79 ಲಕ್ಷ ರು. ಮತ್ತು ಡೀಸೆಲ್ ಆವೃತ್ತಿ ಸ್ಕೌಟ್ ಆರಂಭಿಕ ದರ 8.10 ಲಕ್ಷ ರುಪಾಯಿ ಆಗಿದೆ. ಈ ವರ್ಷದ ಆರಂಭದಲ್ಲಿ ನಡೆದ ದೆಹಲಿ ವಾಹನ ಪ್ರದರ್ಶನದಲ್ಲೂ ಸ್ಕೌಟ್ ಕಾರನ್ನು ಪ್ರದರ್ಶಿಸಲಾಗಿತ್ತು.

To Follow DriveSpark On Facebook, Click The Like Button

ನೂತನ ಫಾಬಿಯಾ ಸ್ಕೌಟ್ ನೋಡಲು ಹಳೆಯ ಫಾಬಿಯಾ ಕಾರಿನಂತೆ ಇದೆ. ಕಾರಿನ ಗ್ರೌಂಡ್ ಕ್ಲಿಯರೆನ್ಸ್ ಇತ್ಯಾದಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಫಾಬಿಯಾದಂತೆ ಸ್ಕೌಟ್ ಕೂಡ ಆಫ್ ರೋಡ್ ಸವಾರಿ ಸಾಮರ್ಥ್ಯ ಹೊಂದಿಲ್ಲ.

ಸ್ಕೋಡಾ ಫಾಬಿಯಾ ಸ್ಕೌಟ್ 1.2 ಲೀಟರಿನ ಎಂಪಿಐ 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಇದು 75 ಅಶ್ವಶಕ್ತಿ ಮತ್ತು 110 ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಸ್ಕೌಟ್ ಖಾರು 1.2 ಲೀಟರ್ ಟಿಡಿಐ ಸಿಆರ್ ಡೀಸೆಲ್ ಟರ್ಬೊ ಚಾರ್ಜಡ್ 3 ಸಿಲಿಂಡರ್ ಎಂಜಿನ್ ಆಯ್ಕೆಯಲ್ಲೂ ದೊರಕುತ್ತದೆ. ಇದು 75 ಅಶ್ವಶಕ್ತಿ ಮತ್ತು 180 ಎನ್ಎಂ ಟಾರ್ಕ್ ಪವರ್ ನೀಡುತ್ತದೆ.

ಸ್ಕೋಡಾ ಫಾಬಿಯಾ ಸ್ಕೌಟ್ ಕಾರಿನ ಇವೆರಡೂ ಎಂಜಿನ್‌ಗಳೂ 5 ಸ್ಪೀಡಿನ ಮ್ಯಾನುಯಲ್ ಗೇರ್ ಹೊಂದಿವೆ. ಸ್ಟಿರಿಯೊ ಪವರ್ ವಿಂಡೋಸ್, ಟಿಂಟೆಡ್ ಗ್ಲಾಸ್, ಸ್ಪೋರ್ಟಿ ಸ್ಟೈನ್ ಲೆಸ್ ಸ್ಡೀಲ್ ಪೆಡಲ್ ಮತ್ತು ರಿಮೋಟ್ ಲಾಕಿಂಗ್, ಡ್ರೈವರ್ ಮತ್ತು ಪ್ರಯಾಣಿಕರಿಗೆ ಏರ್‌ಬ್ಯಾಗ್ ಇತ್ಯಾದಿ ಫೀಚರುಗಳು ನೂತನ ಸ್ಕೌಟ್ ಕಾರಿನಲ್ಲಿದೆ.

English summary
Skoda India silently launched the Fabia Scout hatchback at a starting price of Rs 6.79 lakhs for the petrol variant and a higher Rs 8.10 lakhs for the diesel. The car maker has been reportedly testing the Fabia Scout hatchback in India for quite a while.
Story first published: Wednesday, April 25, 2012, 13:32 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark