ಟಾಟಾ ಕಾರುಗಳು 35 ಸಾವಿರ ರು.ವರೆಗೆ ದುಬಾರಿ

Posted By:
ಬಜೆಟ್ ನಂತರದ ತಕ್ಷಣದ ಬೆಳವಣಿಗೆಯಾಗಿ ಹೆಚ್ಚಿನ ವಾಹನ ಕಂಪನಿಗಳು ಕಾರು ದರ ಹೆಚ್ಚಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ಸುದ್ದಿ. ಇದೀಗ ಟಾಟಾ ಮೋಟರ್ಸ್ ಕೂಡ ತನ್ನ ಪ್ರಯಾಣಿಕ ವಾಹನಗಳ ಬೆಲೆಯನ್ನು 35 ಸಾವಿರ ರು.ವರೆಗೆ ಏರಿಕೆ ಮಾಡಿದೆ.

2012-13ರ ಕೇಂದ್ರ ಬಜೆಟಿನಲ್ಲಿ ಅಬಕಾರಿ ಸುಂಕವನ್ನು ಶೇಕಡ 10ರಿಂದ ಶೇಕಡ 12ಕ್ಕೆ ಹೆಚ್ಚಿಸಿರುವುದರಿಂದ ಕಾರು ದರ ಹೆಚ್ಚಳ ಅನಿವಾರ್ಯವೆಂದು ಟಾಟಾ ಮೋಟರ್ಸ್ ಹೇಳಿದೆ.

ಸಣ್ಣಕಾರು ನ್ಯಾನೊ, ಹ್ಯಾಚ್ ಬ್ಯಾಕ್ ಇಂಡಿಕಾ ಮತ್ತು ಇಂಡಿಗೊ ಸೆಡಾನ್ ಕಾರುಗಳು ಸೇರಿದಂತೆ ಹೆಚ್ಚಿನ ಪ್ರಯಾಣಿಕ ಕಾರುಗಳ ದರವನ್ನು ಹೆಚ್ಚಿಸಿದೆ. ಪ್ರಯಾಣಿಕ ಕಾರುಗಳ ದರವನ್ನು ಕಂಪನಿಯು 2 ಸಾವಿರ ರು.ನಿಂದ 8 ಸಾವಿರ ರು.ವರೆಗೆ ಹೆಚ್ಚಿಸಿದೆ.

ಯುಟಿಲಿಟಿ ವಾಹನಗಳಾದ ಟಾಟಾ ಸಫಾರಿ, ಆರಿಯಾ ಮತ್ತು ಸುಮೊ ದರಗಳೂ ಏರಿಕೆ ಕಂಡಿವೆ. ಕಂಪನಿಯು ಈ ಸೆಗ್ಮೆಂಟಿನ ಕಾರುಗಳ ದರವನ್ನು 8 ಸಾವಿರ ರು.ನಿಂದ 35 ಸಾವಿರ ರು.ವರೆಗೆ ಏರಿಕೆ ಮಾಡಿದೆ. ಆದರೆ ತಲಾ ಕಾರಿಗೆ ಮಾಡಿರುವ ದರ ಹೆಚ್ಚಳ ಮಾಹಿತಿಯನ್ನು ಕಂಪನಿ ಇನ್ನೂ ಪ್ರಕಟಿಸಿಲ್ಲ. (ಕನ್ನಡ ಡ್ರೈವ್ ಸ್ಪಾರ್ಕ್)

English summary
Tata Motors has hiked the prices of its passenger vehicles by up to Rs. 35,000. The auto major's decision has come in the wake of the hike in excise duty from 10 per cent to 12 per cent in the union budget for 2012-13.
Story first published: Tuesday, March 20, 2012, 10:09 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark