ಟಾಟಾ ನ್ಯಾನೊ ಡೀಸೆಲ್: ಟೆಸ್ಟ್ ಮಾಡುತ್ತಿದ್ದರಂತೆ!

ಕಳೆದ ಕೆಲವು ತಿಂಗಳಿನಿಂದ ಇದೇ ಸುದ್ದಿ. ಟಾಟಾ ಮೋಟರ್ಸ್ ಕಂಪನಿಯು ನ್ಯಾನೊ ಕಾರಿನ ಡೀಸೆಲ್ ಆವೃತ್ತಿಯನ್ನು ಹೊರತರಲಿದೆಯೆಂಬ ವದಂತಿ ಧಾವಾಗ್ನಿಯಂತೆ ಹಬ್ಬುತ್ತಿದೆ. ಈ ವರ್ಷ ಮಾರ್ಚ್ ತಿಂಗಳಲ್ಲಿ ನ್ಯಾನೊ ಡೀಸೆಲ್ ಆಗಮಿಸುವುದಾಗಿ ಹೇಳಲಾಗಿತ್ತು. ಆದರೆ ನ್ಯಾನೊ ಡೀಸೆಲ್ ಆಗಮಿಸುವುದು ವಿಳಂಬವಾಗುತ್ತಿದೆ ಎನ್ನುವುದು ಇತ್ತೀಚಿನ ವರದಿ.

ನಿಜ ಹೇಳಬೇಕೆಂದರೆ ಟಾಟಾ ನ್ಯಾನೊ ಡೀಸೆಲ್ ಆವೃತ್ತಿ ಆಗಮಿಸುವ ಕುರಿತು ಟಾಟಾ ಮೋಟರ್ಸ್ ತುಟಿಪಿಟಕ್ಕೆಂದಿರಲಿಲ್ಲ. ಹೀಗಾಗಿ ಡೀಸೆಲ್ ನ್ಯಾನೊ ಬಂದರೂ ಬರಬಹುದು ಎನ್ನುವ ನಿರೀಕ್ಷೆ ಮಾತ್ರ ಇತ್ತು. ಇಂತಹ ನಿರೀಕ್ಷೆಯನ್ನು ಕಂಪನಿಯ ಮೂಲಗಳು ಇನ್ನಷ್ಟು ಹೆಚ್ಚಿಸಿದ್ದವು.

ಆದರೆ ಇದೀಗ ವರದಿಗಳ ಪ್ರಕಾರ ಟಾಟಾ ಮೋಟರ್ಸ್ ಕಂಪನಿಯು ಡೀಸೆಲ್ ನ್ಯಾನೊ ಪರೀಕ್ಷಾರ್ಥಕ ಸವಾರಿ ಆರಂಭಿಸಿದೆಯಂತೆ. ಈ ಕುರಿತಾದ ಸ್ಪೈ ಶೂಟ್ ಚಿತ್ರಗಳೂ ಅಂತರ್ ಜಾಲದಲ್ಲಿ ಓಡಾಡುತ್ತಿದೆ. ಹೀಗಾಗಿ ಈ ವದಂತಿಯನ್ನು ನಂಬಬಹುದು.

ನೂತನ ಡೀಸೆಲ್ ನ್ಯಾನೊ ಈ ವರ್ಷದ ಅಂತ್ಯದಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಆಗಮಿಸುವ ನಿರೀಕ್ಷೆಯಿದೆ. ಆದರೆ ಎಂಜಿನ್ ಹೊರತುಪಡಿಸಿ ನ್ಯಾನೊ ವಿನ್ಯಾಸದಲ್ಲಿ ಯಾವುದೇ ಮಹತ್ವದ ಬದಲಾವಣೆಯಾಗುವ ನಿರೀಕ್ಷೆಗಳಿಲ್ಲ.

ಕಳೆದ ತಿಂಗಳು ಅಂದರೆ ಮಾರ್ಚ್ 2012ರಲ್ಲಿ ಟಾಟಾ ನ್ಯಾನೊ ಮಾರಾಟ ಗಮನಾರ್ಹವಾಗಿ ಏರಿಕೆ ಕಂಡಿದೆ. ಆದರೂ ಕಂಪನಿಯ ವಾರ್ಷಿಕ ನ್ಯಾನೊ ಉತ್ಪಾದನೆ 1.5 ಲಕ್ಷ ಯುನಿಟ್‌ಗೆ ಹೋಲಿಸಿದರೆ ಈ ಮಾರಾಟ ಪ್ರಗತಿ ಸಾಲದು.

ಟಾಟಾ ನ್ಯಾನೊ ಡೀಸೆಲ್ ಕಾರು 700 ಅಥವಾ 800 ಸಿಸಿ ಟ್ವಿನ್ ಸಿಲಿಂಡರ್ ಟರ್ಬೊಚಾರ್ಜ್‌ಡ್ ಡಿಕೊರ್ ಎಂಜಿನ್ ಹೊಂದಿರುವ ನಿರೀಕ್ಷೆಯಿದೆ. ಈ ಕಾರು ನಂಬಲು ಸಾಧ್ಯವಿಲ್ಲವೆಂಬಂತೆ ಲೀಟರಿಗೆ 40 ಕಿ.ಮೀ. ಮೈಲೇಜ್ ನೀಡಲಿದೆ ಎಂದು ವರದಿಗಳು ಹೇಳಿವೆ. ಡೀಸೆಲ್ ನ್ಯಾನೊ ಕಾರಿನ ದರ ಪೆಟ್ರೋಲ್ ಕಾರಿಗಿಂತ ಶೇಕಡ 30ರಷ್ಟು ಹೆಚ್ಚಿರುವ ನಿರೀಕ್ಷೆಯಿದೆ. (ಕನ್ನಡ ಡ್ರೈವ್‌ಸ್ಪಾರ್ಕ್)

Most Read Articles

Kannada
English summary
The news about a diesel version of the Tata Nano small car had been doing the rounds in the automotive circle for quite a while, but there was no confirmation on this from the carmaker's side. Now, it has been reported that the diesel Nano was caught testing for the first time.
Story first published: Tuesday, April 10, 2012, 9:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X