ಫೋಕ್ಸ್‌ವ್ಯಾಗನ್ ಹೊಸ ಟೋರೆಗ್ ಬರೋದು ಖಚಿತ

Posted By: Super

ನೂತನ ಟೋರೆಗ್ ಎಸ್‌ಯುವಿ ಪರಿಚಯಿಸುವುದನ್ನು ಫೋಕ್ಸ್‌ವ್ಯಾಗನ್ ಇಂಡಿಯಾ ಖಚಿತಪಡಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಕಂಪನಿಯು ತನ್ನ ವೆಬ್ ತಾಣದಲ್ಲಿ ಪ್ರಕಟಿಸಿದೆ.

ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ಟೋರೆಗ್ ಕಾರು ಜನಪ್ರಿಯವಾಗಿದೆ. ಇಂತಹ ಜನಪ್ರಿಯ ಮಾದರಿಯನ್ನು ದೇಶದ ರಸ್ತೆಗೆ ಇಷ್ಟು ತಡವಾಗಿ ಪರಿಚಯಿಸಿದ್ದು ಆಶ್ಚರ್ಯಕರ. ಬನ್ನಿ ಟೋರೆಗ್ ಕಾರಿನ ಮಾಹಿತಿ ತಿಳಿದುಕೊಳ್ಳೋಣ.

ಹಳೆಯ ಟೋರೆಗ್ ಆವೃತ್ತಿಗಿಂತ ನೂತನ ತೂರಗ್ ಸುಮಾರು 40 ಮಿ.ಮೀ. ಉದ್ದವಾಗಿದೆ. ಇದರಿಂದ ಇಂಟಿರಿಯರ್ ಸ್ಥಳಾವಕಾಶ ಹೆಚ್ಚಾಗಿದೆ. ಇದರೊಂದಿಗೆ ಟೋರೆಗ್ ಕಾರಿನ ತೂಕವೂ 200 ಕೆ.ಜಿ.ಯಷ್ಟು ಕಡಿಮೆಯಾಗಿದೆ. ಇದರಿಂದ ಕಾರಿನ ಮೈಲೇಜ್ ಮತ್ತು ದಕ್ಷತೆ ಹೆಚ್ಚಾಗಿರಲಿದೆ.

ದೇಶದಲ್ಲಿ ನೂತನ ಟೋರೆಗ್ ಕಾರಿನ ದರ ಸುಮಾರು 60 ಲಕ್ಷ ರು.ಗಿಂತ ಕಡಿಮೆ ಇರುವ ನಿರೀಕ್ಷೆಯಿದೆ. ಬೃಹತ್ ಗಾತ್ರವಿದ್ದರೂ, ನೂತನ ಟೋರೆಗ್ ಕೇವಲ 5 ಸೀಟುಗಳನ್ನು ಹೊಂದಿರಲಿದೆ. ಇದಕ್ಕೆ ಮರ್ಸಿಡಿಸ್ ಬೆಂಝ್ ಎಂಎಲ್ ಕ್ಲಾಸ್ ಮತ್ತು ಬಿಎಂಡಬ್ಲ್ಯು ಎಕ್ಸ್5 ಕಾರುಗಳು ಟೋರೆಗ್ಗೆ ಪ್ರಮುಖ ಪ್ರತಿಸ್ಪರ್ಧಿಗಳು.

ಟೋರೆಗ್ ಎಂಜಿನ್ ಮತ್ತು ಪವರ್

ಟೋರೆಗ್ ಎಂಜಿನ್ ಮತ್ತು ಪವರ್

ನೂತನ ಟೋರೆಗ್ ಕಾರು 3.0 ಲೀಟರಿನ 6 ಸಿಲಿಂಡರ್ ಎಂಜಿನ್ ಹೊಂದಿದೆ. ಇದು ಗರಿಷ್ಠ 236 ಹಾರ್ಸ್ ಪವರ್ ಮತ್ತು 550ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಇದು 8 ಸ್ಪೀಡಿನ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿದೆ.

ಟೋರೆಗ್ ಕಾರಿನ ಫೀಚರುಗಳು

ಟೋರೆಗ್ ಕಾರಿನ ಫೀಚರುಗಳು

ಇದರಲ್ಲಿ ಹಲವು ವಿಶೇಷ ಫೀಚರುಗಳಿರಲಿವೆ. ಡ್ಯಾಷ್ ಬೋರ್ಡಿನಲ್ಲಿ ರಿಯರ್ ವ್ಯೂ ಕ್ಯಾಮರಾ, ಸ್ಪರ್ಷ ಸಂವೇದಿ ಮಲ್ಟಿ ಇನ್ಫೋಟೈನ್ ಮೆಂಟ್ ಸಿಸ್ಟಮ್, ಬ್ಲೂಟೂಥ್, ಹೊಂದಾಣಿಕೆ ಮಾಡಬಹುದಾದ ಪವರ್ ಸೀಟುಗಳು, ಕೀಲೆಸ್ ಎಂಟ್ರಿ, ಡ್ಯೂಯಲ್ ಝೋನ್ ಆಟೋಮ್ಯಾಟಿಕ್ ಕಂಟ್ರೋಲ್, ಬೈ ಕ್ಷೆನನ್ ಹೆಡ್ ಲ್ಯಾಂಪ್ ಇತ್ಯಾದಿಗಳಿರಲಿವೆ.

ಸುರಕ್ಷತೆಯ ಫೀಚರುಗಳು

ಸುರಕ್ಷತೆಯ ಫೀಚರುಗಳು

ನೂತನ ಟೋರೆಗ್ ಕಾರಿನಲ್ಲಿ ಪ್ರಯಾಣಿಕ ಮತ್ತು ಚಾಲಕರಿಗೆ ಏರ್ ಬ್ಯಾಗುಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗಾಮ್, ಎಬಿಎಸ್ ಇತ್ಯಾದಿ ಸುರಕ್ಷತೆಯ ಫೀಚರುಗಳಿರಲಿವೆ.

ಎದುರಾಳಿ ಯಾರು?

ಎದುರಾಳಿ ಯಾರು?

ಬೃಹತ್ ಗಾತ್ರವಿದ್ದರೂ, ನೂತನ ಟೋರೆಗ್ ಕೇವಲ 5 ಸೀಟುಗಳನ್ನು ಹೊಂದಿರಲಿದೆ. ಇದಕ್ಕೆ ಮರ್ಸಿಡಿಸ್ ಬೆಂಝ್ ಎಂಎಲ್ ಕ್ಲಾಸ್ ಮತ್ತು ಬಿಎಂಡಬ್ಲ್ಯು ಎಕ್ಸ್5 ಕಾರುಗಳು ಪ್ರಮುಖ ಪ್ರತಿಸ್ಪರ್ಧಿಗಳು.

ಆಡಿ ಕ್ಯೂ7 ಪ್ಲಾಟ್ ಫಾರ್ಮ್

ಆಡಿ ಕ್ಯೂ7 ಪ್ಲಾಟ್ ಫಾರ್ಮ್

ಫೋಕ್ಸ್ ವ್ಯಾಗನ್ ಕಾರಿನ ಪ್ಲಾಟ್ ಫಾರ್ಮಿಗೂ ಆಡಿ ಕ್ಯೂ7 ಮತ್ತು ಪೊರ್ಷ್ ಕಯಾನೆ ಫ್ಲಾಟ್ ಫಾರ್ಮಿಗೂ ಯಾವುದೇ ವ್ಯತ್ಯಾಸವಿಲ್ಲ.

English summary
Volkswagen India has finally confirmed it will be launching the Touareg in India by updating its website with details of the latest version. The Touareg has been a raging success in several countries and it was a little surprising that Volkswagen India delayed the launch of the new Touareg.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark