ಜಿಎಂ ಮೇಲೆ ವಾರೆನ್ ಬಫೆಟ್‌ಗೆ ಪ್ಯಾರ್ಗೆ ಆಗ್ಬಿಟ್ಟೈತೆ!

ಜಗತ್ತಿನ ಅಗ್ರಗಣ್ಯ ಕೋಟ್ಯಧಿಪತಿ, ಸಾಮಾಜಿಕ ಸೇವೆಗಳ ಧುರೀಣ, ಬೃಹತ್ ಹೂಡಿಕೆದಾರ ಮತ್ತು ಬರ್ಕ್‌ಷೇರ್ ಹ್ಯಾತ್ವೆ ಕಂಪನಿಯ ಸಿಇಒ ಮತ್ತು ಚೇರ್ಮನ್ ವಾರೇನ್ ಬಫೆಟ್‌ಗೆ ಅಮೆರಿಕದ ಜನರಲ್ ಮೋಟರ್ಸ್ ಮೇಲೆ ಯಾಕೋ ಸಿಕ್ಕಪಟ್ಟೆ ಪ್ರೀತಿ ಬಂದುಬಿಟ್ಟಿದೆ. ಯಾಕೆಂದರೆ ಇವರು ಜನರಲ್ ಮೋಟರ್ಸ್ ಕಂಪನಿಯ ಒಂದು ಕೋಟಿ ಷೇರುಗಳನ್ನು ಖರೀದಿಸಿದ್ದಾರೆ.

ವಾರೆನ್ ಬಫೆಟ್ 2,566 ಕೋಟಿ ಡಾಲರ್ ಪಾವತಿಸಿ ಒಂದು ಕೋಟಿ ಷೇರು ಖರೀದಿಸಿದ್ದಾರೆ. ಮೇ 16ರಂದು ಜಿಎಂ ಷೇರುಗಳು ಶೇಕಡ 1ರಷ್ಟು ಕುಸಿದು 21.42 ಡಾಲರ್ ತಲುಪಿದ ಸಮಯದಲ್ಲಿ ವಾರೆನ್ ಬಫೆಟ್ ಈ ಬೃಹತ್ ಖರೀದಿಗೆ ಕೈ ಹಾಕಿದ್ದಾರೆ. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಸಾರ್ವಜನಿಕ ಷೇರು ವಿತರಣೆ ಸಮಯದಲ್ಲಿ ಈ ಷೇರುಗಳ ಮೌಲ್ಯ 33 ಡಾಲರ್ ಆಗಿತ್ತು.

2011ರಲ್ಲಿ ಜನರಲ್ ಮೋಟರ್ಸ್ ಕಂಪನಿಯು ಚೀನಾದಲ್ಲಿ 60 ಹೊಸ ವಾಹನಗಳನ್ನು ಬಿಡುಗಡೆ ಮಾಡಿತ್ತು. ಜನರಲ್ ಮೋಟರ್ಸ್ ಕಂಪನಿಯ ಕಾರುಗಳು ಜಗತ್ತಿನಲ್ಲಿ ಪ್ರತಿ 12 ಸೆಕೆಂಡಿಗೆ ಒಂದರಂತೆ ಮಾರಾಟವಾಗುತ್ತಿವೆ. ಜನರಲ್ ಮೋಟರ್ಸ್ ಕಂಪನಿಯು ಜಗತ್ತಿನಾದ್ಯಂತ ಸುಮಾರು 11 ಜಂಟಿ ಉದ್ಯಮಗಳನ್ನು ಹೊಂದಿದೆ.

ಹೂಡಿಕೆ ಮ್ಯಾನೆಜರ್‌ಗಳಾದ Todd Combs ಮತ್ತು Ted Weschler ನೆರವಿನಿಂದ ಬರ್ಕ್‌ಷೇರ್ ಹ್ಯಾತ್ವೆ ಕಂಪನಿಯ ಮೂಲಕ ವಾರೆನ್ ಬಫೆಟ್ ಹೆಚ್ಚಿನ ಹೂಡಿಕೆಯನ್ನು ಮಾಡುತ್ತಾರೆ. ಇವರು 3 ಸಾವಿರ ಕೋಟಿ ಡಾಲರ್‌ ಆಸುಪಾಸಿನಲ್ಲೇ ಹೂಡಿಕೆ ಮಾಡುವುದು ವಿಶೇಷವಾಗಿದೆ.

Most Read Articles

Kannada
English summary
Warren Buffett(82) purchased 10 million shares of General Motors Stock. Warren Buffett paid $256.6 million for these 10 million shares.
Story first published: Friday, May 18, 2012, 16:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X