ಆರು ಮಕ್ಕಳಿಗೆ ಕಾರುಗಳ ಹೆಸರಿಟ್ಟ ಹೆತ್ತವರು

Posted By:

ಮಗುವಿಗೆ ಸೂಕ್ತ ಹೆಸರಿಡಲು ಸಾಕಷ್ಟು ಜನರು ಪರದಾಡುತ್ತಾರೆ. ಆ ಹೆಸರು ಚೆನ್ನಾಗಿದೆ, ಈ ಹೆಸರು ಚೆನ್ನಾಗಿದೆ ಎಂದು ಎ-ಝಡ್ ತನಕದ ಎಲ್ಲಾ ಹೆಸರುಗಳನ್ನು ಜಾಲಾಡುತ್ತಾರೆ. ಹೆಚ್ಚಿನವರು ಹಳೆಯ ಕಾಲದ ಹೆಸರುಗಳನ್ನು ಮಗುವಿಗೆ ಇಡಲು ಇಷ್ಟಪಡುವುದಿಲ್ಲ. ಹೆಸರು ಹೆಚ್ಚು ಮಾಡರ್ನ್ ಆಗಿರಲಿ ಎಂದು ಬಯಸುತ್ತಾರೆ.

ಥೈಲಾಂಡ್ ದೇಶದಲ್ಲಿ ಇತ್ತೀಚೆಗೆ ಮಹಿಳೆಯೊಬ್ಬರು ಆರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಮೂರು ಗಂಡು, ಮೂರು ಹೆಣ್ಣು ಮಕ್ಕಳಿಗೆ ತಾಯಿಯೊಬ್ಬಳು ಒಂದೇ ಬಾರಿ ಜನ್ಮ ನೀಡಿದ್ದು ಥೈಲಾಂಡಿನಲ್ಲಿ ಇದೇ ಮೊದಲು. ಅವರಿಗೆ ಸಾಂಪ್ರದಾಯಿಕ ಥಾಯ್ ಹೆಸರುಗಳನ್ನು ಇಡಲು ಹೆತ್ತವರಿಗೆ ಯಾಕೋ ಇಷ್ಟವಾಗಲಿಲ್ಲ. ಹೀಗಾಗಿ ಮಕ್ಕಳಿಗೆ ತಮ್ಮ ಪ್ರೀತಿಯ ಕಾರು ಕಂಪನಿಗಳ ಹೆಸರನ್ನೇ ಇಟ್ಟುಬಿಟ್ಟಿದ್ದಾರೆ. ಅಂದ್ರೆ ಆಡಿ, ಫಾಟ್ಯೂನ್(ಟೊಯೊಟಾ ಫಾರ್ಚ್ಯುನರ್, ಪೋರ್ಷ್, ಮಿನಿ, ಫೋಕ್ಸ್ ವ್ಯಾಗನ್ ಮತ್ತು ಫಿಯೆಟ್ ಎಂದು ನಾಮಕರಣ ಮಾಡಲಾಗಿದೆ.

ಥೈಲಾಂಡಿನ ಡೊವೊನೊಕ್ ಎಂಬಾಕೆಗೆ 29 ವರ್ಷ. ಗರ್ಭದಾರಣೆಗೆ ಸಂಬಂಧಿಸಿದ ಕೆಲವು ಸಮಸ್ಯೆಗಳಿದ್ದರಿಂದ ದೀರ್ಘಕಾಲದಿಂದ ಆಕೆಗೆ ಮಕ್ಕಲಾಗಿರಲಿಲ್ಲ. ಇದರಿಂದ ಸಾಕಷ್ಟು ನೊಂದಿದ್ದಳು. ಕೆಲವು ತಿಂಗಳ ಹಿಂದೆ ಆಕೆ ಗರ್ಭಿಣಿಯಾದಳು. ಮೇ ತಿಂಗಳ ಆರಂಭದಲ್ಲಿ ಬೂಮರ್ನಗಾರ್ಡ್ ಅಂತಾರಾಷ್ಟ್ರೀಯ ಆಸ್ಪತ್ರೆಯಲ್ಲಿ ಆಕೆ ಒಟ್ಟು ಆರು ಕಂದಮ್ಮಗಳಿಗೆ ಜನನ ನೀಡಿದ್ದಳು.

ಈ ಆರು ಮಕ್ಕಳಿಗೆ ಆರು ಕಾರು ಕಂಪನಿಗಳ ಹೆಸರನ್ನೇ ಇಡಲಾಗಿದೆ. ಇನ್ಮುಂದೆ ಈ ಮಕ್ಕಳ ಹೆತ್ತವರು "ಆಡಿ ಆಟ ಆಡಿದ್ದು ಸಾಕು ಇಲ್ಲಿ ಬಾ, ಫಿಯೆಟ್ ಹೋಗಿ ಹಾಲು ತಗೊಂಬಾ, ಫೋರ್ಷ್ ಎಲ್ಲಿ ಹೋದ್ಲು, ಮಿನಿ ಸ್ಕೂಲ್ ಬಸ್ ಬಂತು ನೋಡು" ಎಂದೆಲ್ಲ ಕರೆಯಬಹುದು.

ಈ ಮಕ್ಕಳು ಹೊಡೆದಾಡಿಕೊಂಡರೆ "ಆಕ್ಸಿಡೆಂಟ್ ಮಾಡ್ಕೊಬೇಡಿ" ಎನ್ನಬಹುದೇನೋ..!

English summary
According Bangkok Post report, a Thai parents has named their children with their favourite car brands Audi, Fortune (Toyota Fortuner), Porsche, Mini, Volkswagen and Fiat. Duangchanok Wangwitthayaskul, 29, delivered six children this May. The sextuplets three girls and three boys are the first born in Thailan

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark