ಹೊಸ ಇನ್ನೋವಾ ಏರೊ ಪರಿಚಯಿಸಿದ ಟೊಯೊಟಾ

Posted By:

ಬೆಂಗಳೂರು, ಸೆ 27: ಟೊಯೊಟಾ ಕಿರ್ಲೊಸ್ಕರ್ ಮೋಟರ್(ಟಿಕೆಎಂ) ಆಲ್ ನ್ಯೂ ಇನ್ನೋವಾ ಏರೊ(ಲಿಮಿಟೆಡ್ ಅಡಿಷನ್) ಕಾರನ್ನು ರಾಜ್ಯಕ್ಕೆ ಪರಿಚಯಿಸಿದೆ. ಇದರ ಎಕ್ಸ್ ಶೋರೂಂ ದರ 12,25,677 ರು.ನಿಂದ 12,30,207 ರು.ವರೆಗಿದೆ. ಸೂಪರ್ ವೈಟ್ ಮತ್ತು ಸಿಲ್ವರ್ ಮೈಕಾ ಮೆಟಾಲಿಕ್ ಬಣ್ಣಗಳಲ್ಲಿ ನೂತನ ಏರೊ ಲಭ್ಯ.

ಇದು ಲಿಮೆಟೆಡ್ ಅಡಿಷನ್ ಆಗಿರುವುದರಿಂದ ಈ ವರ್ಷ ಅಂತ್ಯದವರೆಗೆ ಕೇವಲ 1,200 ಇನ್ನೋವಾ ಏರೋ ಲಭ್ಯವಿರಲಿದೆ. ಇದು ಹಳೆಯ ಜಿಎಕ್ಸ್ ಗ್ರಾಡೆ ಸುಧಾರಿತ ಆವೃತ್ತಿಯಾಗಿದ್ದು, ಏಳು ಮತ್ತು ಎಂಟು ಸೀಟುಗಳ ಆಯ್ಕೆಯಲ್ಲಿ ಖರೀದಿಸಬಹುದಾಗಿದೆ.

ಹೊಸ ಫೀಚರುಗಳೇನು?

* ಕಾರಿನ ಮುಂಭಾಗದ ಮತ್ತು ಹಿಂಭಾಗದಲ್ಲಿ ಡ್ಯೂಯಲ್ ಟೋನ್ ಬಂಪರ್ ಸ್ಪ್ಯಾಲರ್ (ಇದು ಸ್ಪೋರ್ಟಿ ಲುಕ್ ಹೆಚ್ಚಿಸಿದೆ)

* ಸೈಡ್ ಸ್ಕಿರ್ಟ್(ಕಾರಿಗೆ ಎಕ್ಸ್ ಕ್ಲೂಸಿವ್ ಲುಕ್ ನೀಡಿದೆ)

* ರೂಫ್ ಸ್ಪ್ಯಾಲರ್

* ಏರೊ ಲಾಂಛನ

ಟೊಯೊಟಾ ಇನ್ನೋವಾ ಸಂಪೂರ್ಣ ವಿಮರ್ಶೆ ಓದಿರಿ.

English summary
Toyota Kirloskar Motor introduced all new Innova Aero (Limited Edition). Only 1200 exclusive units of the Innova Aero will be on sale till Dec 2012. Price ranges from Rs 12,25,677/- and Rs 12,30,207/- ex-showroom Delhi.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark