ಎಚ್ಚರ ತಪ್ಪಿದರೆ ಸ್ಟಿಯರಿಂಗ್ ವೀಲ್ ವೈಬ್ರೆಷನ್

ಸರಿಯಾದ ದಿಕ್ಕಿನಲ್ಲಿ ಕಾರು ಚಲಾಯಿಸುವಂತೆ ಕಾರಿನ ಸ್ಟಿಯರಿಂಗ್ ವೀಲ್ ವೈಬ್ರೆಷನ್ ಆಗುವ ಮೂಲಕ ಚಾಲಕನನ್ನು ಎಚ್ಚರಿಸಿದರೆ ಹೇಗಿರುತ್ತದೆ? ಕಾರ್ನೆಜ್ ಮೆಲೊನ್ ಯುನಿವರ್ಸಿಟಿಯ ಸಂಶೋಧಕರು ಸುರಕ್ಷಿತ ಪ್ರಯಾಣಕ್ಕೆ ನೆರವಾಗುವ ಇಂತಹ ವಿನೂತನ ಜಿಪಿಎಸ್ ಸ್ಟಿಯರಿಂಗ್ ವೀಲನ್ನು ಅಭಿವೃದ್ಧಿಪಡಿಸಿದ್ದಾರೆ.

ಕಾರಿನ ನ್ಯಾವಿಗೇಷನ್ ವ್ಯವಸ್ಥೆಗೆ ತಕ್ಕಂತೆ ಕಾರ್ಯನಿರ್ವಹಿಸುವ ಈ ಅಪ್ಲಿಕೇಷನ್ ಚಾಲಕ ಎಚ್ಚರದಿಂದ ಡ್ರೈವಿಂಗ್ ಮಾಡಲು ಪೂರಕ. ಆಡಿಯೋ, ವೀಕ್ಷಣೆ ಮತ್ತು ವೈಬ್ರೆಷನ್ ಮೂಲಕ ಈ ಆಪ್ ದಾರಿಯ ಕುರಿತು ಮಾಹಿತಿ ನೀಡುತ್ತದೆ.

ಉದಾಹರಣೆಗೆ ಚಾಲಕ ಬಲಭಾಗಕ್ಕೆ ಚಲಿಸಬೇಕಾದಲ್ಲಿ ಸ್ಟಿಯರಿಂಗ್ ವೀಲ್ ಬಲಕ್ಕೆ ವೈಬ್ರೆಟ್ ಆಗಿ ಚಾಲಕನನ್ನು ಎಚ್ಚರಿಸುತ್ತದೆ. ಇದು ಸಂಚಾರಿ ನಿಯಮವನ್ನು ಪಾಲಿಸಲು ಕೂಡ ನೆರವಾಗಲಿದೆ ಎಂದು ಕಾರ್ನೆಜ್ ಮೆಲೊನ್ ಹ್ಯೂಮನ್ ಕಂಪ್ಯೂಟರ್ ಇಂಟಾರಕ್ಷನ್ ಇನ್ಸುಟ್ಯೂಟ್ ವಿಜ್ಞಾನಿ ಸೆಜುನ್ ಕಿಮ್ ಹೇಳುತ್ತಾರೆ.

ಪರದೆಯಲ್ಲಿ ಮೂಡುವ ನ್ಯಾವಿಗೇಷನ್ ಸಿಸ್ಟಮ್ ನೋಡಲು ಹೆಚ್ಚಿನವರು ಇಷ್ಟಪಡುವುದಿಲ್ಲ. ನೂತನ ವೈಬ್ರೆಷನ್ ಸಿಸ್ಟಮ್ ಸ್ಟಿಯರಿಂಗ್ ವೀಲನ್ನು ವೈಬ್ರೆಟ್ ಮಾಡಿ ಚಾಲಕರಿಗೆ ಮಾಹಿತಿ ನೀಡುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Most Read Articles

Kannada
English summary
Carnegie Mellon University Researchers developed new vibrating steering wheel to convey directions from a car's navigation system.
Story first published: Monday, April 30, 2012, 10:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X