ಲಗ್ಷುರಿ ಕಾರುಗಳಿಗೂ ಬಂತು ಶುಕ್ರ ದೆಸೆ

Posted By:

ವರ್ಷಾಂತ್ಯದಲ್ಲಿ ಹೆಚ್ಚೆಚ್ಚು ಗ್ರಾಹಕರನ್ನು ತನ್ನತ್ತ ಸೆಳೆಯಲು ಯತ್ನಿಸುತ್ತಿರುವ ವಾಹನ ತಯಾರಕ ಕಂಪನಿಗಳು ಭಾರಿ ರಿಯಾಯತಿ ದರ ಘೋಷಿಸುತ್ತಿರುವುದು ಸಾಮಾನ್ಯವಾಗಿ ಕಂಡುಬರುತ್ತಿರುವ ದೃಶ್ಯ. ಆದರೆ ಇದೀಗ ಲಗ್ಷುರಿ ಕಾರು ಸೆಗ್ಮೆಂಟ್‌ನಲ್ಲೂ ಶುಕ್ರ ದೆಸೆ ಕಾಣಿಸಿಕೊಂಡಿದೆ.

ಹಾಗಾಗಿ ಕಾರು ಖರೀದಿ ಗ್ರಾಹಕರಿದು ಸುಗ್ಗಿಯ ಕಾಲ. ಹೊಸ ವರ್ಷದ ಸಂಭ್ರಮದಲ್ಲಿರುವ ಹಾಗೂ ಕ್ರಿಸ್ಮಸ್ ಆಚರಣೆಯಲ್ಲಿ ತೊಡಗಿರುವವರಿಗೆ ಕಾರು ಕಂಪನಿಗಳು ಭಾರಿ ಕೊಡುಗೆಗಳನ್ನು ಮುಂದಿಟ್ಟಿವೆ.

ಇದೀಗ ಲಗ್ಷುರಿ ಕಾರು ಸೆಗ್ಮೆಂಟ್‌ನಲ್ಲಿ ಜರ್ಮನಿಯ ಫೋಕ್ಸ್‌ವ್ಯಾಗನ್ ತನ್ನ ಜನಪ್ರಿಯ ಪಸ್ಸಾಟ್ ಪ್ರೀಮಿಯಂ ಸೆಡಾನ್ ಕಾರಿಗಳಿಗೆ ಭಾರಿ ಡಿಸ್ಕೌಂಟ್ ಘೋಷಿಸಿದೆ. ಬರೋಬ್ಬರಿ 2.3 ಲಕ್ಷ ರುಪಾಯಿಗಳಷ್ಟು ರಿಯಾಯಿತಿ ದರವನ್ನು ಫೋಕ್ಸ್‌ವ್ಯಾಗನ್ ತನ್ನ ಪಸ್ಸಾಟ್ ಕಾರುಗಳಿಗೆ ಘೋಷಿಸಿದೆ.

ಹಾಗೊಂದು ವೇಳೆ ನಿಮಗೆ ರಿಯಾಯಿತಿ ದರ ಪಡೆಯಲು ಇಷ್ಟವಿಲ್ಲದಿದ್ದಲ್ಲಿ ಶೂನ್ಯ ಬಡ್ಡಿದರದ ಹಣಕಾಸು ನೆರವನ್ನು ಕೂಡಾ ಕಂಪನಿ ಒದಗಿಸಲಿದೆ. ಇದರಿಂದ ಇಸ್ಟಾಲ್‌ಮೆಂಟ್‌ನಲ್ಲಿ ಕಾರು ಖರೀದಿಸಿದವರು ಪ್ರತಿ ತಿಂಗಳು ಬರಬಹುದಾದ ಹೆಚ್ಚುವರಿ ಬಡ್ಡಿ ದರವನ್ನು ತಪ್ಪಿಸಬಹುದು.

ಹಾಗಿದ್ದರೂ ಕೇವಲ ಲಿಮಿಟೆಡ್ ಸಮಯಕ್ಕೆ ಮಾತ್ರ ಇದು ಲಭ್ಯವಿದ್ದು, ಡಿಸೆಂಬರ್ 15ರ ತನಗೆ ಮಾತ್ರ ಕೊಡುಗೆ ಮುಂದುವರಿಯಲಿದೆ.

ಲಗ್ಷುರಿ ಕಾರುಗಳಿಗೂ ಬಂತು ಶುಕ್ರ ದೆಸೆ

ಫೋಕ್ಸ್‌ವ್ಯಾಗನ್ ತನ್ನ ಪಸ್ಸಾಟ್ ಪ್ರೀಮಿಯಂ ಸೆಡಾನ್ ಕಾರುಗಳಿಗೆ 2.3 ಲಕ್ಷ ರುಪಾಯಿಗಳ ರಿಯಾಯಿತಿ ದರವನ್ನು ಘೋಷಿಸಿದೆ.

ಲಗ್ಷುರಿ ಕಾರುಗಳಿಗೂ ಬಂತು ಶುಕ್ರ ದೆಸೆ

ಡಿಸೆಂಬರ್ 15ರ ವರೆಗೆ ಮಾತ್ರ ಈ ಆಫರ್ ಕಂಡುಬರಲಿದ್ದು, ಹಾಗಾಗಿ ಆದಷ್ಟು ಬೇಗನೇ ತಮ್ಮದಾಗಿಸಿಕೊಳ್ಳಿ.

ಲಗ್ಷುರಿ ಕಾರುಗಳಿಗೂ ಬಂತು ಶುಕ್ರ ದೆಸೆ

ಫೋಕ್ಸ್‌ವ್ಯಾಗನ್ ಪಸ್ಸಾಟ್ ಡೀಸೆಲ್ ವೆರಿಯಂಟ್ ಕಾರುಗಳಲ್ಲಿ ಮಾತ್ರ ಲಭ್ಯವಿದೆ. ಪೆಟ್ರೋಲ್ ಆವೃತ್ತಿಗಳಿಗೆ ಬೇಡಿಕೆ ಕಡಿಮೆಯಾಗಿದ್ದರಿಂದ ಜರ್ಮನಿಯ ಈ ಐಷಾರಾಮಿ ಕಾರು ತಯಾರಕ ಕಂಪನಿಯು ಡೀಸೆಲ್ ವೆರಿಯಂಟ್ ಮಾತ್ರ ರಸ್ತೆಗಿಳಿಸಿದ್ದವು.

ಲಗ್ಷುರಿ ಕಾರುಗಳಿಗೂ ಬಂತು ಶುಕ್ರ ದೆಸೆ

ಫೋಕ್ಸ್‌ವ್ಯಾಗನ್ ಪಸ್ಸಾಟ್ ಮೂರು ವೆರಿಯಂಟ್‌ಗಳಲ್ಲಿ ಲಭ್ಯವಿದೆ.

ಟ್ರೆಂಡ್‌ಲೈನ್ ಆವತ್ತಿಗೆ 20.8 ಲಕ್ಷ ರು.

ಕಂಫಾರ್ಟ್‌ಲೈನ್ ಆವೃತ್ತಿಗೆ 23.8 ಲಕ್ಷ ರು.

ಹೈಲೈನ್ ಆವೃತ್ತಿಗೆ 25.65 ಲಕ್ಷ ರು.

ಲಗ್ಷುರಿ ಕಾರುಗಳಿಗೂ ಬಂತು ಶುಕ್ರ ದೆಸೆ

ಸ್ಕೋಡಾ ಸೂಪರ್ಬ್, ಟೊಯೊಟಾ ಕರೊಲ್ಲಾ, ಹೊಂಡಾ ಅಕಾರ್ಡ್ ಹಾಗೂ ನಿಸ್ಸನಾ ಟೀನಾಗಳಿಗೆ ಫೋಕ್ಸ್‌ವ್ಯಾಗನ್ ಪಸ್ಸಾಟ್ ಪ್ರಬಲ ಪ್ರತಿಸ್ಪರ್ಧಿಯೆನಿಸಿಕೊಂಡಿದೆ.

English summary
The premium sedan market is hotting up for sure, considering the hit new discounts coming up from carmakers. The latest to announce one such discount is Volkswagen. The German carmaker has offered a massive INR2.3 lakh discount on its Passat premium sedan
Please Wait while comments are loading...

Latest Photos