ಒಲಿಂಪಿಕ್ಸ್: ಹೆಣ್ಣು, ಕಾರು, ಸಂಗೀತವೇ ಬೋಲ್ಟ್ ಉದ್ದೀಪನ

ಲಂಡನ್ ಒಲಿಂಪಿಕ್ಸ್‌ನಲ್ಲಿ ಪುರುಷರ ನೂರು ಮೀಟರ್ ಓಟದ ಸ್ಪರ್ಧೆಯಲ್ಲಿ ಜಮೈಕಾದ ಉಸೇನ್ ಬೋಲ್ಟ್ ಚಿನ್ನದ ಪದಕ ಗಳಿಸಿದ್ದಾರೆ. ಭೂಮಂಡಲದ ಅತ್ಯಂತ ವೇಗದ ಮಾನವ ಖ್ಯಾತಿಯನ್ನು ಪಡೆದ ಬೋಲ್ಟ್ ಓಟಕ್ಕೆ ಮುನ್ನ ಮಾತನಾಡಿದ್ದು ಹೆಣ್ಣು, ಸಂಗೀತ ಮತ್ತು ವೇಗದ ಕಾರಿನ ಬಗ್ಗೆ. ಹೀಗಾಗಿ ಬೋಲ್ಟಿಗೆ ಈ ಮೂರು ವಿಷಯಗಳೇ ಓಟದಲ್ಲಿ ಉದ್ದೀಪನ!

"ಆಟದ ಬಗ್ಗೆ ಆಮೇಲೆ ಮಾತನಾಡೋಣ. ನಾವು ಹುಡುಗಿಯರು, ಕಾರುಗಳು ಮತ್ತು ಸಂಗೀತದ ಬಗ್ಗೆ ಮಾತನಾಡೋಣ" ಎಂದು ಒಲಿಂಪಿಕ್ಸ್ ಓಟಕ್ಕೆ ಮುನ್ನ ಮಾಧ್ಯಮ ಮಿತ್ರರೊಂದಿಗೆ 25ರ ಹರೆಯದ ಬೋಲ್ಟ್ ಉಭಯಕುಶಲೋಪರಿಯೆಂಬಂತೆ ಮಾತನಾಡಿದ್ದನಂತೆ!

ಈ ಮೂರು ಅಂಶಗಳು ಉಸೇನ್ ಬೋಲ್ಟ್ ಜೀವನ ಶೈಲಿಯೂ ಹೌದು. ಅದರಲ್ಲಿ ಆತನ ಹೆಣ್ಣು ಮತ್ತು ಸಂಗೀತದ ಆಸಕ್ತಿ ಕುರಿತು ಮಾತನಾಡುವುದು ಕನ್ನಡ ಡ್ರೈವ್ ಸ್ಪಾರ್ಕ್ ವ್ಯಾಪ್ತಿ ಪ್ರದೇಶದಿಂದ ಹೊರಗಿದೆ. ಅದಕ್ಕಾಗಿ ಬೋಲ್ಡ್ ಸ್ಕೈ ಮತ್ತು ಗಿಜ್ ಬಾಟ್ ತಾಣಗಳಿವೆ. ನಾವೀಗ ಆತನ ಕಾರ್ ಕ್ರೇಝ್ ಬಗ್ಗೆ ನೋಡೋಣ.

ಕಳೆದ ತಿಂಗಳು ಪಾರ್ಟಿ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಉಸೇನ್ ಬೋಲ್ಟ್ ಡ್ರೈವಿಂಗ್ ಮಾಡುತ್ತಿದ್ದ ಬಿಎಂಡಬ್ಲ್ಯು ಕಾರೊಂದು ಅಪಘಾತವಾಗಿತ್ತು. ಅಪಘಾತದಲ್ಲಿ ಪುಣ್ಯಕ್ಕೆ ಅವರಿಗೆ ಏನಾಗಿರಲಿಲ್ಲ. ಇದು ಬೋಲ್ಟ್ ಕಳೆದ ಮೂರು ವರ್ಷಗಳಲ್ಲಿ ಮಾಡಿದ ಎರಡನೇ ಅಪಘಾತ.

ಬೋಲ್ಟ್ ಬಳಿ ಬಿಎಂಡಬ್ಲ್ಯು ಮಾತ್ರವಲ್ಲದೇ ನಿಸ್ಸಾನ್ ಜಿಟಿಆರ್ ಕಾರು ಕೂಡ ಇದೆ. ಫೆರಾರಿ ಕಾರುಗಳು ಕೂಡ ಬೋಲ್ಟಿಗೆ ಅಚ್ಚುಮೆಚ್ಚು. ಫಾರ್ಮುಲಾ ಒನ್ ರೇಸ್ ಅವರಿಗೆ ಪಂಚಪ್ರಾಣ. ಉಸೇನ್ ಬೋಲ್ಟ್ ಗ್ಯಾರೇಜಿನಲ್ಲಿ ಸಾಕಷ್ಟು ವೇಗದ ಕಾರುಗಳಿವೆಯಂತೆ.

ಬಹುಶಃ ಓಟದಲ್ಲಿ ವೇಗ ಹೆಚ್ಚಿಸಿಕೊಳ್ಳಲು ಉಸೇನ್ ಬೋಲ್ಟಿಗೆ ವೇಗದ ಕಾರುಗಳೇ ಪ್ರೇರಣೆಯಾಗಿದ್ದಿರಬಹುದು!

Most Read Articles

Kannada
English summary
Ussain Bolt who has won the gold at the 2012 Olympics for thr 100m sprint has stated that the things he loves most are fast cars, music and women. Read Ussain Bolt Car Craze
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X