ನೂರು ಉತ್ಪಾದನಾ ಘಟಕ ನಿರ್ಮಿಸುವತ್ತ ಫೋಕ್ಸ್ ವ್ಯಾಗನ್

Posted By:
ಜರ್ಮನಿಯ ಐಷಾರಾಮಿ ಕಾರು ಕಂಪನಿ ಫೋಕ್ಸ್ ವ್ಯಾಗನ್ ಸಾಕಷ್ಟು ಗುರಿಗಳನ್ನು, ಕಾರ್ಯತಂತ್ರಗಳನ್ನು ಹೊಂದಿದೆ. ಇದೀಗ ಮಾರಾಟದಲ್ಲಿ ವಿಶ್ವದ ಎರಡನೇ ಕಾರುಕಂಪನಿಯಾಗಿರುವ ಫೋಕ್ಸ್ ವ್ಯಾಗನ್ ಭವಿಷ್ಯದ ಬೃಹತ್ ಕನಸುಗಳನ್ನು ಬಿಚ್ಚಿಟ್ಟಿದೆ. ಕಂಪನಿಗೆ ಜಗತ್ತಿನ ನಂಬರ್ ಒನ್ ಕಂಪನಿಯಾಗಬೇಕೆಂಬ ಬಲವಾದ ಇರಾದೆಯಿದೆ. ಇದಕ್ಕಾಗಿ ಕಂಪನಿಯು ಜಾಗತಿಕವಾಗಿ ಒಟ್ಟು ನೂರು ಘಟಕಗಳನ್ನು ನಿರ್ಮಿಸಲು ಯೋಜಿಸಿದೆ.

ಫೋಕ್ಸ್ ವ್ಯಾಗನ್, ಬೆಂಟ್ಲಿ, ಆಡಿ, ಲಂಬೊರ್ಗಿನಿ, ಸ್ಕೋಡಾ, ಸೀಟ್, ಮ್ಯಾನ್ ಟ್ರಕ್ಸ್ ಇತ್ಯಾದಿ ಬ್ರಾಂಡುಗಳನ್ನು ಹೊಂದಿರುವ ಫೋಕ್ಸ್ ವ್ಯಾಗನ್ ಗ್ರೂಪ್ ಬೃಹತ್ ಆಟೋ ಬ್ರಾಂಡ್ ಆಗಿದೆ. ಜರ್ಮನಿಯಲ್ಲಿ ಇದರ ಮಾರುಕಟ್ಟೆ ಪಾಲು ಅತ್ಯಧಿಕವಾಗಿದೆ. ಚೀನಾ, ರಷ್ಯಾ ಮತ್ತು ಭಾರತದ ವಾಹನ ಮಾರುಕಟ್ಟೆಯನ್ನೂ ಸಾಕಷ್ಟು ವ್ಯಾಪಿಸಿಕೊಂಡಿದೆ.

ಇದೀಗ ಕಂಪನಿಯು ಉತ್ತರ ಅಮೆರಿಕದಲ್ಲಿನ ಮಾರಾಟ ಹೆಚ್ಚಿಸಲು ಯೋಜಿಸಿದೆ. ಈಗಾಗಲೇ ಕಂಪನಿಯು ಆಡಿಗಾಗಿ ಅಮೆರಿಕದಲ್ಲಿ ಘಟಕ ನಿರ್ಮಿಸಿದೆ. ಮಲೇಷ್ಯಾದಲ್ಲೂ ಪ್ರೊಟೊನ್ ಕಾರಿಗಾಗಿ ಘಟಕ ನಿರ್ಮಿಸಲು ಯೋಜಿಸಿದೆ. ಈಗಾಗಲೇ ಕಂಪನಿಯು ಜಾಗತಿಕವಾಗಿ 39 ಘಟಕ ಹೊಂದಿದೆ. ಇದನ್ನು ಶೀಘ್ರದಲ್ಲಿ 100ಕ್ಕೆ ಹೆಚ್ಚಿಸುವ ಗುರಿಯನ್ನು ಹೊಂದಿದೆ. (ಕನ್ನಡ ಡ್ರೈವ್ ಸ್ಪಾರ್ಕ್)

English summary
The German juggernaut is moving on to bigger goals. Volkswagen, the German carmaker and currently the second largest carmaker in terms of sales has bigger plans for the future. While some thought its aim of becoming the world's No 1 carmaker was big enough, the company has though otherwise. It is now aiming to have 100 manufacturing plants across the globe.
Story first published: Saturday, February 18, 2012, 11:48 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark