ಬೆಂಗಳೂರಿಗೆ ವೊಲ್ವೊ ಹೈಬ್ರಿಡ್ ಬಸ್: ಏನಿದು ಬಾಸ್?

ಬೆಂಗಳೂರು ರಸ್ತೆಗೆ ಹೈಬ್ರಿಡ್ ಬಸ್ ಪರಿಚಯಿಸುವ ಉದ್ದೇಶ ಇಂಧನ ವೆಚ್ಚ ತಗ್ಗಿಸುವುದಾಗಿದೆ. ಇದು ಪರಿಸರ ಸ್ನೇಹಿ ವಾಹನವಾಗಿದ್ದು ನಗರದ ವಾಯುಮಾಲಿನ್ಯವೂ ಕಡಿಮೆಯಾಗಲಿದೆ. "ವೊಲ್ವೊ 7700 ಹೈಬ್ರಿಡ್ ಬಸ್ ಡೀಸೆಲ್ ಎಂಜಿನ್ ಮತ್ತು ಎಲೆಕ್ಟ್ರಿಕ್ ಮೋಟರ್ ಹೊಂದಿದೆ. ಈಗಾಗಲೇ ಕಂಪನಿಯ ಹೈಬ್ರಿಡ್ ವಾಣಿಜ್ಯ ವಾಹನಗಳು ವಿಶ್ವದ 20 ನಗರ ಪ್ರವೇಶಿಸಿವೆ. ಮೇ 2010ರಲ್ಲಿ ಈ ಹೈಬ್ರಿಡ್ ಬಸ್ಸನ್ನು ಕಂಪನಿಯು ಯುರೋಪ್ ಗೆ ಪರಿಚಯಿಸಿತ್ತು.
ನೂತನ ಹೈಬ್ರಿಡ್ ಬಸ್ ನಲ್ಲಿರುವ ಬ್ಯಾಟರಿಯು ರಿ ಜನರೇಟಿವ್ ಬ್ರೇಕಿಂಗ್ ಮೂಲಕ ಚಾರ್ಜ್ ಆಗುತ್ತದೆ. Volvo 7700 Hybrid bus ಮುಂದಿನ ಕೆಲವೇ ವಾರದಲ್ಲಿ ಬೆಂಗಳೂರು ರಸ್ತೆಯಲ್ಲಿ ಟ್ರಯಲ್ ಆಗಿ ಸಂಚರಿಸಲಿದೆ. ಈ ಬಸ್ ಶೇಕಡ 35ರಷ್ಟು ಇಂಧನ ಉಳಿತಾಯ ಮಾಡಲಿದೆಯಂತೆ.
ಹೈಬ್ರಿಡ್ ಬಸ್ 5 ಲೀಟರಿನ ಎಂಡಿ5, 4 ಸಿಲಿಂಡರ್ ಟರ್ಬೊಚಾರ್ಜಡ್ ಡೀಸೆಲ್ ಎಂಜಿನ್ ಹೊಂದಿದ್ದು 210 ಹಾರ್ಸ್ ಪವರ್ ಮತ್ತು 800 ಎನ್ ಎಂ ಟಾರ್ಕ್ ಪವರ್ ನೀಡಲಿದೆ. ಇದರಲ್ಲಿರುವ ಎಲೆಕ್ಟ್ರಿಕ್ ಮೋಟರ್ ಲೀಥಿಯಂ ಐಯಾನ್ ಬ್ಯಾಟರಿಗಳನ್ನು ಹೊಂದಿರಲಿದೆ. ನೂತನ ಹೈಬ್ರಿಡ್ ಬಸ್ ಪ್ರತಿಗಂಟೆಗೆ 20 ಕಿ.ಮೀ. ವೇಗದವರೆಗೆ ಚಲಿಸುವಾಗ ಕೇವಲ ಎಲೆಕ್ಟ್ರಿಕ್ ಪವರ್ ಬಳಸುತ್ತದೆ. 20 ಕಿ.ಮೀ.ಗಿಂತ ವೇಗ ಹೆಚ್ಚಿಸಿಕೊಂಡಾಗ ಡೀಸೆಲ್ ಎಂಜಿನ್ ಆಕ್ಟಿವ್ ಆಗುತ್ತದೆ. ಒಟ್ಟಾರೆ ಬೆಂಗಳೂರು ರಸ್ತೆಯಲ್ಲಿ ಹೈಬ್ರಿಡ್ ಬಸ್ಸುಗಳ ಪರ್ವ ಆರಂಭವಾಗಲು ಹೆಚ್ಚು ದಿನ ಕಾಯಬೇಕಿಲ್ಲ.


Click it and Unblock the Notifications








